ಬೆಂಗಳೂರು: ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ. ಎಲ್ಲರಿಗೂ ಹೈಕಮಾಂಡ್ ತೀರ್ಮಾನ ಅನ್ವಯ ಆಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಚಿವ ರಾಜಣ್ಣ, ಡಿಸಿಎಂ ಡಿಕೆಶಿ ನಡುವೆ ಮಾತಿನ ಸಮರ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಚಿವ ರಾಜಣ್ಣ ಅವರ ಅಭಿಪ್ರಾಯ ಹೇಳಿದ್ದಾರೆ. ಡಿ.ಕೆ ಶಿವಕುಮಾರ್ ಅವರ ಅಭಿಪ್ರಾಯ ಹೇಳಿದ್ದಾರೆ. ಅದರ ಬಗ್ಗೆ ನಾನು ಮಾತಾಡೋಕೆ ಹೋಗೊಲ್ಲ. ಹೈಕಮಾಂಡ್ ಅಂತಿಮವಾಗಿ ತೀರ್ಮಾನ ಮಾಡಲಿದೆ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ. ನನ್ನನ್ನು ಸೇರಿದಂತೆ ಎಲ್ಲರೂ ಹೈಕಮಾಂಡ್ ತೀರ್ಮಾನ ಅನ್ವಯ ಆಗುತ್ತದೆ ಅಂತ ಸ್ಪಷ್ಟಪಡಿಸಿದರು.
ನಗರಾಭಿವೃದ್ಧಿ ವ್ಯಾಪ್ತಿಯಲ್ಲಿ ಬಿ ಖಾತಾ ಅಭಿಯಾನ
ನಗರ ಪ್ರದೇಶ, ಮುನಿಸಿಪಾಲಿಟಿಗಳಲ್ಲಿ, ನಗರಾಭಿವೃದ್ಧಿ ವ್ಯಾಪ್ತಿಯ ಆಸ್ತಿಗಳಿಗೆ ಬಿ ಖಾತಾ ಅಭಿಯಾನ ಶುರು ಮಾಡಿದ್ದೇವೆ ಅಂತ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಿ ಖಾತಾ ಅಭಿಯಾನದ ಬಗ್ಗೆ ವಿಧಾನಸೌಧದ ಪ್ರತಿಕ್ರಿಯೆ ನೀಡಿದ ಅವರು, ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಸಮಿತಿ ಮಾಡಿದ್ವಿ. ಸಮಿತಿ ವರದಿ ಕೊಟ್ಟ ಮೇಲೆ ರಾಜ್ಯದಲ್ಲಿ ಒಂದು ಕಾನೂನು ಮಾಡಿದ್ದೇವೆ. ರೆವಿನ್ಯೂ ಬಡಾವಣೆ, ಸೈಟ್‌ಗಳಿಗೆ ಸರ್ಕಾರ ಸೌಲಭ್ಯಗಳನ್ನು ಕೊಡಲಾಗಿದೆ. ಅವರು ಯಾರು ಸರ್ಕಾರಕ್ಕೆ ಕಂದಾಯ ಕಟ್ಟುತ್ತಿರಲಿಲ್ಲ. ಅದಕ್ಕಾಗಿ ಬಿ ಖಾತಾ ಅಭಿಯಾನ ಮಾಡಬೇಕು ಅಂತ ಹೇಳಿದ್ದೇನೆ. ಎಲ್ಲಾ ನಗರ ಪ್ರದೇಶ, ಮುನಿಸಿಪಾಲಿಟಿಗಳಲ್ಲಿ, ನಗರಾಭಿವೃದ್ಧಿ ವ್ಯಾಪ್ತಿಯಲ್ಲಿ ಮಾಡ್ತಿದ್ದೇವೆ. ಡಿಸಿಗಳು, ಯೋಜನಾ ಇಲಾಖೆ ಅವರು ಸೇರಿ ಎಲ್ಲಾ ಅಧಿಕಾರಿಗಳ ಸಭೆ ಮಾಡಿ ಅವರಿಗೆ ಸೂಚನೆ ನೀಡಿದ್ದೇನೆ ಅಂತ ತಿಳಿಸಿದರು.