ನದಿ, ಕಣಿವೆ, ಕಲ್ಲುಬಂಡೆಗಳು, ಕೋಟೆ, ಉಗ್ರಾಣ, ಪುಷ್ಕರಿಣಿ, ಸೂರ್ಯೋದಯ, ಸೂರ್ಯಾಸ್ತಮಾನ, ಬೋಟಿಂಗ್, ದೇವಾಲಯ ಎಲ್ಲವನ್ನು ಒಂದೇ ಕಡೆ ನೋಡಬೇಕೇ? ಹಾಗಾದರೆ ನೀವು ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿರುವ ಗಂಡಿಕೋಟ(Gandikota) ಸ್ಥಳಕ್ಕೆ ಹೋಗಬೇಕು.
‘Grand Canyon of India’ ಎಂದೇ ಹೆಸರಾಗಿರುವ ಇಲ್ಲಿ ಪೆನ್ನಾರ್ ನದಿ ಹರಿಯುತ್ತಿದ್ದು ಸುತ್ತಲು ಕಣಿವೆ ಇದೆ. ನೀರು ಹತ್ತಿರದಲ್ಲೇ ಇರುವ ಕಾರಣ ವಿಜಯನಗರದ ಸಾಮಂತ ರಾಜನಾಗಿದ್ದ ಕುಮಾರ ತಿಮ್ಮಾ ಇಲ್ಲಿ ಕೋಟೆ ಕಟ್ಟಿದ್ದು ಈಗಲೂ ನೋಡಬಹುದು.
Advertisement
Advertisement
ಕೋಟೆಯಲ್ಲಿ ಏನಿದೆ?
50 ಅಡಿ ಎತ್ತರ, ಸುಮಾರು 7-8 ಕಿಮೀ ಸುತ್ತಳತೆಯ ಗಟ್ಟಿಯಾದ ರಕ್ಷಣಾ ಗೋಡೆಯಿದೆ. ಕಲ್ಲುಗಳನ್ನು ಬೆಲ್ಲ ಮತ್ತು ಸುಣ್ಣ ಬಳಸಿ ಕಟ್ಟಲಾಗಿದೆ. ಪ್ರವೇಶದ್ವಾರ ದಾಟಿ ಮುಂದೆ ಹೋದರೆ ಮದ್ದುಗುಂಡು ಸಂಗ್ರಹಾಗಾರ, ಉಗ್ರಾಣಗಳು, ಜೈಲು, ಮಾಧವ ಮತ್ತು ರಂಗನಾಥ ದೇವಸ್ಥಾನ, ರಾಣಿ ಮಹಲ್, ಪುಷ್ಕರಣಿ, ಚಾರ್ ಮಿನಾರ್, ಜುಮ್ಲಾ ಮಸೀದಿ ಇದೆ. ಇದನ್ನೂ ಓದಿ: ಬೈಕ್ ಪ್ರವಾಸಕ್ಕೆ ಯಾವ ಅಪ್ಲಿಕೇಶನ್ ಉತ್ತಮ?
Advertisement
Advertisement
ಮೇಲೆ ತಿಳಿಸಿದ ಜೊತೆ ಜನರನ್ನು ಹೆಚ್ಚು ಸೆಳೆಯುವುದು ಇಲ್ಲಿನ ಕಲ್ಲು ಬಂಡೆಗಳು ಮತ್ತು ಕಣಿವೆಗಳು. ಸೂರ್ಯೋದಯ ಮತ್ತು ಸೂರ್ಯಾಸ್ತಮಾನ ಎರಡನ್ನು ಕಣ್ತುಂಬಿಕೊಳ್ಳುವ ಕಾರಣ ಇಲ್ಲಿಗೆ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ. ಫೋಟೋಗ್ರಫಿಗೆ ಬೇಕಾದ ಎಲ್ಲ ಪೂರಕ ಅಂಶಗಳು ಒಂದೇ ಕಡೆ ಸಿಗುವ ಕಾರಣ ಫೋಟೋಗ್ರಾಫರ್‌ಗಳು ಸಹ ಜಾಸ್ತಿ ಸಂಖ್ಯೆಯಲ್ಲಿ ಬರುತ್ತಾರೆ. ಎಲ್ಲವೂ ಚೆನ್ನಾಗಿದ್ದರೂ ಇಲ್ಲಿ ರಾತ್ರಿ ತಂಗಲು ಹೆಚ್ಚಿನ ವ್ಯವಸ್ಥೆ ಇಲ್ಲ.
ಹತ್ತಿರದಲ್ಲಿ ಆಂಧ್ರಪ್ರದೇಶ ಸರ್ಕಾರ ಹರಿತಾ ಹೋಟೆಲಿನಲ್ಲಿ ಎಸಿ ರೂಮ್ ವ್ಯವಸ್ಥೆ ಇದೆ. ರೂಮ್ ಸಿಗದೇ ಇದ್ದರೂ ಟೆಂಟ್‌ನಲ್ಲಿ ಮಲಗಬಹುದು. ಹರಿತಾ ಮೂಲಕ ಮೊದಲೇ ಬುಕ್ ಮಾಡಿ ತಿಳಿಸಿದರೆ ಟೆಂಟ್ ಹಾಕಿ ಅವರೇ ವ್ಯವಸ್ಥೆ ಮಾಡಿಕೊಡುತ್ತಾರೆ.
ಎಸಿ ರೂಮ್ ಗಳಿಗೆ ಹೋಲಿಸಿದರೆ ಟೆಂಟ್ ದರ ಬಹಳ ಕಡಿಮೆ. ಇದರಲ್ಲಿ ಸಂಜೆಯ ತಿಂಡಿ, ರಾತ್ರಿಯ ಊಟ, ಬೆಳಗ್ಗೆ ತಿಂಡಿಯೂ ಬರುತ್ತದೆ. ರಾತ್ರಿ ಊಟ ಟೆಂಟ್ ಇದ್ದ ಸ್ಥಳಕ್ಕೆ ಬರುತ್ತದೆ. ನಿಮಗೆ ಸಸ್ಯಾಹಾರ ಬೇಕೋ, ಮಾಂಸಾಹಾರ ಬೇಕೋ ಎನ್ನುವುದನ್ನು ಮೊದಲೇ ತಿಳಿಸಬೇಕಾಗುತ್ತದೆ.
– ಅಶ್ವಥ್ ಸಂಪಾಜೆ