ಮುಂಬೈ: 2011ರ ವಿಶ್ವಕಪ್ ಅನ್ನು ಭಾರತ ಗೆಲ್ಲಲು ಎಂ ಎಸ್ ಧೋನಿಯೇ ಮುಖ್ಯ ಕಾರಣ ಎಂದು ಭಾವಿಸುವ ವ್ಯಕ್ತಿಗಳಿಗೆ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ತಿರುಗೇಟು ನೀಡಿದ್ದಾರೆ.
2011 ರಲ್ಲಿ ತವರಿನಲ್ಲಿ ನಡೆದ ವಿಶ್ವಕಪ್‍ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹರ್ಭಜನ್, ಭಾರತದ ಗಮನಾರ್ಹ ವಿಶ್ವಕಪ್ ಗೆಲುವಿಗೆ ಧೋನಿಗೆ ಮಾತ್ರ ಮನ್ನಣೆ ನೀಡುವುದು ಅಸಮರ್ಥನೀಯ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: 4 ತಿಂಗಳ ಕಾಲ ಕ್ರಿಕೆಟ್‍ನಿಂದ ಹೊರಗುಳಿಯಬೇಕಾಗಿದೆ ದೀಪಕ್ ಚಹರ್ – ಟಿ20 ವಿಶ್ವಕಪ್‍ಗೂ ಡೌಟ್
Advertisement
Advertisement
ದೆಹಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ 2022 ಪಂದ್ಯದ ಆರಂಭದ ಮೊದಲು ಮಾತನಾಡಿದ ಅವರು, ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಾಗ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಿತು ಎಂದು ಶೀರ್ಷಿಕೆ ಬರುತ್ತದೆ. ಆದರೆ 2011 ರ ವಿಶ್ವಕಪ್ ಜಯಿಸಿದ್ದಾಗ ಎಲ್ಲರೂ ಮಹೇಂದ್ರ ಸಿಂಗ್ ಧೋನಿ ವಿಶ್ವಕಪ್ ಗೆಲ್ಲಿಸಿದ್ದಾರೆ ಎಂದು ಹೊಗಳುತ್ತಾರೆ. ಹಾಗಾದರೆ ಉಳಿದ 10 ಆಟಗಾರರು ಅಲ್ಲಿಗೆ ಲಸ್ಸಿ ಕುಡಿಯಲು ಹೋಗಿದ್ರಾ? ಹಾಗಾದರೆ ಮಾಜಿ ಬ್ಯಾಟರ್ ಗೌತಮ್ ಗಂಭೀರ್ ಏನು ಮಾಡಿದರು? ಕ್ರಿಕೆಟ್ ಒಂದು ಟೀಮ್ ಗೇಮ್. ಒಂದು ತಂಡದ 7-8 ಆಟಗಾರರು ಕೂಡಿ ಆಡಿದಾಗ ಮಾತ್ರ ಗೆಲ್ಲಲು ಸಾಧ್ಯ ಎಂದಿದ್ದಾರೆ. ಇದನ್ನೂ ಓದಿ: ಜ್ಯೂನಿಯರ್ ಎಬಿಡಿ ಅಬ್ಬರದಾಟ ವ್ಯರ್ಥ – ಮುಂಬೈ ವಿರುದ್ಧ ಪಂಜಾಬ್‍ಗೆ 12 ರನ್‌ಗಳ ಜಯ
Advertisement
Advertisement
2011ರಲ್ಲಿ ಭಾರತ ತಂಡವು ಶ್ರೀಲಂಕಾ ತಂಡವನ್ನು ಬಗ್ಗು ಬಡಿದು ವಿಶ್ವಕಪ್ ಗೆದ್ದಿತ್ತು. ಮೊದಲ ಬ್ಯಾಟಿಂಗ್ ಮಾಡಿದ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 274 ರನ್ ಹೊಡೆದರೆ ಭಾರತ 48.2 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 277 ರನ್ ಹೊಡೆಯುವ ಮೂಲಕ 6 ವಿಕೆಟ್‍ಗಳ ಜಯ ಸಾಧಿಸಿತ್ತು.