ಕಲಬುರಗಿ: ಸಿಎಂ, ಡಿಸಿಎಂ ಹುದ್ದೆ (CM, DCM Post) ಕೇಳುವ ಹಕ್ಕು ಎಲ್ಲರಿಗೂ ಇದೆ. ಆದ್ರೆ ಎಲ್ಲಿ ಕೇಳಬೇಕು, ಅಲ್ಲಿಯೇ ಕೇಳಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ.
ಕಲಬುರಗಿಯಲ್ಲಿ (Kalaburagi) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂ ಹುದ್ದೆ ಕೇಳುವ ಹಕ್ಕು ಎಲ್ಲರಿಗೂ ಇದೆ. ಆದ್ರೆ ಎಲ್ಲಿ ಕೇಳಬೇಕು, ಅಲ್ಲೇ ಕೇಳಬೇಕು. ಮಾಧ್ಯಮಗಳ ಮುಂದೆ ಕೇಳಿದ್ರೆ ಆಗಲ್ಲ ಎಂದಿದ್ದಾರೆ. ಇದನ್ನೂ ಓದಿ: `ನಿಯಂತ್ರಣವಿಲ್ಲದ ಮನಸ್ಸೇ ದೊಡ್ಡ ಶತ್ರು’ – ಭಗವದ್ಗೀತೆಯ ಸಂದೇಶ ಹಂಚಿಕೊಂಡ ಅಖ್ತರ್
ಬೀದಿಯಲ್ಲಿ ಬಂದು ಜಗಳ ಆಡೋದು ಸರಿಯಲ್ಲ, ನಮ್ಮ ಅಭಿಪ್ರಾಯವನ್ನ ಬೀದಿಯಲ್ಲಿ ಚರ್ಚೆ ಮಾಡೋದು ಸರಿಯಲ್ಲ. ಈ ರೀತಿ ನಾವು ಮಾತಾಡಿಕೊಂಡು ಹೋದ್ರೆ ನಮ್ಮ ಕಾರ್ಯಕರ್ತರಿಗೆ (Congress Workers) ಏನು ಸಂದೇಶ ಕೊಟ್ಟ ಹಾಗೆ ಆಗುತ್ತೆ? ಸಮುದಾಯದ ಹಿರಿಯರು, ನಾಯಕರಿರಬಹುದು ಎಲ್ಲರೂ ಹೈಕಮಾಂಡ್ ಬಳಿ ಕೇಳಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ರಾಹುಲ್ Vs ನರೇಂದ್ರ ಮೋದಿ – ಲೋಕಸಭೆಯಲ್ಲಿ ಗದ್ದಲಕ್ಕೆ ಕಾರಣವಾಯ್ತು ‘ಹಿಂದೂ’ ಹೇಳಿಕೆ
ಕಳೆದ ಲೋಕಸಭಾ ಚುನಾವಣೆಯಲ್ಲಿ ಯಾವ್ಯಾವ ಸಮುದಾಯದವರು ಎಷ್ಟೆಷ್ಟು ವೋಟ್ ಹಾಕಿದ್ದಾರೆ ಅಂತಾ ಗೋತ್ತು, ಕೆಲವು ಸಮುದಾಯದವರಿಗೆ ಮಠಗಳು ಸ್ವಾಮೀಜಿಗಳು ಇದ್ದಾರೆ. ಇನ್ನೂ ಕೆಲವು ಸಮುದಾಯಗಳು ಸ್ವಾಮೀಜಿಗಳು ಇಲ್ಲದವರು ನಮ್ಮ ಪರವಾಗಿ ಕೆಲಸ ಮಾಡ್ತಿದ್ದಾರೆ. ಆದ್ರೆ ಅವರು ಕೇಳ್ತಿಲ್ಲ. ಪ್ರಹ್ಲಾದ್ ಜೋಶಿ ಅವರು ಇದರ ಬಗ್ಗೆ ಮಾತನಾಡುವುದು ಬಿಟ್ಟು ಅವರ ಮನೆ ಬೆಂಕಿ ಆರಿಸಿಕೊಳ್ಳಲಿ ಎಂದು ಕುಟುಕಿದ್ದಾರೆ.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಕುರಿತು ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ. ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಇಲ್ಲವೇ ಇಲ್ಲ ಅಂತ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಐಸಿಸಿ ಕನಸಿನ ತಂಡ ಪ್ರಕಟ – ಕೊಹ್ಲಿಗಿಲ್ಲ ಸ್ಥಾನ, ಪಟ್ಟಿಯಲ್ಲಿದ್ದಾರೆ 6 ಟೀಂ ಇಂಡಿಯಾ ಆಟಗಾರರು