ಅನ್ನ ಕೇವಲ ಭಾರತದಲ್ಲಷ್ಟೇ ಅಲ್ಲದೇ ಏಷ್ಯಾದ ಇತರ ದೇಶಗಳಲ್ಲೂ ಮುಖ್ಯ ಆಹಾರವಾಗಿದೆ. ಆದರೆ ಅದನ್ನು ಮಾಡೋ ವಿಧಾನ ಹಾಗೂ ರುಚಿಯಲ್ಲಿ ವೈವಿಧ್ಯತೆಯಿದೆ. ನಾವಿಂದು ಥೈಲ್ಯಾಂಡ್‌ನ ಪ್ರಸಿದ್ಧ ಕೊಕೊನಟ್ ರೈಸ್ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ಕೇವಲ ನಾಲ್ಕೇ ಪದಾರ್ಥಗಳನ್ನು ಬಳಸಿ ಇದನ್ನು ಅತ್ಯಂತ ಸುಲಭವಾಗಿ ಮಾಡಬಹುದು. ನೀವೂ ಇದನ್ನು ಟ್ರೈ ಮಾಡಿ ಥಾಯ್ ಸ್ಟೈಲ್‌ನ ಅಡುಗೆಯ ರುಚಿಯನ್ನೂ ಒಮ್ಮೆ ಆಸ್ವಾದಿಸಿ.
Advertisement
ಬೇಕಾಗುವ ಪದಾರ್ಥಗಳು:
ಅಕ್ಕಿ – ಒಂದೂವರೆ ಕಪ್
ತೆಂಗಿನ ಹಾಲು – 400 ಎಂಎಲ್
ನೀರು – 1 ಕಪ್
ಉಪ್ಪು – ಚಿಟಿಕೆ ಇದನ್ನೂ ಓದಿ: ಬಿಸಿಲಿನಿಂದ ಬಳಲಿದವರಿಗೆ ಪವರ್ ಕೊಡುತ್ತೆ ಈ ಮಿಲ್ಕ್‌ಶೇಕ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆಯಿರಿ.
* ಅದಕ್ಕೆ ನೀರು, ತೆಂಗಿನ ಹಾಲು ಹಾಗೂ ಚಿಟಿಕೆ ಉಪ್ಪನ್ನು ಸೇರಿಸಿ.
* ಈಗ ಪಾತ್ರೆಯ ಮುಚ್ಚಳ ಮುಚ್ಚಿ, ಅಕ್ಕಿ ಕುದಿಯುವವರೆಗೆ ಮಧ್ಯಮ ಉರಿಯಲ್ಲಿ ಕಾಯಿಸಿ.
* ಅಕ್ಕಿ ಕುದಿಯಲು ಪ್ರಾರಂಭಿಸಿದಾಗ ಉರಿಯನ್ನು ಕಡಿಮೆ ಮಾಡಿ ಸುಮಾರು 30 ನಿಮಿಷಗಳ ಕಾಲ ಬೇಯಲು ಬಿಡಿ.
* ನಂತರ ಉರಿಯನ್ನು ಆಫ್ ಮಾಡಿ, ಅಕ್ಕಿಯನ್ನು ಸುಮಾರು 15 ನಿಮಿಷಗಳ ಕಾಲ ಮುಚ್ಚಿ ಹಾಗೆಯೇ ಬಿಡಿ.
* ಇದೀಗ ಕೊಕೊನಟ್ ರೈಸ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ವಯಸ್ಸಿನ ಭೇದವಿಲ್ಲ – ಪ್ರತಿಯೊಬ್ಬರಿಗೂ ಇಷ್ಟವಾಗುತ್ತೆ ಎಗ್ ಟಿಕ್ಕಾ ಕಬಾಬ್