ಬೆಂಗಳೂರು: ಬಿಗ್ ಬಾಸ್ ಸೀಸನ್- 7ರಲ್ಲಿ ಮತ್ತೊಬ್ಬ ಸ್ಪರ್ಧಿ ಆರ್.ಜೆ ಪೃಥ್ವಿ ರೀ-ಎಂಟ್ರಿ ಕೊಟ್ಟಿದ್ದಾರೆ.
ಈ ಮೊದಲು ಪೃಥ್ವಿ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದರು. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಕೆಲವೇ ವಾರಗಳಲ್ಲಿ ಪೃಥ್ವಿ ಎಲಿಮಿನೇಟ್ ಆಗಿದ್ದರು. ಇದೀಗ ಅವರು ಮನೆಗೆ ಮತ್ತೆ ರೀ-ಎಂಟ್ರಿ ಕೊಟ್ಟಿದ್ದು, ಅವರನ್ನು ನೋಡಿ ಸ್ಪರ್ಧಿಗಳು ಶಾಕ್ ಆದರು. ಪೃಥ್ವಿ ಟಾಸ್ಕ್ ಸಲುವಾಗಿ ಒಂದು ದಿನ ಮಟ್ಟಕ್ಕೆ ಬಿಗ್ ಬಾಸ್ ಮನೆ ಪ್ರವೇಶಿ ಸ್ಪರ್ಧಿಗಳ ಜೊತೆ ಸಮಯ ಕಳೆದಿದ್ದಾರೆ.
Advertisement
Advertisement
ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಬಿಗ್ ಬಾಸ್ ಶಾಲೆ ಎಂಬ ಟಾಸ್ಕ್ ನೀಡಿತ್ತು. ಈ ಟಾಸ್ಕ್ ನಲ್ಲಿ ಸ್ಪರ್ಧಿಗಳು ನರ್ಸರಿ ಮಕ್ಕಳಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಂತೆ ನಟಿಸಬೇಕಿತ್ತು. ಪ್ರತಿ ಒಂದು ವಿಷಯಕ್ಕೆ ಸ್ಪರ್ಧಿಗಳೇ ಟೀಚರ್ ಆಗಿ ಬರುತ್ತಿದ್ದರು. ಶುಕ್ರವಾರ ಈ ಟಾಸ್ಕ್ ನ ಕೊನೆಯ ದಿನವಾಗಿದ್ದು, ಸ್ಪರ್ಧಿಗಳಿಗೆ ಪರೀಕ್ಷೆ ನೀಡಲಾಯಿತು. ಪರೀಕ್ಷೆಗೆ ಮೇಲ್ವಿಚಾರಕರಾಗಿ ಆರ್.ಜೆ ಪೃಥ್ವಿ ಬಿಗ್ ಬಾಸ್ ಮನೆಗೆ ಬಂದಿದ್ದರು.
Advertisement
ಪರೀಕ್ಷೆ ಎಲ್ಲಾ ಮುಗಿದ ಮೇಲೆ ಪೃಥ್ವಿ ಸ್ಪರ್ಧಿಗಳಿಗೆ ಆಟ ಕೂಡ ಆಡಿಸಿದ್ದರು. ನಂತರ ಬಿಗ್ ಬಾಸ್ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಸ್ಪರ್ಧಿಗಳಿಗೆ ಟ್ರೋಫಿಯನ್ನು ನೀಡಿದ್ದರು. ಇದೇ ವೇಳೆ ಸ್ಪರ್ಧಿಗಳು ಪ್ರಾರ್ಥನಾ ಗೀತೆ, ಭಾಷಣ ಹಾಗೂ ಡ್ಯಾನ್ಸ್ ಮಾಡುವ ಮೂಲಕ ಎಲ್ಲರಿಗೂ ಮನರಂಜನೆ ನೀಡಿದ್ದರು. ಆ ಎಲ್ಲಾ ಕಾರ್ಯಕ್ರಮ ಮುಗಿದ ನಂತರ ಬಿಗ್ ಬಾಸ್ ಪೃಥ್ವಿಯನ್ನು ಕಳುಹಿಸಿಕೊಡುವಂತೆ ಹೇಳಿದ್ದರು. ಆಗ ಎಲ್ಲಾ ಸ್ಪರ್ಧಿಗಳು ಪೃಥ್ವಿ ಅವರಿಗೆ ಬೀಳ್ಕೊಡುಗೆ ನೀಡಿದ್ದರು.