ದಾಂಪತ್ಯ ಜೀವನ ಅನ್ನೋದು ಒಂದು ಸುಂದರವಾದ ಬಂಧ. ಲವ್ ಮಾಡುವವರು ಮದುವೆಗೂ ಮುನ್ನ ಒಬ್ಬರನ್ನೊಬ್ಬರು ಅರಿತುಕೊಂಡಿರುತ್ತಾರೆ. ಆದರೆ ಮನೆಯವರ ಮಾತು ಕೇಳುವವರು ಅರೆಂಜ್ ಮ್ಯಾರೇಜ್ ಆದ ಮೇಲೆ ತನ್ನ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತೆ. ಅರೆಂಜ್ ಮ್ಯಾರೇಜ್ ಆಗಲು ಇಷ್ಟ ಪಡುವ ಹೆಣ್ಣು ಮಕ್ಕಳಿಗೆ ಒಂದಷ್ಟು ಟಿಪ್ಸ್ ಇದೆ.
ಮದುವೆಯಾಗುವ ಮೊದಲು ತಮ್ಮ ಭಾವಿ ಪತಿಯೊಂದಿಗೆ ಹುಡುಗಿಯರು ಈ ವಿಷಯಗಳು ಬಗ್ಗೆ ಚರ್ಚಿಸಲೇಬೇಕು. ಮದುವೆ ನಂತರ, ಎಷ್ಟೋ ಹೆಣ್ಣುಮಕ್ಕಳು ತಮ್ಮ ಜೀವನ ಸಂಗಾತಿಯಾಗಿ ತಪ್ಪು ವ್ಯಕ್ತಿಯನ್ನು ಆರಿಸಿಕೊಂಡಿದ್ದೇವೆ ಎಂದು ಅರಿತುಕೊಳ್ಳುತ್ತಾರೆ. ಹೀಗಾಗಿ ಮದುವೆಗೂ ಮುನ್ನವೇ ಸಂಗಾತಿ ಆಗುವವರ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳುವುದು ಮುಖ್ಯ. ಮದುವೆಗೂ ಮುನ್ನ ಬಾಳ ಸಂಗಾತಿ ಆಗುವವರೊಂದಿಗೆ ಈ ಪ್ರಶ್ನೆಗಳನ್ನು ಮುಂದಿಟ್ಟು ಇತ್ಯರ್ಥ ಮಾಡಿಕೊಳ್ಳುವುದು ಉತ್ತಮ. ಇದನ್ನೂ ಓದಿ: ಸೊಸೆ ಸ್ನೇಹ ಬಯಸೋ ಅತ್ತೆಗೆ ಈ ಗುಣ ಇರುತ್ತಂತೆ..
Advertisement
Advertisement
ಈ ಸಂಬಂಧಕ್ಕೆ ಬದ್ಧರಾಗಲು ನೀವು ಸಿದ್ಧರೇ?
ದಾಂಪತ್ಯ ಜೀವನ ಅನ್ನೋದು ಸುಲಭದ ಮಾತಲ್ಲ. ನಿಮ್ಮ ಭಾವಿ ಪತಿ ಮದುವೆ ನಂತರ ಸಂಬಂಧವನ್ನು ಉಳಿಸಿಕೊಳ್ಳಲು ಸಮರ್ಥರೇ ಎಂಬುದನ್ನು ಹುಡುಗಿಯರು ತಿಳಿದುಕೊಳ್ಳಬೇಕು. ವಿವಾಹದ ನಂತರ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಅದನ್ನು ನಿಭಾಯಿಸಬಲ್ಲನೇ? ನನ್ನನ್ನು ಸಂತೋಷವಾಗಿ ಇಡಬಲ್ಲನೇ ಎಂಬುದನ್ನು ಯೋಚಿಸಬೇಕು. ಹೀಗಾಗಿ ಜೀವನದ ಬಗ್ಗೆ ನಿಮ್ಮ ಮುಂದಿನ ನಡೆ ಏನು ಎಂದು ಕೇಳಿ. ಅವರಿಂದ ಸಕಾರಾತ್ಮಕ ಉತ್ತರ ಸಿಕ್ಕರೆ, ಜೀವನದ ಕಡೆಗೆ ಅವರ ವಿಧಾನ ತುಂಬಾ ಸರಳವಾಗಿದೆ ಎಂದು ಅರ್ಥ ಮಾಡಿಕೊಳ್ಳಿ.
Advertisement
Advertisement
ಕೆಲಸ ಮಾಡಲು ಬಿಡುತ್ತಾರೆಯೇ?
ಭಾವಿ ಪತಿ ನಿಮ್ಮ ಕೆಲಸದ ಜೀವನದೊಂದಿಗೆ ಹೊಂದಿಕೊಳ್ಳುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ವಿವಾಹಕ್ಕೂ ಮುನ್ನವೇ ಕೇಳಿ ಸ್ಪಷ್ಟನೆ ಪಡೆದುಕೊಳ್ಳಿ. ಏಕೆಂದರೆ ಮದುವೆ ನಂತರ ನಿಮ್ಮ ಜೀವನ ಸಂಪೂರ್ಣ ಬದಲಾಗಬಹುದು. ಅಂತಹ ಸನ್ನಿವೇಶದಲ್ಲಿ ಪತಿಯ ಸಪೋರ್ಟ್ ಸಿಗದಿದ್ದರೆ ನೀವು ಸಂಬಂಧದಲ್ಲಿ ಕಿರಿಕಿರಿ ಅನುಭವಿಸಬಹುದು. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?
ಮಕ್ಕಳನ್ನು ಇಷ್ಟಪಡ್ತೀರಾ?
ಸಾಮಾನ್ಯವಾಗಿ ಮದುವೆಯಾದ ನಂತರ ಎಲ್ಲರೂ ಕುಟುಂಬ ಯೋಜನೆ ಬಗ್ಗೆ ಚರ್ಚಿಸುತ್ತಾರೆ. ಮದುವೆಗೂ ಮುನ್ನ ಈ ವಿಷಯದ ಬಗ್ಗೆ ನಿಮಗೆ ಸ್ಪಷ್ಟತೆ ಬೇಕೆನಿಸಿದರೆ ಕೇಳಬಹುದು. ನೀವು ಮದುವೆಯಾಗುವ ಹುಡುಗನೊಂದಿಗೆ ಮಕ್ಕಳ ಬಗ್ಗೆ ನೇರವಾಗಿಯೇ ಪ್ರಶ್ನಿಸಬಹುದು. ಮದುವೆಯ ನಂತರ ಕುಟುಂಬ ಯೋಜನೆಯ ಬಗ್ಗೆ ಅವರು ಯಾವಾಗ ಯೋಚಿಸುತ್ತಾರೆ ಎಂಬುದನ್ನು ಕೇಳಿಕೊಳ್ಳಿ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k