ಬೆಂಗಳೂರು: ಕರ್ನಾಟಕ ಚುನಾವಣೆಯಲ್ಲಿ (Karnataka Election) ದಕ್ಷಿಣ ಆಫ್ರಿಕಾದಲ್ಲಿ ಬಳಸಿದ ಇವಿಎಂ ಯಂತ್ರಗಳನ್ನು ಬಳಕೆ ಮಾಡಿಲ್ಲ ಎಂದು ಭಾರತ ಚುನಾವಣಾ ಆಯೋಗ (Election Commission of India) ಸ್ಪಷ್ಟನೆ ನೀಡಿದೆ.
ಕಾಂಗ್ರೆಸ್ (Congress) ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ (Randeep Surjewala) ಮೂಲಗಳನ್ನು ಉಲ್ಲೇಖಿಸಿ ದಕ್ಷಿಣ ಆಫ್ರಿಕಾದಲ್ಲಿ (South Africa) ಬಳಕೆ ಮಾಡಿದ ಇವಿಎಂ (EVM) ಕರ್ನಾಟಕದಲ್ಲಿ ಬಳಸಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದರು. ಇದನ್ನೂ ಓದಿ: ಈ ಬಾರಿ ದಾಖಲೆ ಮತದಾನ – ನಿಮ್ಮ ಜಿಲ್ಲೆಯಲ್ಲಿ ಎಷ್ಟು ವೋಟ್?
Advertisement
Advertisement
ಈ ದೂರಿನ ಬಗ್ಗೆ ಸ್ಪಷ್ಟನೆ ನೀಡಿದ ಆಯೋಗ, ದಕ್ಷಿಣ ಆಫ್ರಿಕಾದ ಚುನಾವಣೆಯಲ್ಲಿ ಬಳಕೆ ಮಾಡಲು ಇವಿಎಂಗಳನ್ನು ಕಳುಹಿಸಿಲ್ಲ. ವಿದೇಶಗಳಿಂದ ಇವಿಎಂಗಳನ್ನು ಆಮದು ಮಾಡಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಮಂಡ್ಯದಲ್ಲಿ 7ಕ್ಕೆ 7ರಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ: ಪುಟ್ಟರಾಜು
Advertisement
Advertisement
ಕರ್ನಾಟಕದಲ್ಲಿ ಬಳಕೆ ಮಾಡಿರುವ ಎಲ್ಲ ಇವಿಎಂ ಯಂತ್ರಗಳೂ ಹೊಸದಾಗಿವೆ. ಈಗಾಗಲೇ ಹಲವು ರಾಜ್ಯಗಳ ಚುನಾವಣೆಯಲ್ಲಿ ಭಾಗವಹಿಸಿರುವ ಕಾಂಗ್ರೆಸ್ ಆಧಾರ ರಹಿತ, ತಪ್ಪು ಮಾಹಿತಿಯಿಂದ ಕೂಡಿದ ಆರೋಪವನ್ನು ಮಾಡಿರುವುದು ಸರಿಯಲ್ಲ. ಕಾಂಗ್ರೆಸ್ ತನ್ನ ಮೂಲವನ್ನು ಬಹಿರಂಗ ಪಡಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಕೆಲಸ ಮಾಡುತ್ತಿರುವ ಆಯೋಗದ ಕೆಲಸಕ್ಕೆ ಧಕ್ಕೆ ತರುವಂತಹ ಆರೋಪ ಮಾಡಿರುವುದು ಸರಿಯಲ್ಲ ಎಂದು ಪತ್ರದ ಮೂಲಕ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.