ಮಂಡ್ಯ: ಜಯನಗರ ಚುನಾವಣೆಯ ಈ ಫಲಿತಾಂಶ ಮೊದಲೇ ನಿರೀಕ್ಷೆ ಇತ್ತು. ಬಿಜೆಪಿಯವರು ಸಮ್ಮಿಶ್ರ ಸರ್ಕಾರಕ್ಕೆ ಜನಬೆಂಬಲವಿಲ್ಲ ಅಂತಾ ಅಪಪ್ರಚಾರ ಮಾಡುತ್ತಿದ್ರು ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಇಲ್ಲಿನ ಆದಿಚುಂಚನಗಿರಿಯಲ್ಲಿ ಮಾತನಾಡಿದ ಅವರು, ಜನರು ಸಮ್ಮಿಶ್ರ ಸರ್ಕಾರವನ್ನು ಒಪ್ಪಿದ್ದಾರೆಂಬುದನ್ನ ಜಯನಗರ ಫಲಿಶಾಂಶ ತೋರಿಸುತ್ತಿದೆ. ಇದೇ ವೇಳೆ ಅಮಾವಾಸ್ಯೆ ಪೂಜೆ ಬಗ್ಗೆ ಪ್ರತಿಕ್ರಿಯಿಸಿದ ಎಚ್ಡಿಕೆ, ನಾನು ಪ್ರಮಾಣ ವಚನ ಸ್ವೀಕಾರ ಮಾಡಿದಾಗಲಿಂದ ಉತ್ತಮ ಮಳೆಯಾಗುತ್ತಿದೆ. ಹಲವಾರು ತಿಂಗಳಿಂದ ಅಮಾವಾಸ್ಯೆ ಪೂಜೆಗೆ ಬಂದು ದರ್ಶನ ಪಡೆದು ಹೋಗುತ್ತಿದ್ದೇನೆ. ಪರಮಪೂಜ್ಯ ಸಾಮೀಜಿಯವರೇ ಪೂಜೆಯ ಕಾರ್ಯ ನಡೆಸುತ್ತಾರೆ. ಈ ರೀತಿಯ ವಿಶೇಷ ಪೂಜೆ ಬೇರೆ ಕಡೆ ನೋಡಲು ಸಾಧ್ಯವಿಲ್ಲ ಅಂದ್ರು.
Advertisement
ರಾಜ್ಯದಲ್ಲಿ ಎಲ್ಲ ಕಡೆ ಉತ್ತಮ ಮಳೆಯಾಗಲು ದೇವರ ಮೇಲಿನ ನಂಬಿಕೆಯ ಶಕ್ತಿ ಕಾರಣ. ಮುಂಗಾರು ಬೆಳೆಗೆ ಇನ್ನೂ ಒಳ್ಳೆ ಮಳೆಯಾದ್ರೆ ನಾನೇ ಮಂಡ್ಯದಲ್ಲಿ ಭತ್ತ ನಾಟಿಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ನಾನು ಸಿಎಂ ಆಗಲು ಕಾಂಗ್ರೆಸ್ ಬೆಂಬಲ ನೀಡಲು ಕಾಲಭೈರವೇಶ್ವರ ಪ್ರೇರಣೆ ಎಂಬುದು ನನ್ನ ಭಾವನೆ ಅಂದ್ರು.
Advertisement
ಸಾಲಮನ್ನಾ ವಿಷಯದಲ್ಲಿ ಯಾವ ಆತಂಕ ಬೇಡ. ನನ್ನ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಆತ್ಮಹತ್ಯೆ ಮಾಡಿಕೊಂಡ್ರೆ ನನ್ನ ಕೆಲಸ ಮಾಡುವ ಸಾಮರ್ಥ್ಯ ಕುಗ್ಗುತ್ತೆ. ಬಜೆಟ್ ನಲ್ಲಿ ಯಾವ ರೀತಿ ಸಾಲಮನ್ನ ಮಾಡುತ್ತೇನೆ ಎಂದು ಹೇಳುತ್ತೇನೆ ಅಂತಾ ಭರವಸೆ ನೀಡಿದ್ರು.
Advertisement
ಮೋದಿಗೆ ತಿರುಗೇಟು: ನನಗೆ ನನ್ನ ವೈಯಕ್ತಿಕ ಫಿಟ್ನೆಸ್ ಗಿಂತ ಅಭಿವೃದ್ಧಿ ಫಿಟ್ನೆಸ್ ಮುಖ್ಯ. ಅಭಿವೃದ್ಧಿ ಫಿಟ್ನೆಸ್ನಲ್ಲಿ ಮೋದಿಗಿಂತ ಮುಂದಿದ್ದೇನೆ. ಈ ವಿಚಾರದಲ್ಲಿ ವಿಚಾರದಲ್ಲಿ ಮೋದಿಯಿಂದ ಪಾಠಕಲಿಯುವ ಅವಶ್ಯಕತೆಯಿಲ್ಲ ಎಂದು ತಿರುಗೇಟು ನೀಡಿದ್ರು.