– ಮೇಕೆದಾಟುಗೆ ಮಾತ್ರ ಅಲ್ಲ, ನಾನು ಕಾಂಗ್ರೆಸ್‌ಗಾಗಿ ಕೆಲಸ ಮಾಡುತ್ತಿದ್ದೇನೆ
ಬೆಂಗಳೂರು: ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (International Film Festival) ಎಲ್ಲರಿಗೂ ಆಹ್ವಾನ ಹೋಗಿದೆ. ಪಿಆರ್‌ಓ ಅವರು ಎಲ್ಲರಿಗೂ ಮಾಹಿತಿ ನೀಡಿದ್ದಾರೆ. ವರ್ಷ ವರ್ಷ ಯಾವ ರೀತಿ ನೀಡುತ್ತಿದ್ದರೋ ಆ ರೀತಿ ಆಹ್ವಾನ ನೀಡಲಾಗಿದೆ ಎಂದು ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ (Sadhu Kokila) ಅವರು ಸ್ಪಷ್ಟನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಅವರು ಮಾತನಾಡಿದರು. ಈ ವೇಳೆ ಅಕಾಡೆಮಿ ಅಧ್ಯಕ್ಷತೆಯಲ್ಲಿ ಚಲನಚಿತ್ರೋತ್ಸವ ಚೆನ್ನಾಗಿ ನಡೆಯುತ್ತಿದೆ. ಪ್ರೇಕ್ಷಕರು ಹೆಚ್ಚಾಗಿ ಬರ್ತಿದ್ದಾರೆ. ಮಂಗಳವಾರ ದುನಿಯಾ ವಿಜಿ ಬಂದಿದ್ರು. ಪೂಜಾ ಗಾಂಧಿ ಅವರು ಬಂದು ಮಾತಾಡಿ ಹೋಗಿದ್ದಾರೆ. ಅತ್ಯದ್ಭುತವಾಗಿ ಕಾರ್ಯಕ್ರಮ ನಡೆಯುತ್ತಿದೆ. ಕಲಾವಿದರು ಎಲ್ಲರೂ ಒಟ್ಟಾಗಿ ಹೋಗಬೇಕು. ಕಿಕ್ಕಿರಿದು ಜನ ಬರುತ್ತಿದ್ದಾರೆ, ಎಲ್ಲರೂ ಪ್ರಶಂಸಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ನಾನು ಸುಮಾರು ವರ್ಷಗಳಿಂದ ಕಾಂಗ್ರೆಸ್‌ಗೆ ಕೆಲಸ ಮಾಡುತ್ತಿದ್ದೇನೆ. ಮೇಕೆದಾಟುಗೆ ಮಾತ್ರ ಕೆಲಸ ಮಾಡುತ್ತಿಲ್ಲ. ಉಪಚುನಾವಣೆ, ಭಾರತ್ ಜೋಡೋದಲ್ಲೂ ಭಾಗಿಯಾಗಿದ್ದೇನೆ. ನನ್ನನ್ನು ಗುರುತಿಸಿದ್ದಾರೆ. ಜವಾಬ್ದಾರಿ ನೀಡಿದ್ದಾರೆ. ನಮ್ಮದು ಕಲಾವಿದರ ಕುಟುಂಬ. ನಾಗಾಭರಣ ಸರ್ ಇದ್ದಾರೆ, ಎಲ್ಲರೂ ಬರುತ್ತಿದ್ದಾರೆ. ಏನೂ ಸಮಸ್ಯೆ ಆಗಿಲ್ಲ ಎಂದು ಹೇಳಿದ್ದಾರೆ.