ರಾಯಚೂರು: ಜಿಲ್ಲೆಯ ತುಂಗಭದ್ರಾ ಎಡದಂಡೆ ಕಾಲುವೆ (Tungabhadra canal) ಕೆಳಭಾಗಕ್ಕೆ ತುಂಗಭದ್ರಾ ಜಲಾಶಯದ ನೀರು ತಲುಪದ ಹಿನ್ನೆಲೆ ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ರೈತರು ಬೃಹತ್ ಹೋರಾಟ (Farmers Protest) ನಡೆಸಿದ್ದಾರೆ. ಪಟ್ಟಣದ ಬಳಿ ಕಾಲುವೆ 85ನೇ ಮೈಲ್ ನಲ್ಲಿ ನೂರಾರು ರೈತರು ರಸ್ತೆ ತಡೆದು ಪ್ರತಿಭಟನೆ ಮಾಡಿದರು.
ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಟ್ಟು ಎರಡು ತಿಂಗಳುಗಳು ಕಳೆದಿದೆ, ತುಂಗಭದ್ರ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಿದ್ದು ನದಿಗೆ ಪ್ರತಿ ನಿತ್ಯ 25 ಸಾವಿರ ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಜಲಾಶಯದ ಒಳಹರಿವು ಕೂಡ ಉತ್ತಮವಾಗಿದೆ. ಇಷ್ಟಿದ್ದರೂ ಮಾನ್ವಿ ಮತ್ತು ಸಿರವಾರ ಭಾಗದ ಮೈಲ್ 85 ,82, 90, 92, 89ರ ವ್ಯಾಪ್ತಿಯ ಕೆಳ ಭಾಗದ ರೈತರ ಜಮೀನುಗಳಿಗೆ ಇನ್ನೂ ಕೂಡ ವಾರಬಂದಿಯಂತೆ ನೀರು ದೊರೆಯುತ್ತಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮುನಿರತ್ನ, ಹೆಚ್‌ಡಿಕೆ ವಿರುದ್ಧದ ಪ್ರಕರಣಗಳ ತನಿಖೆಗೆ ಒಕ್ಕಲಿಗ ಸಚಿವರು, ಶಾಸಕರ ನಿಯೋಗದಿಂದ ಸಿಎಂಗೆ ಮನವಿ
ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಳಭಾಗದ 1 ಲಕ್ಷ 75 ಸಾವಿರ ಎಕರೆ ಜಮೀನಿಗೆ ನೀರು ದೊರೆಯುತ್ತಿಲ್ಲ. ಕೆಳಭಾಗದ ರೈತರು ಹಾಕಿದ ಬೆಳೆಗಳು ಒಣಗುತ್ತಿವೆ ಅಂತ ರೈತರು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮತ್ತೊಂದು ಬಾಲಿವುಡ್ ಪ್ರಾಜೆಕ್ಟ್ ಒಪ್ಪಿಕೊಂಡ ನಟಿ- ‘ಆಶಿಕಿ 2’ ಹೀರೋಗೆ ಸಮಂತಾ ಜೋಡಿ