Connect with us

Cricket

ಕಾಲಿಗೆ ಬಾಲ್ ಬಿದ್ದು ಗಾಯಗೊಂಡ್ರೂ 140 ವರ್ಷ ಹಿಂದಿನ ದಾಖಲೆ ಮುರಿದ, ಆದ್ರೆ ಡಬಲ್ ಸೆಂಚುರಿ ಮಿಸ್ಸಾಯ್ತು!

Published

on

ಬೆಂಗಳೂರು: ವೆಸ್ಟ್ ಇಂಡೀಸ್ ಆರಂಭಿಕ ಆಟಗಾರ ಎವಿನ್ ಲೂಯಿಸ್ ಬುಧವಾರ ವಿಚಿತ್ರ ವಿಶ್ವದಾಖಲೆ ಮಾಡಿದ್ದಾರೆ. ಜೊತೆಗೆ ಒನ್ ಡೇ ಮ್ಯಾಚ್ ನಲ್ಲಿ ಡಬಲ್ ಸೆಂಚುರಿ ಬಾರಿಸುವ ಅವಕಾಶವನ್ನು ಸ್ವಲ್ಪದರಲ್ಲೇ ಮಿಸ್ ಮಾಡ್ಕೊಂಡಿದ್ದಾರೆ. 140 ವರ್ಷ ಹಿಂದಿನ ವಿಶ್ವ ದಾಖಲೆಯನ್ನು ಲೂಯಿಸ್ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಗಾಯಗೊಂಡು ಕ್ರೀಸ್ ಬಿಡುವುದಕ್ಕೂ ಮುನ್ನ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.

ಇಂಗ್ಲೆಂಡ್ ವಿರುದ್ಧ ಬುಧವಾರ ಓವಲ್ ನಲ್ಲಿ ನಡೆದ ಪಂದ್ಯದಲ್ಲಿ ಗಾಯಾಳುವಾಗುವುದಕ್ಕೂ ಮುನ್ನ 130 ಎಸೆತಗಳಲ್ಲಿ 176 ರನ್ ಗಳಿಸಿದ್ದರು. ಆದರೆ 46ನೇ ಓವರ್ ನಲ್ಲಿ ಜಾಕ್ ಬಾಲ್ ಎಸೆದ ಯಾರ್ಕರ್ ಬಾಲ್ ಲೂಯಿಸ್ ಕಾಲಿಗೆ ಬಲವಾಗಿ ಬಡಿಯಿತು. ಈ ನೋವು ತಾಳಲಾರದೆ ಲೂಯಿಸ್ ಕ್ರೀಸಲ್ಲೇ ಕುಸಿದು ಬಿದ್ದರು. ತಂಡದ ಫಿಸಿಯೋಥೆರಪಿಸ್ಟ್ ಬಂದರೂ ನೋವು ಕಮ್ಮಿಯಾಗಲಿಲ್ಲ. ಕೊನೆಗೆ ಲೂಯಿಸ್ ರನ್ನು ಸ್ಟ್ರೆಚರ್ ಬಳಸಿ ಕ್ರೀಡಾಂಗಣದಿಂದ ಕರೆದೊಯ್ದರು. ಇದರಿಂದಾಗಿ ದ್ವಿಶತಕ ಬಾರಿಸುವ ಅವಕಾಶದಿಂದ ಲೂಯಿಸ್ ವಂಚಿತರಾಗಬೇಕಾಯಿತು.

ಹಿಂದಿನ ದಾಖಲೆ: ಈ ಹಿಂದೆ 1877ರಲ್ಲಿ ಆಸ್ಟ್ರೇಲಿಯಾದ ಚಾರ್ಲ್ಸ್ ಬ್ಯಾನರ್ ಮ್ಯಾನ್ ಇಂಗ್ಲೆಂಡ್ ವಿರುದ್ಧ 165 ರನ್ ಗಳಿಸಿ ರಿಟೈರ್ಡ್ ಹರ್ಟ್ ಆಗಿದ್ದರು. ಇದು ಈವರೆಗಿನ ಗರಿಷ್ಠ ಮೊತ್ತವಾಗಿತ್ತು.

ಒಟ್ಟು 130 ಬಾಲ್ ಎದುರಿಸಿದ ಲೂಯಿಸ್ 7 ಸಿಕ್ಸರ್ ಹಾಗೂ 17 ಬೌಂಡರಿಗಳ ನೆರವಿನಿಂದ 176 ರನ್ ಗಳಿಸಿದರು. ನಿಗದಿತ 50 ಓವರ್ ಗಳಲ್ಲಿ 356 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ಬ್ಯಾಟಿಂಗ್ ಆರಂಭಿಸಿತು. ಆದರೆ ಪಂದ್ಯದ ನಡುವೆ ಮಳೆ ಸುರಿಯಿತು. ಇದರಿಂದಾಗಿ ಡಕ್‍ವರ್ಥ್ ಲೂಯಿಸ್ ನಿಯಮದಡಿ ಇಂಗ್ಲೆಂಡ್ 6 ರನ್ ಗಳಿಂದ ಗೆಲುವು ಸಾಧಿಸಿತು. ಈ ವೇಳೆ ಇಂಗ್ಲೆಂಡ್ 35.1 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿತ್ತು.

Click to comment

Leave a Reply

Your email address will not be published. Required fields are marked *

www.publictv.in