ನವದೆಹಲಿ: ಅರವಿಂದ್ ಕೇಜ್ರಿವಾಲ್ (Arvind Kejriwal) 3ನೇ ಬಾರಿಗೆ ಸಿಎಂ ಆಗಿ ಶೀಘ್ರದಲ್ಲೇ ಪ್ರಮಾಣ ವಚನ ಸ್ವೀಕರಿಸುತ್ತಾರೆ. 4ನೇ ಬಾರಿಗೂ ಸಿಎಂ ಆಗ್ತಾರೆ ಅನ್ನೋ ವಿಶ್ವಾಸ ನನಗಿದೆ ಎಂದು ಆಪ್ ಸಚಿವ ಸೌರಭ್ ಭಾರದ್ವಾಜ್ (Saurabh Bharadwaj) ಹೇಳಿದರು.
ಗ್ರೇಟರ್ ಕೈಲಾಶ್ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಸಚಿವ ಸೌರಭ್ ಭಾರದ್ವಾಜ್ ಮತ ಎಣಿಕೆ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದರು. ಅರವಿಂದ್ ಕೇಜ್ರಿವಾಲ್ 4ನೇ ಬಾರಿಗೂ ಸಿಎಂ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಎಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಬಿಜೆಪಿ ಬೇಕಾದ ಎಲ್ಲಾ ಪ್ರಯತ್ನಗಳನ್ನ ಬಿಜೆಪಿ ಮಾಡಿತು. ಇಡಿ, ಐಟಿ, ಸಿಬಿಐ, ಚುನಾವಣಾ ಆಯೋಗ, ಪೊಲೀಸ್ ಇಲಾಖೆ ಸೇರಿ ಎಲ್ಲಾ ಅಧಿಕಾರಿಗಳನ್ನು ಆಪ್ ವಿರುದ್ಧ ಪ್ರಯೋಗಿಸಿತು. ಆದ್ರೆ ಜನರ ಆಶೀರ್ವಾದ ಎಎಪಿಗೆ ಇದೆ. ಸಾರ್ವಜನಿಕರು ಕೇಜ್ರಿವಾಲ್‌ರನ್ನ 4ನೇ ಬಾರಿಗೂ ಸಿಎಂ ಮಅಡ್ತಾರೆ. ಶೀಘ್ರದಲ್ಲೇ 3ನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರಿ ಆಪ್ ಕನಿಷ್ಠ 40-45 ಸ್ಥಾನಗಳನ್ನ ಪಡೆಯಲಿದೆ. ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಲಿದೆ ಎಂಬ ಮಾಹಿತಿ ವಿವಿಧ ಕ್ಷೇತ್ರಗಳಿಂದ ನಮಗೆ ಬರುತ್ತಿದೆ ಎಂದು ಭಾರದ್ವಾಜ್ ಹೇಳಿದ್ದಾರೆ.
ಸದ್ಯದ ವರದಿ ಪ್ರಕಾರ ಬಿಜೆಪಿ 48 ಕ್ಷೇತ್ರಗಳಲ್ಲಿ ಆಪ್ 21 ಹಾಗೂ ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿವೆ.