– ಕೇಂದ್ರದಲ್ಲಿ ಮಂತ್ರಿ ಆಗಿದ್ದಕ್ಕೆ ಕೆಲವರಿಗೆ ನೋವಿದೆ
– ಕೆಲಸ ಮಾಡದೇ 600 ಕೋಟಿ ರೂ. ಕಳ್ಳ ಬಿಲ್ ಮಾಡಿದವರು ಯಾರು?
ಬೆಂಗಳೂರು: ಡಿಕೆ ಸುರೇಶ್ (DK Suresh) ಹಿನ್ನೆಲೆ ಏನು ಅಂತ ಎಲ್ಲರಿಗೂ ಗೊತ್ತು. ಅವರಿಂದ ನಾನು ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಿಲ್ಲ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ.
ನಾಗಮಂಗಲ ಗಲಭೆಗೆ ಕುಮಾರಸ್ವಾಮಿ ಕಾರಣ ಎಂಬ ಡಿಕೆ ಸುರೇಶ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಡಿಕೆ ಸುರೇಶ್ ಹಿನ್ನೆಲೆ ಏನು ಅಂತ ನಿಮಗೆ ಗೊತ್ತು. ಅಣ್ಣ ತಮ್ಮಂದಿರು ಯಾವ ಮಾರ್ಗದಲ್ಲಿ ಬಂದಿದ್ದಾರೆ. ಯಾವಾಗ ಯಾರಿಗೆ ಧಮ್ಕಿ ಹಾಕಿ ಯಾರ ಆಸ್ತಿಗಳನ್ನ ಲೂಟಿ ಮಾಡ್ತಾರೆ. ಇದು ಎಲ್ಲರಿಗೆ ಗೊತ್ತಿದೆ. ಅವರಿಗೆ ನಾನು ಉತ್ತರ ಕೊಡಬೇಕಾ ಎಂದು ತಿರುಗೇಟು ನೀಡಿದರು.
Advertisement
Advertisement
ವಾರಕ್ಕೆ ಒಂದು ಬಾರಿ ಮಾತ್ರ ರಾಜ್ಯಕ್ಕೆ ಬರುವ ನಾನು ಗಲಾಟೆ ಮಾಡಿಸುತ್ತೇನಾ? ಗಲಾಟೆ ಸರಿ ಮಾಡಲು ಹೋಗಿದ್ದೇನೆ. ಓಲೈಕೆ ರಾಜಕೀಯಕ್ಕೆ ಬಲಿಯಾಗಬೇಡಿ ಅಂತ ನಿನ್ನೆ ಹೇಳಿದ್ದೇನೆ. ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ರಾಜ್ಯ. ಇದು ನೆಮ್ಮದಿಯಿಂದ ಇರಬೇಕು. ಅಣ್ಣ ತಮ್ಮಂದಿರಂತೆ ಬದುಕಬೇಕು ಅಂತ ಹೇಳಿದ್ದೇನೆ. ಅಲ್ಲಿ ನಾನು ಬೆಂಕಿ ಹಚ್ಚೋಕೆ ಹೋಗಿದ್ನಾ? ಬೆಂಕಿ ಪಟ್ಟಣವೇ ಇಲ್ಲದೇ ಬೆಂಕಿ ಹಚ್ಚುತ್ತೇನೆ ಅಂತ ಹೇಳಿದ್ದಾರೆ ನಮ್ಮ ಸ್ನೇಹಿತರು. ನಮಗೆ ಅದು ಬಿಟ್ಟು ಅಭಿವೃದ್ಧಿ ಗೊತ್ತಿಲ್ಲವಂತೆ. ಮಾಗಡಿ ಅಭಿವೃದ್ಧಿ ಬಗ್ಗೆ ಅವರಿಂದ ಸರ್ಟಿಫಿಕೇಟ್ ಪಡೆಯಬೇಕಿಲ್ಲ. ಮಾಗಡಿ ಜನ ಅವರಿಗೆ ಸರ್ಟಿಫಿಕೇಟ್ ಕೊಡುತ್ತಾರೆ ಎಂದರು. ಇದನ್ನೂ ಓದಿ: ದಲಿತ ವಿಕಲಚೇತನ ವ್ಯಕ್ತಿಗೆ ಹಂಚಿಕೆಯಾದ ಜಾಗದಲ್ಲಿ ಸಿದ್ದರಾಮಯ್ಯ ಮನೆ: ಹೆಚ್‌ಡಿಕೆ ಬಾಂಬ್
Advertisement
ಡಿಕೆ ಬ್ರದರ್ಸ್‌ಗೆ ಸರ್ಟಿಫಿಕೇಟ್ ಯಾರು ಕೊಟ್ಟರು ಹೇಳಿ. ಮಾಗಡಿಯಲ್ಲಿ 2009 ರಿಂದ 2013ರವರೆಗೆ ಸುಮಾರು 600 ಕೋಟಿ ರೂ. ಕೆಲಸ ಮಾಡದೇ ಕಳ್ಳ ಬಿಲ್ಲು ಮಾಡಿ ದುಡ್ಡು ಲೂಟಿಯಾಗಿದೆ ಅಂತ ವಿಧಾನಸೌಧದಲ್ಲಿ ಗಲಾಟೆ ಮಾಡಿದ್ದು ಯಾರು? ನಿನ್ನೆ ಕರೆದುಕೊಂಡು ಹೋಗಿ ಭಾಷಣ ಮಾಡಿಸಿದ್ದಾರೆ. ಯಾಕೆ 600 ಕೋಟಿ ರೂ ಮಾಗಡಿಯ ಅಕ್ರಮ ಮುಚ್ಚಿ ಹಾಕಿದರು? ಮುಚ್ಚಿ ಹಾಕಿದವರು ಯಾರು? ಇವೆರೆಲ್ಲ ನನ್ನ ಬಗ್ಗೆ ಚರ್ಚೆ ಮಾಡುತ್ತಾರೆ ಎಂದು ಸಿಟ್ಟು ಹೊರ ಹಾಕಿದರು.
Advertisement
ಏನ್ ಮಾಡೋಕೆ ಆಗುತ್ತೆ ಹೇಳಿ? ನಾನು ಕರ್ನಾಟಕಕ್ಕೆ ಬಂದರೆ ಇಲ್ಲಿ ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಇದು ನನ್ನ ಪರಿಸ್ಥಿತಿ. ನನ್ನ ಮುಖ ನೋಡಿದ ಕೂಡಲೇ ನನ್ನ ಹೆಸರು ಹೇಳಿದ ಕೂಡಲೇ ಅಯ್ಯೋ ಮುಗಿದೇ ಹೋದ ಅಂದುಕೊಂಡಿದ್ದರು. ಆದರೆ ಕೇಂದ್ರದಲ್ಲಿ ಮಂತ್ರಿ ಆಗಿ ಬಿಟ್ಟ ಅಂತ ಅವರಿಗೆ ನೋವಿದೆ. ಆ ನೋವಿಗೆ ನಾನು ಅವರಿಗೆ ಎಲ್ಲಿಂದ ಔಷಧಿ ಕೊಡಲಿ ಎಂದು ಹೇಳಿದರು.
ನಾಗಮಂಗಲಕ್ಕೆ ಜನರಿಗೆ ಶಾಂತಿ ಹೇಳೋಕೆ ಹೋಗಿದ್ದೆ. ನಾನು ಯಾವುದೇ ಒಂದು ಸಮುದಾಯದ ಓಲೈಕೆ ಮಾಡಿಕೊಂಡು ನಾಗಮಂಗಲಕ್ಕೆ ಹೋಗಿಲ್ಲ. ಎರಡು ಸಮಾಜದಲ್ಲಿ ಅಗಿರೋ ಅನಾಹುತ ಸ್ಥಳ ಪರಿಶೀಲನೆ ಮಾಡಿ, ಎರಡು ಸಮಾಜದ ನಷ್ಟಗಳಿಗೆ ಪರಿಹಾರ ಕೊಟ್ಟೆ. ಒಂದು ಸಮಾಜ ನಾನು ಒಲೈಕೆ ಮಾಡಲಿಲ್ಲ. ಜನರಿಗೆ ಕೈ ಜೋಡಿಸಿ ಮನವಿ ಮಾಡ್ತೀನಿ. ಇಂತಹ ವ್ಯಕ್ತಿಗಳನ್ನ ಎಚ್ಚರಿಕೆಯಿಂದ ಗಮನಿಸಿ ಅಂತ ಡಿಕೆ ಬ್ರದರ್ಸ್ ವಿರುದ್ದ ಕಿಡಿಕಾರಿದರು