ಮಂಗಳೂರು: ಪ್ರತಿ ಹಿಂದೂ ಮನೆಯಲ್ಲಿ ತಲ್ವಾರ್ ಸಂಗ್ರಹಿಸಿಟ್ಟುಕೊಳ್ಳುವ ಅಗತ್ಯವಿದೆ ಅಂತ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನ ಆವರಣದಲ್ಲಿ ಶ್ರೀರಾಮ ಸೇನೆ ಮತ್ತು ಮಹಿಳಾ ಘಟಕ ದುರ್ಗಾ ಸೇನೆ ವತಿಯಿಂದ ನಡೆದ ಮಾತೃಪೂಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುತಾಲಿಕ್, ಆಯುಧವೆಂದರೆ ಪೆನ್ನು, ಪುಸ್ತಕ, ವಾಹನಗಳಲ್ಲ. ಆಯುಧಗಳೆಂದರೆ ಕತ್ತಿ, ತಲ್ವಾರ್. ಹೀಗಾಗಿ ಸಂಭಾವ್ಯ ದಾಳಿ ವೇಳೆ ಸ್ವರಕ್ಷಣೆಗಾಗಿ ತಲವಾರಿನಂತಹ ಶಸ್ತ್ರಗಳನ್ನು ಮನೆಯಲ್ಲಿ ಇರಿಸಿಕೊಂಡಿರಬೇಕು ಎಂದು ಅವರು ಹೇಳಿದರು.
Advertisement
ಈ ಕಾರ್ಯಕ್ರಮದಲ್ಲಿ ಸ್ವತಃ ಪ್ರಮೋದ್ ಮುತಾಲಿಕ್ ಮಾತೆಯರ ಪಾದ ತೊಳೆದು ಪೂಜೆ ನಡೆಸಿದ್ದು ವಿಶೇಷವಾಗಿತ್ತು. ಮಕ್ಕಳು ತಮ್ಮ ತಾಯಂದಿರ ಪಾದ ತೊಳೆದು ಭಕ್ತಿ ಭಾವ ತೋರುವುದು ಈ ಕಾರ್ಯಕ್ರಮದ ವಿಶೇಷತೆಯಾಗಿದೆ.