ಬೆಂಗಳೂರು: ಅಮೆಜಾನ್ (Amazaon) ಕಂಪನಿಯ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಬೆಂಗಳೂರು (Bengaluru) ಕಚೇರಿಯ ಉದ್ಯೋಗಿಗಳನ್ನ ಹೊಗಳಿ ಸೋಶಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಹಂಚಿಕೊಂಡಿದ್ದಾರೆ.
ಅಮೆಜಾನ್‌ನ ಮಾಜಿ ಕಾರ್ಯನಿರ್ವಾಹಕ ಆಡಮ್ ಬ್ರೋಡಾ ಲಿಕ್ಡ್‌ಇನ್‌ನಲ್ಲಿ ಹಾಕಿದ ಪೋಸ್ಟ್‌ನಿಂದ ಭಾರತದಲ್ಲಿ ಕೆಲಸದ ಸಂಸ್ಕೃತಿಯ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
Advertisement
ಆಡಮ್ ಬ್ರೋಡಾ ಅವರು ವಾರದಲ್ಲಿ 60 + ಗಂಟೆಗಳ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. ವಿಶೇಷವಾಗಿ ಬೆಂಗಳೂರಿನಲ್ಲಿ ನೆಲೆಸಿರುವ ತಾಂತ್ರಿಕ ತಂಡ, ಸತತವಾಗಿ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ಮಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
Advertisement
ನಾನು ಬೆಳಗ್ಗೆ 7 ಗಂಟೆಗೆ ಲಾಗ್ ಇನ್ ಮಾಡಿದಾಗ ಅವರು ಆನ್‌ಲೈನ್‌ನಲ್ಲಿರುತ್ತಾರೆ. ಬೆಳಿಗ್ಗೆ 10 ಗಂಟೆಗೆ ಸಿಬ್ಬಂದಿ ಸಭೆಗಳಿಗೆ ಹಾಜರಾಗುತ್ತಾರೆ ಮತ್ತು ಮಧ್ಯಾಹ್ನ ವಿಪಿ ಮಟ್ಟದ ವಿಮರ್ಶೆಗಳನ್ನು ಸಹ ಮಾಡುತ್ತಾರೆ. ಬೆಂಗಳೂರಿನ ಕಾಲಮಾನ ಬೆಳಗಿನ ಜಾವ 3 ಗಂಟೆಯಾಗಿದ್ದರೂ ಉತ್ಸಾಹದಿಂದ ಅವರು ಕೆಲಸ ಮಾಡುವುದನ್ನು ನೋಡಿ ನಾನು ಬೆರಗಾದೆ ಎಂದಿದ್ದಾರೆ. ಇದನ್ನೂ ಓದಿ: ಅಕಸ್ಮಾತ್ ಹುಂಡಿಗೆ ಬಿದ್ದ ಐಫೋನ್ ದೇವಸ್ಥಾನದ ಪಾಲು – ವಾಪಸ್ ಕೊಡಲ್ಲ ಎಂದ ಮಂಡಳಿ
Advertisement
ಒಂದು ವಾರದಲ್ಲಿ ಯಾವ ದೇಶದಲ್ಲಿ ಉದ್ಯೋಗಿಗಳು ಹೆಚ್ಚು ಸಮಯ ಕೆಲಸದ ಮಾಡುತ್ತಾರೆ ಎನ್ನುವುದಕ್ಕೆ ಆಡಮ್ ಬ್ರೋಡಾ ಅವರು ಲಿಕ್ಡಿನ್ ಇನ್ಫೋಗ್ರಾಫಿಕ್ ಪೋಸ್ಟ್ ಹಾಕಿದ್ದಾರೆ.
ವಾರದಲ್ಲಿ ಸರಾಸರಿ 56 ಗಂಟೆ ಕೆಲಸ ಮಾಡುವ ಮೂಲಕ ಭಾರತ (India) ಮೊದಲ ಸ್ಥಾನದಲ್ಲಿದ್ದರೆ ನೆದರ್‌ಲ್ಯಾಂಡ್ 29.8 ಗಂಟೆ ಕೆಲಸ ಮಾಡುವ ಮೂಲಕ ಕೊನೆಯ ಸ್ಥಾನದಲ್ಲಿದ್ದಾರೆ.