ಬೆಂಗಳೂರು: ಮೆಟ್ರೋ (Namma Metro) ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇನ್ಮುಂದೆ ಪ್ರತಿ ಸೋಮವಾರ ಮುಂಜಾನೆ 4:15 ಕ್ಕೆ ಮೆಟ್ರೋ ಸೇವೆ ಆರಂಭ ಆಗಲಿದೆ.
ಜ.13 ರ ಸೋಮವಾರದಿಂದ ಹೊಸ ಸಮಯ ಚಾಲ್ತಿಯಲ್ಲಿರಲಿದೆ. ಜನಸಂದಣಿ ಆಧರಿಸಿ ಪ್ರತಿ ಸೋಮವಾರದಂದು ಮೆಟ್ರೋ ಸಮಯದಲ್ಲಿ ಬದಲಾವಣೆಯಾಗಲಿದೆ. ಇದನ್ನೂ ಓದಿ: ಫೆ.15 ಕ್ಕೆ ಮಹದೇಶ್ವರ ಬೆಟ್ಟದಲ್ಲಿ ಕ್ಯಾಬಿನೆಟ್ ಸಭೆ
Advertisement
Advertisement
ಇಷ್ಟು ದಿನ ಬೆಳಗ್ಗೆ 5ಕ್ಕೆ ಆರಂಭ ಆಗುತ್ತಿತ್ತು. ಇದೀಗ ಬದಲಾದ ಸಮಯದಲ್ಲಿ ಮುಂಜಾನೆ 4:15 ಕ್ಕೆ ಮೆಟ್ರೋ ಸೇವೆ ಆರಂಭವಾಗಲಿದೆ. ಇನ್ನುಳಿದ ದಿನಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
Advertisement
ಮಂಗಳವಾರದಿಂದ ಭಾನುವಾರದ ವರೆಗೆ ಬೆಳಗ್ಗೆ 5ಕ್ಕೆ ಮೆಟ್ರೋ ಸೇವೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಸೋಮವಾರ ಪ್ರಯಾಣಿಕರ ಸಂಖ್ಯೆ ಹಚ್ಚಾಗುವ ಹಿನ್ನೆಲೆಯಲ್ಲಿ, ಆ ದಿನ ಮಾತ್ರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಇದನ್ನೂ ಓದಿ: 20 ವರ್ಷ ನೀವೇ ಮುಡಾ ಸದಸ್ಯರಾಗಿದ್ರೂ ಅಕ್ರಮ ಹೇಗಾಯ್ತು? – ಶಾಸಕರ ಮೇಲೆ ಸಿಎಂ ಗರಂ
Advertisement
ದೂರದ ಊರಿನಿಂದ ಬರುವವರಿಗೆ ಅನುಕೂಲಕ್ಕಾಗಿ ಸಮಯದಲ್ಲಿ ಬದಲಾವಣೆ ತರಲಾಗಿದೆ ಎಂದು ನಮ್ಮ ಮೆಟ್ರೋ ನಿಗಮದಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.