ಯಾದಗಿರಿ: ಹಿಂದೂ ವಿರಾಟ್ ಸಮಾವೇಶದಲ್ಲಿ ಹೈದರಾಬಾದ್ ಶಾಸಕ ರಾಜಾ ಸಿಂಗ್ ಪ್ರಚೋದನಕಾರಿ ಭಾಷಣ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಶಾಸಕರು ತಮ್ಮ ಭಾಷಣದಲ್ಲಿ ಪ್ರತಿಯೊಬ್ಬ ಹಿಂದೂ ಮನೆಯಲ್ಲಿ ಲಾಠಿ, ಖಡ್ಗ ಇಟ್ಟುಕೊಳ್ಳಬೇಕು. ಸಂದರ್ಭ ಬಂದರೆ ಧರ್ಮ ವಿರೋಧಿಯ ತಲೆ ಕಡಿಯಬೇಕು ಅಂತ ಫರ್ಮಾನ್ ಹೊರಡಿಸಿದ್ದರು. ಶಾಸಕರು ಈ ರೀತಿ ಹೇಳಿಕೆ ಕೊಡುತ್ತಿದ್ದಂತೆಯೇ ನೆರೆದಿದ್ದ ಯುವ ಸಮೂಹ ಕತ್ತಿ ಹಿಡಿದು ಕೇಕೆ ಹಾಕಿದೆ. ಯಾದಗಿರಿ ಪೊಲೀಸರ ಸಮ್ಮುಖದಲ್ಲಿಯೇ ಶಾಸಕರು ಈ ರೀತಿ ಹೇಳಿಕೆ ಕೊಟ್ಟಿರುವುದಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಶ್ರೀರಾಮ ಸೇನಾ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ದೇಶ ಹಾಗೂ ಧರ್ಮದ ಸುರಕ್ಷತೆಗೋಸ್ಕರ ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲಿ ಖಡ್ಗ ಇಟ್ಟುಕೊಳ್ಳಬೇಕು ಅಂತ 15 ವರ್ಷಗಳಿಂದ ಹೇಳುತ್ತಾ ಬಂದಿದ್ದೇನೆ. ಕುಡಿದು ಇನ್ಯಾರನ್ನೋ ಹೊಡಿಯೋಕೆ, ಜಾತಿಗಳ ಮಧ್ಯೆ ಕಲಹ ತರಲು ಅಲ್ಲ. ದೇಶದ ಸುರಕ್ಷತೆಯ ಹಿನ್ನೆಲೆಯಲ್ಲಿ ನಾವು ಹೇಳುವುದು ಅಂತ ಹೇಳಿದ್ರು.
ಈ ದೇಶದಲ್ಲಿ 33 ಲಕ್ಷ ಪೊಲೀಸರಿದ್ದಾರೆ. 13 ಲಕ್ಷ ಮಿಲಿಟರಿ ಇದೆ. ಆದುದರಿಂದ 100 ಕೋಟಿ ಭಾರತೀಯರನ್ನು ಈ ದೇಶದಲ್ಲಿ ಸಂರಕ್ಷಿಸುವುದು ಇವರ ಕಡೆಯಿಂದ ಸಾಧ್ಯವಾಗುವುದಿಲ್ಲ. ಇವತ್ತಲ್ಲ ನಾಳೆ ಈ ದೇಶದಲ್ಲಿ ಆಂತರಿಕ ಗಲಭೆಗಳಾದಾಗ ಈ ಪೊಲೀಸರು ಹಾಗೂ ಮಿಲಿಟರಿಯವರಿಂದ ರಕ್ಷಣೆ ಮಾಡಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಆ ಕಾರ್ಯಕ್ರಮದಲ್ಲಿ ಏನೂ ಆಗಿಲ್ಲ. ಶಾಂತ ರೀತಿಯಲ್ಲೇ ಈ ಕಾರ್ಯಕ್ರಮ ನಡೆದಿದೆ. ದೇಶದ ಸುರಕ್ಷತೆಗೋಸ್ಕರ ಪ್ರತಿಯೊಬ್ಬ ನಾಗರಿಕ ತಯಾರಾಗಲೇ ಬೇಕಿದೆ ಅಂತ ಹೇಳಿದ್ರು.
https://www.youtube.com/watch?v=8dbv5Wp6EGc