ಪ್ರತಿ ಅಂತ್ಯ ಹೊಸ ಆರಂಭಕ್ಕೆ ನಾಂದಿ – ‘ನನ್ನ ಮಣ್ಣು ನನ್ನ ದೇಶ’ ಸಮಾರೋಪದಲ್ಲಿ ಮೋದಿ ಮಾತು

Public TV
4 Min Read
narendra modi 2

ನವದೆಹಲಿ: ಹುತಾತ್ಮ ಯೋಧರ ಗೌರವಾರ್ಥ ದೆಹಲಿಯ (Delhi) ಕರ್ತವ್ಯಪಥದಲ್ಲಿ ನಿರ್ಮಾಣವಾಗುವ ಅಮೃತ ಉದ್ಯಾನದ (Amrut Udyan) ಸ್ಥಳಕ್ಕೆ ಮಣ್ಣು ಸಂಗ್ರಹಿಸಲು ಪ್ರಧಾನಿ ನರೇಂದ್ರ ಮೋದಿ (Narendr Modi) ನೀಡಿದ ಕರೆ ನನ್ನ ಮಣ್ಣು ನನ್ನ ದೇಶ ಅಭಿಯಾನದ (My Soil My Country) ಸಮಾರೋಪ ಸಮಾರಂಭ ದೆಹಲಿಯಲ್ಲಿ ನಡೆಯಿತು. ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 766 ಜಿಲ್ಲೆಗಳ 7,000 ಬ್ಲಾಕ್‌ಗಳಿಂದ 20,000 ಕ್ಕೂ ಹೆಚ್ಚು ಪ್ರತಿನಿಧಿಗಳು 8,000 ಕ್ಕೂ ಹೆಚ್ಚು ಅಮೃತ ಕಲಶದೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಕೆಲವು ರಾಜ್ಯಗಳು ತಮ್ಮ ಸಂಸ್ಕೃತಿ ಮತ್ತು ಕಲೆಯನ್ನು ಪ್ರದರ್ಶಿಸಿದವು. ಅಭಿಯಾನ ಭಾಗವಾಗಿ ಈ ವರೆಗೂ ದೇಶಾದ್ಯಂತ 2.36 ಕೋಟಿ ಸ್ಥಳೀಯ ಸಸಿಗಳನ್ನು ಪಂಚಾಯಿತಿಗಳಲ್ಲಿ ನೆಡಲಾಗಿದೆ. ವಸುಧಾ ವಂದನ್ ಥೀಮ್ ಅಡಿಯಲ್ಲಿ 2.63 ಲಕ್ಷ ಅಮೃತ ವಾಟಿಕಾಗಳನ್ನು ರಚಿಸಲಾಗಿದೆ. ಅಲ್ಲದೆ 2.33 ಲಕ್ಷಕ್ಕೂ ಹೆಚ್ಚು ಕಲ್ಲಿನ ಮುಡಿಗಲ್ಲುಗಳನ್ನು ಮಾಡಲಾಗಿದೆ. ಇದಲ್ಲದೇ 4 ಕೋಟಿ ಪಂಚ ಪ್ರಾಣ ಪ್ರತಿಜ್ಞಾ ಸೆಲ್ಫಿ ಅಪ್ಲೋಡ್ ಮಾಡಲಾಗಿದೆ.

ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಮೋದಿ, ಇಂದು ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮ ದಿನ. ಈ ದಿನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಸ್ವಾತಂತ್ರದ ಅಮೃತ ಮಹೋತ್ಸವ ಸಮಾರೋಪವಾಗುತ್ತಿದೆ. ದಂಡಿಯಾತ್ರೆ ಜೊತೆಗೆ ಜನರು ಕೈ ಜೋಡಿಸಿದಂತೆ ಇಂದು ಅಮೃತ ಮಹೋತ್ಸವದ ಜೊತೆಗೆ ಜನರು ಕೈ ಜೋಡಿಸಿದ್ದಾರೆ. ಇದರೊಂದಿಗೆ ಮೇರಾ ದೇಶ್ ಮೇರಾ ಮಾತಿ ಅಭಿಯಾನ ಸಮಾರೋಪವಾಗುತ್ತಿದೆ ಎಂದರು.

ಈ ದಿನ ಮುಂದಿನ ಪೀಳಿಗೆ ಇದು ಐತಿಹಾಸಿಕ ದಿನವಾಗಲಿದೆ. ಅಜಾದಿ ಕಾ ಅಮೃತ್ ಮಹೋತ್ಸವ ಇಂದು ಹೊಸ ಸಂಕಲ್ಪಕ್ಕೆ ಶುಭಾರಂಭ ಮಾಡುತ್ತಿದೆ. ಭಾರತದ ಯುವಕರು ಸಂಘಟನೆಯಾಗಿ ಹೇಗೆ ಗುರಿ ತಲುಪುತ್ತಾರೆ ಎನ್ನುವುದಕ್ಕೆ ಮೇರಾ ದೇಶ್ ಮೇರಾ ಮಾತಿ ಅಭಿಯಾನ ಸಾಕ್ಷಿಯಾಗಿದೆ. ಅಭಿಯಾನದಲ್ಲಿ ದೇಶದ ಪ್ರತಿ ಭಾಗದಿಂದ ಕೋಟಿ ಕೋಟಿ ಯುವಕರು ಜೋಡಿಸಿಕೊಂಡಿದ್ದಾರೆ. ಕೋಟ್ಯಂತರ ಜನರು ಅಮೃತ್ ಕಲಶದಲ್ಲಿ ತನ್ನ ಜಮೀನಿನ ಮಣ್ಣು ನೀಡಿದ್ದಾರೆ. ಕೋಟ್ಯಂತರ ಜನರು ಪಂಚ ಪ್ರಾಣದ ಪ್ರತಿಜ್ಞೆ ತೆಗೆದುಕೊಂಡಿದ್ದಾರೆ ಎಂದು ನುಡಿದರು.

ಆದರೆ ಕೆಲವರಿಗೆ ಮಣ್ಣು ಯಾಕೆ ಎನ್ನುವ ಪ್ರಶ್ನೆ ಮೂಡಬಹುದು. ಈ ಮಣ್ಣಿನಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಬಂದು ಹೋಗಿದ್ದಾರೆ. ಅನಾದಿಕಾಲದಿಂದ ಈಗಿನವರೂ ಮಣ್ಣು ದೇಶವನ್ನು ಉಳಿಸಿದೆ. ಮಣ್ಣು ದೈವಿಕವಾಗಿ ಜನರನ್ನು ಸಂಪರ್ಕಿಸುತ್ತದೆ. ಇದೇ ಮಣ್ಣಿಗಾಗಿ ತ್ಯಾಗ ಬಲಿದಾನವಾಗಿದೆ. ಈ ಮಣ್ಣಿನಲ್ಲಿ ಶ್ರೀಗಂಧವಿದೆ, ಈ ಮಣ್ಣಿನಲ್ಲಿ ಆಕಾಂಕ್ಷೆಗಳಿವೆ, ಸಾವಿರಾರು ಕನಸುಗಳಿವೆ. ಈ ಮಣ್ಣು ನಮ್ಮ ಕರ್ತವ್ಯವನ್ನು ನೆನಪಿಸುತ್ತದೆ. ಹೊಸ ಸಂಕಲ್ಪಗಳಿಗೆ ಪ್ರೇರೆಪಿಸುತ್ತದೆ. ದೇಶದಿಂದ ಬಂದಿರುವ ಮಣ್ಣು ಮತ್ತು ಸಸಿಗಳಿಂದ ಅಮೃತ್ ವಾಟಿ ನಿರ್ಮಿಸಲಾಗುವುದು. ಇದು ಮುಂದಿನ ಪೀಳಿಗೆಗೆ ಒಂದು ಭಾರತ ಶ್ರೇಷ್ಠತೆ ಭಾರತದ ಬಗ್ಗೆ ಹೇಳಲಿದೆ ಎಂದರು.

ಅಜಾದಿ ಕಾ ಅಮೃತ್ ಮಹೋತ್ಸವ ಒಂದು ಸಾವಿರ ದಿನ ನಡೆದಿದೆ ಇದರ ಪ್ರಭಾವ ಭಾರತದ ಯುವಕರ ಮೇಲೆ ಬೀರಿದೆ. ಸ್ವತಂತ್ರದ ಮಹತ್ವ ತಿಳಿಸಿಕೊಟ್ಟಿದೆ. ಇಂದಿನ ಪೀಳಿಗೆ ಗುಲಾಮಿ ವ್ಯವಸ್ಥೆ ನೋಡಿಲ್ಲ. ಆ ವ್ಯವಸ್ಥೆಯಿಂದ ಹೊರಬರಲು ಮಾಡಿದ ತ್ಯಾಗವೂ ಗೊತ್ತಿಲ್ಲ. ನನಗೂ ಇದರ ಬಗ್ಗೆ ಗೊತ್ತಿಲ್ಲ. ನಾವು ಸ್ವಾತಂತ್ರ‍್ಯದ ಬಳಿಕ ಜನಿಸಿದವರು. ನಾನು ಸ್ವಾತಂತ್ರದ ಬಳಿಕ ಹುಟ್ಟಿದ ಮೊದಲ ಪ್ರಧಾನಿ. ಅಜಾದಿ ಕಾ ಅಮೃತ್ ಮಹೋತ್ಸವದಲ್ಲಿ ನನಗೂ ಈ ಬಗ್ಗೆ ಹೊಸ ವಿಷಯಗಳು ತಿಳಿಯಿತು ಎಂದು ಹೇಳಿದರು. ಇದನ್ನೂ ಓದಿ: 20 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ – ಸಚಿನ್ ಪೈಲಟ್, ಸಾರಾ ಅಬ್ದುಲ್ಲಾ ವಿಚ್ಛೇದನ

ಕಿತ್ತೂರು ರಾಣಿ ಚೆನ್ನಮ್ಮ ಸೇರಿ ಸಾಕಷ್ಟು ರಾಣಿಯರು ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ದೇಶದ ನಾರಿ ಶಕ್ತಿಗೂ ಅಮೃತ್ ಮಹೋತ್ಸವದಲ್ಲಿ ಗೌರವ ಸಲ್ಲಿಸಿದ್ದೇವೆ. ಸ್ವಾತಂತ್ರ ಹೋರಾಟಗಾರರನ್ನು ಗುರುತಿಸಿ ಗೌರವಿಸಿದೆ. ಅಮೃತ್ ಮಹೋತ್ಸವದ ಹೊತ್ತಲ್ಲಿ ಭಾರತ 5ನೇ ಬಲಿಷ್ಠ ಆರ್ಥಿಕತೆಯಾಗಿದೆ. ಇದೇ ಅವಧಿಯಲ್ಲಿ ಹೊಸ ಸಂಸತ್ ಭವನ ನಿರ್ಮಾಣವಾಯಿತು. ಚಂದ್ರಯಾನ 3 ಯಶಸ್ವಿಯಾಗಿತು. ವಂದೇ ಭಾರತ್ ಬಂತು. ರೈಲ್ವೆ ಆಧುನಿಕರಣವಾಗಿದೆ. 5ಜಿ ಇಂಟರ್ನೆಟ್ ಸೇವೆ ದೇಶಾದ್ಯಂತ ಲಭ್ಯವಾಗಿದೆ. ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡಲಾಗಿದೆ. ಹೀಗೆ ಅಗಣಿತ ಸಾಧನೆಗಳನ್ನು ಭಾರತ ಮಾಡಿದೆ ಎಂದರು.

ರಾಜಪಥದಿಂದ ಕರ್ತವ್ಯ ಪಥಕ್ಕೆ ಇದೇ ಅವಧಿಯಲ್ಲಿ ಬದಲಾಗಿದೆ. ನಮ್ಮ ಪ್ರಯಾಣದ ವೇಗವನ್ನು ಹೆಚ್ಚಿಸಬೇಕಿದೆ. ದೇಶದ ಪ್ರತಿಯೊಬ್ಬರು ಇದರಲ್ಲಿ ಭಾಗಿಯಾಗಬೇಕು. ಅಮೃತ ಮಹೋತ್ಸವ ಅಂತ್ಯದ ಜೊತೆಗೆ ಹೊಸ ಗುರಿಯತ್ತ ಹೆಜ್ಜೆ ಆರಂಭಿಸಬೇಕು. ಎಲ್ಲ ಯುವಕರು ಇದಕ್ಕೆ ಕೈ ಜೋಡಿಸಬೇಕು ಎಂದು ದೇಶದ ಯುವಕರಿಗೆ ಮೋದಿ ಕರೆ ನೀಡಿದರು. ಇದನ್ನೂ ಓದಿ: ಪಬ್ಲಿಕ್ ಹೀರೋ ಹುಚ್ಚಮ್ಮ ಸೇರಿದಂತೆ ಕೊಪ್ಪಳದ ಮೂವರಿಗೆ ರಾಜ್ಯೋತ್ಸವ ಪ್ರಶಸ್ತಿ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article