ಬೆಂಗಳೂರು: ರಾಜರಾಜೇಶ್ವರಿ ನಗರದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ಮುನಿರತ್ನ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ.
ತಂದೆ ಮುನಿರತ್ನ ಚುನಾವಣೆಯಲ್ಲಿ ಗೆದ್ದ ಖುಷಿಯಲ್ಲಿ ಮಾತನಾಡಿದ ಅವರ ಮಗಳು ಸಿಂಧೂರಿ, “ಇದು ನಮಗೆ ಸಂತೋಷದ ವಿಷಯ. ಚುನಾವಣೆ ಮುಂದೂಡಿದ್ದು, ಒಳೆಯದೇ ಆಯಿತ್ತು. ಆಗುವುದೆಲ್ಲ ಒಳ್ಳೆಯದ್ದಕ್ಕೆ ಆಗುತ್ತದೆ. ನಮ್ಮ ವಿರೋಧ ಪಕ್ಷದವರು ಆಗಲಿ, ಬೇರೆಯವರೇ ಆಗಲಿ ಅವರು ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಅವರನ್ನು ನಾನು ಧನ್ಯವಾದ ತಿಳಿಸಬೇಕು” ಎಂದು ಹೇಳಿದರು.
Advertisement
Advertisement
ನಾನು ಈಗ ತಾನೇ ನನ್ನ ತಂದೆ ಜೊತೆ ಮಾತನಾಡಿಕೊಂಡು ಬಂದಿದ್ದೇನೆ. ಕೆಟ್ಟ ವಿಚಾರಕ್ಕಾಗಿ ಇಡೀ ದೇಶ ಆರ್.ಆರ್ ನಗರದತ್ತ ತಿರುಗಿ ನೋಡಿದೆ. ಈಗ ಒಳ್ಳೆಯ ವಿಚಾರಕ್ಕಾಗಿ ದೇಶ ಆರ್.ಆರ್ ನಗರದತ್ತ ತಿರುಗಿ ನೋಡಬೇಕು. ಆರ್ ಆರ್ ನಗರವನ್ನು ನೀವು ಆ ರೀತಿ ಮಾಡಬೇಕೆಂದು ನಾನು ನನ್ನ ತಂದೆಯ ಹತ್ತಿರ ಹೇಳಿದ್ದೇನೆ. ನನ್ನ ತಂದೆಯ ಮೇಲೆ ನನಗೆ ನಂಬಿಕೆ ಇದೆ. ಅವರು ಈ ಕೆಲಸವನ್ನು ಮಾಡುತ್ತಾರೆ ಎಂದು ಸಿಂಧೂರಿ ತಿಳಿಸಿದ್ದಾರೆ.
Advertisement
2013ರ ಚುನಾವಣೆಯಲ್ಲಿ ಮುನಿರತ್ನ 18,813 ಮತಗಳ ಅಂತರದಿಂದ ಗೆದ್ದಿದ್ದರು. ಮುನಿರತ್ನ 71,064 ಮತಗಳನ್ನು ಪಡೆದಿದ್ದರೆ, ಜೆಡಿಎಸ್ ತಿಮ್ಮನಂಜಯ್ಯ 51,251 ಮತಗಳನ್ನು ಪಡೆದಿದ್ದರು. ಬಿಜೆಪಿಯ ಎಂ ಶ್ರೀನಿವಾಸ್ ಗೆ 50,726 ಮತಗಳು ಬಿದ್ದಿತ್ತು.