ಎಲ್ಲರ ಚಿತ್ತ ಬಜೆಟ್‌ನತ್ತ – ಮುಜರಾಯಿ ಇಲಾಖೆಗೆ ಸಿಗುತ್ತಾ ಭರಪೂರ ಅನುದಾನ?

Public TV
2 Min Read
Karnataka Budget Ramalinga Reddy Muzrai Department

ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ (Siddaramaiah) ದಾಖಲೆಯ 16ನೇ ಬಜೆಟ್ (Karnataka Budget) ಮಂಡಿಸುತ್ತಿದ್ದು, ಎಲ್ಲರ ಚಿತ್ತ ಬಜೆಟ್‌ನತ್ತ ತಿರುಗಿದೆ.

ಈ ಬಾರಿ ಸಿಎಂ 4 ಲಕ್ಷ ಕೋಟಿಯ ಬಜೆಟ್ ಮಂಡಿಸುವ ಸಾಧ್ಯತೆಯಿದ್ದು, ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಬಜೆಟ್‌ನಲ್ಲಿ ಮುಜರಾಯಿ ಇಲಾಖೆಗೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಾಹುಕಾಲ ಆರಂಭಕ್ಕೂ ಮೊದಲು ಬಜೆಟ್‌ ಮಂಡಿಸಲಿದ್ದಾರೆ ಸಿದ್ದರಾಮಯ್ಯ

Muzrai Department

ರಾಮಲಿಂಗಾ ರೆಡ್ಡಿ ಬೇಡಿಕೆಗಳೇನು?
ಬೆಂಗಳೂರಿನ ಕೆ.ಆರ್ ಸರ್ಕಲ್‌ನಲ್ಲಿ ನಿರ್ಮಿಸುತ್ತಿರುವ ಧಾರ್ಮಿಕ ಸೌಧ ಕಾಮಗಾರಿಗೆ 25 ಕೋಟಿ ರೂ. ಒದಗಿಸಲು ಮನವಿ ಮಾಡಲಾಗಿದೆ. ಮೆಜೆಸ್ಟಿಕ್‌ನ ಕೆಂಪೇಗೌಡ ವೃತ್ತದಲ್ಲಿ ಬಂಡಿಶೇಷಮ್ಮ ವಿದ್ಯಾರ್ಥಿ ನಿಲಯ ಹಾಗೂ ಸಂಕೀರ್ಣ ನಿರ್ಮಿಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲು ಚಿಂತಿಸಲಾಗಿದೆ. ರಾಜ್ಯದಿಂದ ವೈಷ್ಣೋದೇವಿ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಸರ್ಕಾರದಿಂದ ತಲಾ 5,000 ಸಹಾಯಧನ ಒದಗಿಸಲು 1 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಆಕ್ಸ್‌ಫರ್ಡ್‌ ವಿವಿ ಬ್ಲಾಗ್‌ನಲ್ಲಿ ಕರ್ನಾಟಕ ಮಾದರಿ ಶ್ಲಾಘನೆ – ರಾಜ್ಯಪಾಲರ ಭಾಷಣದ ಅಸಲಿಯತ್ತನ್ನು ಬಯಲು ಮಾಡಿದ ಅಶೋಕ್‌

ಕರ್ನಾಟಕ ದೇವಾಲಯಗಳ ಅಭಿವೃದ್ಧಿ ನಿಗಮ ಸ್ಥಾಪಿಸಲು ಅನುದಾನ ಬಿಡುಗಡೆ ಮಾಡುವಂತೆ ರಾಮಲಿಂಗಾ ರೆಡ್ಡಿ ಆಗ್ರಹಿಸಿದ್ದಾರೆ. ದೇವಾಲಯ ಹಾಗೂ ಹೊರರಾಜ್ಯ ಛತ್ರಗಳಲ್ಲಿ ಲಭ್ಯವಿರುವ ಮೂಲಭೂತ ಸೌಕರ್ಯ ಒದಗಿಸಲು ಅನುದಾನ ಬಿಡುಗಡೆಗೆ ಕೋರಿಕೆ ಸಲ್ಲಿಸಿದ್ದು, ದೇವಾಲಯಗಳ ಪ್ರಸಾದವನ್ನು ಮನೆಮನೆಗೆ ಆನ್‌ಲೈನ್‌ನಲ್ಲಿ ತಲುಪಿಸುವ ಯೋಜನೆ ಮಾಡಲಾಗಿದೆ. ಮೇಲುಕೋಟೆ ಚೆಲುವ ನಾರಾಯಣಸ್ವಾಮಿ ದೇವಾಲಯದಲ್ಲಿ ಧ್ವನಿ ಹಾಗೂ ಬೆಳಕಿನ ಲೇಸರ್ ಶೋ ಹಾಗೂ ಭೂ ವರಹಾ ಯೋಜನೆಗಾಗಿ ಅಂದರೇ ದೇವಾಲಯಗಳ ಸ್ಥಿರಾಸ್ತಿ ದಾಖಲೀಕರಿಸಲು ಅನುದಾನ ಬಿಡುಗಡೆ ಮಾಡಲು ಕೋರಲಾಗಿದೆ. ಇದನ್ನೂ ಓದಿ: ಶ್ರೀಕೃಷ್ಣನ ಪೂಜಾಧಿಕಾರ ಶಿರೂರು ಮಠಕ್ಕೆ- ಅಕ್ಕಿ ಮುಹೂರ್ತದಲ್ಲಿ ಒಂದಾದ ಅಷ್ಟಮಠ

ಇನ್ನು ಕೆಎಸ್‌ಆರ್‌ಟಿಸಿ ಸಹಯೋಗದೊಂದಿಗೆ ರಿಯಾಯಿತಿ ದರದಲ್ಲಿ ಕರ್ನಾಟಕ ಧಾರ್ಮಿಕ ಪ್ರವಾಸ ಯೋಜನೆಗೆ ಅನುದಾನದ ಅವಶ್ಯಕತೆ ಇದೆ. ರಾಜ್ಯದ ಸಿ ವರ್ಗದ ದೇವಾಲಯಗಳಿಗೆ ದಿವ್ಯಕಿರಣ, ಗುಡಿ ಸಂಪರ್ಕ ಹಾಗೂ ಗುಡಿ ಜಲ ಯೋಜನೆಗಳ ಅನುಷ್ಟಾನಕ್ಕೆ ಕೋರಿಕೆ ಸಲ್ಲಿಸಲಾಗಿದೆ. ವಾರ್ಷಿಕವಾಗಿ ಕನಿಷ್ಟ ತಸ್ತೀಕ್ ಮೊತ್ತ ಹೆಚ್ಚಿಸಲು ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಾಗಲಕೋಟೆ ಡಿಸಿ ಕಚೇರಿ ಎದುರು ಹಾವು ಪ್ರತ್ಯಕ್ಷ – ಹೌಹಾರಿದ ನೌಕರರು

Share This Article