ಮೈಸೂರು: ಹಿಜಬ್ ವಿಚಾರದಲ್ಲಿ ಸರ್ಕಾರದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.
Advertisement
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿ ಇದೆ. ನ್ಯಾಯಾಲಯ ಹಾಗೂ ಸರ್ಕಾರದ ನಿರ್ಧಾರಕ್ಕೆ ಎಲ್ಲರೂ ಕಠಿಬದ್ಧರಾಗಿ ಇರಬೇಕು. ಇದರಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಹಿಜಬ್‍ಗೆ ಅವಕಾಶ ನೀಡಿ ಎಂದು ಪ್ರತಿಭಟಿಸುತ್ತಿದ್ದ 58 ವಿದ್ಯಾರ್ಥಿಗಳು ಸಸ್ಪೆಂಡ್!
Advertisement
ಟಿಪ್ಪು ಎಕ್ಸ್‌ಪ್ರೆಸ್‌ಗೆ ಚಾಮರಾಜ ಒಡೆಯರ್ ಮರುನಾಮಕರಣ ಮಾಡುವ ವಿಚಾರದ ಕುರಿತು ಮಾತನಾಡಿ, ರೈಲ್ವೆ ಕ್ಷೇತ್ರಕ್ಕೆ ಚಾಮರಾಜ ಒಡೆಯರ್ ಕೊಡುಗೆ ಅಪಾರ. ಒಡೆಯರ್ ಹೆಸರು ಪ್ರಸ್ತಾಪವಾಗಿರುವುದೇ ಸಂತಸದ ವಿಷಯ. ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ಸಮ್ಮತ. ಅವರ ಕಾರ್ಯವನ್ನು ಮೆಚ್ಚಿ ಸಂಸದರು ಅವರ ಅಭಿಪ್ರಾಯ ಹೇಳಿದ್ದಾರೆ ಎಂದು ತಿಳಿಸಿದರು.
Advertisement
Advertisement
ಹಿಜಬ್ ವಿವಾದ ದಿನೇ ದಿನೆ ತೀವ್ರತೆ ಪಡೆದುಕೊಳ್ಳುತ್ತಿದೆ. ವಿದ್ಯಾರ್ಥಿಗಳು ತಮ್ಮ ಹಕ್ಕಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಿಜಬ್ ಪ್ರಕರಣವನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಮಧ್ಯಂತರ ಆದೇಶ ಹೊರಡಿಸಿದ್ದರೂ ವಿದ್ಯಾರ್ಥಿಗಳು ಪಟ್ಟು ಬಿಟ್ಟಿಲ್ಲ. ಇದನ್ನೂ ಓದಿ: ಹೈಕೋರ್ಟ್ ಮಧ್ಯಂತರ ಆದೇಶ ಪಾಲಿಸಿ – ಅಂಜುಮನ್ ಸಂಸ್ಥೆಯಿಂದ ಮನವಿ