ಊಟದ ಕೊನೆಯಲ್ಲಿ ಸಿಹಿ ಇಲ್ಲವೆಂದರೆ ಏನೋ ಕಡಿಮೆ ಎಂದು ಯಾವಾಗಲೂ ಎನಿಸುತ್ತದೆ. ನಾವಿಂದು ಯಾವುದೇ ಹಬ್ಬಕ್ಕೂ ಸೈ ಎನಿಸುವ ಒಂದು ಸಿಂಪಲ್ ಸ್ವೀಟ್ ರೆಸಿಪಿಯನ್ನು ಹೇಳಿಕೊಡುತ್ತೇವೆ. ಸುಲಭ, ರುಚಿಕರ ಮಾತ್ರವಲ್ಲದೇ ಪೌಷ್ಟಿಕಾಂಶಯುಕ್ತ ಗೋಧಿ ಹಿಟ್ಟಿನ ಲಡ್ಡು (Wheat Flour Laddu) ನೀವೂ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಗೋಧಿ ಹಿಟ್ಟು – 1 ಕಪ್
ಸಕ್ಕರೆ – ಅರ್ಧ ಕಪ್
ತುಪ್ಪ – ಕಾಲು ಕಪ್
ಗಸಗಸೆ – 1 ಟೀಸ್ಪೂನ್
ಒಣ ತೆಂಗಿನ ತುರಿ – 2 ಟೀಸ್ಪೂನ್
ಏಲಕ್ಕಿ ಪುಡಿ – 1 ಟೀಸ್ಪೂನ್
ಡ್ರೈ ಫ್ರೂಟ್ಸ್(ಗೋಡಂಬಿ, ಬಾದಾಮಿ, ಒಣದ್ರಾಕ್ಷಿ) – ಕಾಲು ಕಪ್ ಇದನ್ನೂ ಓದಿ: ಸಿಹಿಯಾದ ಪಪ್ಪಾಯಿ ಹಲ್ವಾ – ನೀವೊಮ್ಮೆ ಟ್ರೈ ಮಾಡಲೇ ಬೇಕು
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಸಕ್ಕರೆ ಮತ್ತು ಏಲಕ್ಕಿಯನ್ನು ಮಿಕ್ಸರ್ ಜಾರ್‌ಗೆ ಹಾಕಿ ಚೆನ್ನಾಗಿ ಪುಡಿ ಮಾಡಿ ಪಕ್ಕಕ್ಕಿಡಿ.
* ಈಗ ದಪ್ಪ ತಳದ ಪ್ಯಾನ್ ತೆಗೆದುಕೊಂಡು, ಅದರಲ್ಲಿ ತುಪ್ಪ ಹಾಕಿ, ಒಣ ಹಣ್ಣುಗಳನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿದುಕೊಳ್ಳಿ. ಬಳಿಕ ಪಕ್ಕಕ್ಕಿಡಿ.
* ಈಗ ಗಸಗಸೆಯನ್ನು ಪರಿಮಳ ಬರುವವರೆಗೆ ಫ್ರೈ ಮಾಡಿ, ಅದನ್ನೂ ಪಕ್ಕಕ್ಕಿಡಿ.
* ಬಳಿಕ ಗೋಧಿ ಹಿಟ್ಟನ್ನು ಪ್ಯಾನ್‌ಗೆ ಹಾಕಿ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ. ಗೋಧಿ ಹಿಟ್ಟಿನ ಬಣ್ಣ ಗೋಲ್ಡನ್ ಬ್ರೌನ್ ಆಗುವವರೆಗೆ ಚೆನ್ನಾಗಿ ಫ್ರೈ ಮಾಡಿ. ಅದು ಸುಡದಂತೆ ನೋಡಿಕೊಳ್ಳಿ.
* ಈಗ ಒಂದು ಪಾತ್ರೆ ತೆಗೆದುಕೊಂಡು, ಅದರಲ್ಲಿ ಗೋಧಿ ಹಿಟ್ಟು, ಸಕ್ಕರೆ ಪುಡಿ, ಒಣ ತೆಂಗಿನ ತುರಿ, ಹುರಿದ ಗಸಗಸೆ ಮತ್ತು ಒಣ ಹಣ್ಣುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
* ಹಿಟ್ಟನ್ನು ನಿಮ್ಮ ಕೈಯಿಂದ ಮುಟ್ಟಲು ಸಾಧ್ಯವಾಗುವಷ್ಟು ಬಿಸಿ ತಣ್ಣಗಾದ ಮೇಲೆ ಹಿಡಿ ಮಿಶ್ರಣ ತೆಗೆದುಕೊಂಡು, ನಿಂಬೆ ಹಣ್ಣಿನ ಗಾತ್ರದ ಲಡ್ಡುವಾಗಿ ಉಂಡೆಗಳನ್ನು ತಯಾರಿಸಿ.
* ಸಂಪೂರ್ಣ ಮಿಶ್ರಣವನ್ನು ಹೀಗೇ ಪುನರಾವರ್ತಿಸಿ. ಮೊದಲಿಗೆ ಲಡ್ಡುಗಳು ತೇವವಾಗಿದೆ ಎನಿಸಿದರೂ ಬಳಿಕ ಅದು ಸರಿಯಾಗುತ್ತದೆ.
* ಲಡ್ಡುಗಳನ್ನು ಸಂಪೂರ್ಣ ಆರಲು ಬಿಡಿ. ಬಳಿಕ ಗಾಳಿಯಾಡದ ಡಬ್ಬಿಯಲ್ಲಿ ಹಾಕಿ ಅವುಗಳನ್ನು ಶೇಖರಿಸಿಡಿ.
* ನೀವು ಬೇಕೆನಿಸಿದಾಗಿ ಗೋಧಿ ಹಿಟ್ಟಿನ ಲಡ್ಡುಗಳನ್ನು ಸವಿಯಬಹುದು. ಇದನ್ನೂ ಓದಿ: ಸಿಹಿಯಾದ ಕ್ಯಾರೆಟ್ ಬರ್ಫಿ ಟ್ರೈ ಮಾಡಿ ನೋಡಿ