ನವದೆಹಲಿ: ಹರಿಯಾಣದಲ್ಲಿ (Haryana Election Results) ಪಕ್ಷಕ್ಕೆ ಭಾರೀ ಹಿನ್ನಡೆಯಾದ ನಂತರ ಕಾಂಗ್ರೆಸ್ (Congress) ನಾಯಕರು ಬುಧವಾರ ಚುನಾವಣಾ ಆಯೋಗವನ್ನು ಭೇಟಿ ಮಾಡಿ, ವಿದ್ಯುನ್ಮಾನ ಮತಯಂತ್ರಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ಪಕ್ಷದ ವಕ್ತಾರ ಪವನ್ ಖೇರಾ ಅವರು, 20 ಸ್ಥಾನಗಳಲ್ಲಿ ಹ್ಯಾಕಿಂಗ್ ನಡೆದಿದೆ ಎಂದು ಆರೋಪಿಸಿದ್ದಾರೆ. ಏಳು ಸ್ಥಾನಗಳಿಗೆ ಸಂಬಂಧಿಸಿದಂತೆ ಅವರು ಸಾಕ್ಷ್ಯಚಿತ್ರ ಸಾಕ್ಷ್ಯವನ್ನು ಸಲ್ಲಿಸಿದ್ದಾರೆ. ಇನ್ನುಳಿದ 13 ಕ್ಷೇತ್ರಗಳಿಗೆ ಸಂಬಂಧಿಸಿದ ದಾಖಲೆಗಳನ್ನು 48 ಗಂಟೆಯೊಳಗೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವೈಜಾಗ್ ಸ್ಟೀಲ್ ಪುನಶ್ಚೇತನ ವಿಚಾರ – ನಿರ್ಮಲಾ ಸೀತಾರಾಮನ್, ನಾಯ್ಡು ಜೊತೆಗೆ ಹೆಚ್‌ಡಿಕೆ ಚರ್ಚೆ
ಕರ್ನಾಲ್, ದಬ್ವಾಲಿ, ರೇವಾರಿ, ಪಾಣಿಪತ್ ಸಿಟಿ, ಹೊಡಾಲ್, ಕಲ್ಕಾ ಮತ್ತು ನರ್ನಾಲ್‌ನಲ್ಲಿ ಹ್ಯಾಕಿಂಗ್ ನಡೆದಿರುವ ಬಗ್ಗೆ ಪಕ್ಷವು ಪುರಾವೆಗಳನ್ನು ಸಲ್ಲಿಸಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಎಲ್ಲಾ ಮತಯಂತ್ರಗಳನ್ನು ಸೀಲ್ ಮಾಡಿ ಮತ್ತು ಸುರಕ್ಷಿತವಾಗಿರಿಸುವಂತೆ ನಾವು ವಿನಂತಿಸಿದ್ದೇವೆ ಎಂದು ಖೇರಾ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದೊಂದು ಆಘಾತಕಾರಿ ಫಲಿತಾಂಶ. ಎಲ್ಲರೂ ಕಾಂಗ್ರೆಸ್ ಸರ್ಕಾರ ರಚಿಸುತ್ತದೆ ಎಂದು ಹೇಳಿದ್ದರು ಎಂದು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಹೇಳಿದ್ದಾರೆ. ಇದನ್ನೂ ಓದಿ: ಮತ ಎಣಿಕೆಯಲ್ಲಿ ಅಕ್ರಮ, ಆಯೋಗಕ್ಕೆ ದೂರು ನೀಡುತ್ತೇವೆ: ರಾಹುಲ್ ಗಾಂಧಿ
ಅಂಚೆ ಮತಪತ್ರಗಳನ್ನು ತೆರೆದಾಗ ಕಾಂಗ್ರೆಸ್ ಯಾವಾಗಲೂ ಗೆಲ್ಲುತ್ತದೆ. ಆದರೆ ವಿದ್ಯುನ್ಮಾನ ಮತಯಂತ್ರಗಳು ಅಥವಾ ಇವಿಎಂಗಳಿಂದ ಮತಗಳ ಎಣಿಕೆ ಪ್ರಾರಂಭವಾದ ನಂತರ ಸ್ಲೈಡಿಂಗ್ ಪ್ರಾರಂಭಿಸುತ್ತದೆ ಎಂದು ಹೂಡಾ ಆರೋಪಿಸಿದ್ದಾರೆ.
ಹರಿಯಾಣದ 90 ಸ್ಥಾನಗಳ ಪೈಕಿ ಬಿಜೆಪಿ 48 ಹಾಗೂ ಕಾಂಗ್ರೆಸ್ 37 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ. ರಾಜ್ಯದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ.