ಕಲಬುರಗಿ: ರಾಜ್ಯದಲ್ಲಿ ಕಾಂಗ್ರೆಸ್ (Congress) ಆಡಳಿತಕ್ಕೆ ಬಂದು ಒಂದು ವರ್ಷ ಮುಗಿದಿದ್ದು, ಒಂದರ್ಥದಲ್ಲಿ ಸರ್ಕಾರದ ಹನಿಮೂನ್ ಪೀರಿಯೆಡ್ ಮುಗಿದಿದೆ. ಆದರೆ ಅಭಿವೃದ್ಧಿ ಕೆಲಸಗಳು ಮಾತ್ರ ಶೂನ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಯಾವೊಬ್ಬ ಸಚಿವರು ಸಹ ಇಲ್ಲಿಯವರೆಗೆ ಒಂದು ಗುದ್ದಲಿ ಪೂಜೆ ಸಹ ನೆರವೇರಿಸಿಲ್ಲ. ಒಂದಾದರೂ ಹೊಸ ಅಭಿವೃದ್ಧಿಯ ಯೋಜನೆ ಕೂಡ ತರಲಿಲ್ಲ ಎಂದು ಹೇಳಿದರು. ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಂದರೂ ರಾಜ್ಯದ ರೈತರಿಗೆ ಹಣ ನೀಡುತ್ತಿಲ್ಲ. ತಾಂತ್ರಿಕ ದೋಷವಿದೆ ಎಂದು ಹೇಳುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದ್ದು, ರೈತರಿಗೆ ಈ ಸರ್ಕಾರ ಪರಿಹಾರ ಹಾಗೂ ಬೆಳೆ ವಿಮೆಯ ಹಣವು ಸಹ ನೀಡಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಿಜೋರಾಂನಲ್ಲಿ ಭಾರೀ ಮಳೆ- ಕಲ್ಲುಕ್ವಾರಿ ಕುಸಿದು 10 ಮಂದಿ ದುರ್ಮರಣ, ಹಲವರು ನಾಪತ್ತೆ
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ಮಟ್ಕಾ ಗೆ ಸಂಬಂಧಿಸಿದ ಘಟನೆಯಲ್ಲಿ ಚನ್ನಗಿರಿಯಲ್ಲಿ (Channagiri) ಪೋಲಿಸರಿಗೆ ಪೋಲಿಸರೇ ರಕ್ಷಣೆ ಕೊಡುವ ಪರಿಸ್ಥಿತಿ ಬಂದಿದೆ. ಸಾವಿರಾರು ಜನರು ಪೋಲಿಸ್ ಠಾಣೆಗೆ ನುಗ್ಗಿ ಪೋಲಿಸರ ಮೇಲೆ ಹಲ್ಲೆ ನಡೆಸಿದ್ದು, ಇವೆಲ್ಲವೂ ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿಗೆ ಬಂದು ಮುಟ್ಟಿದೆ ಎಂಬುದು ಅರಿವಾಗುತ್ತದೆ. ರಾಜ್ಯದಲ್ಲಿ ಗೃಹ ಸಚಿವರು ಇದ್ದಾರೆಯೇ ಎಂಬುದು ಅನುಮಾನವಾಗಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಮಾಜಿ ಮ್ಯಾನೇಜರ್ ಹತ್ಯೆ ಪ್ರಕರಣ – ಸ್ವಯಂ ಘೋಷಿತ ದೇವಮಾನವ ರಾಮ್ ರಹೀಮ್ ಸಿಂಗ್‌ಗೆ ರಿಲೀಫ್
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 85 ಕೋಟಿ ರೂ. ಹಗರಣ ನಡೆದಿದೆ. ಓರ್ವ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎಲ್ಲಿ ಹೋಯಿತು ನಿಮ್ಮ ಭ್ರಷ್ಟಚಾರ ತಡೆ ನಿಲುವು. ಭ್ರಷ್ಟಾಚಾರದ ಪಿತಾಮಹ ಯಾರಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ. ಡೆತ್‌ನೋಟ್‌ನಲ್ಲಿ ಕೆಲ ಉನ್ನತ ಅಧಿಕಾರಿಗಳ ಹೆಸರು ಹೇಳಲಾಗಿದೆ. ಈ ಘಟನೆ ಸಂಬಂಧ ಸಚಿವರನ್ನು ಮಂತ್ರಿ ಮಂಡಲದಿಂದ ಕೈಬಿಡಬೇಕು. ಸಿಟ್ಟಿಂಗ್ ಹೈಕೋರ್ಟ್ ಜಡ್ಜ್ರಿಂದ ಉನ್ನತಮಟ್ಟದ ತನಿಖೆ ನಡೆಸಲೇಬೇಕು. ಇದರಲ್ಲಿ ಸಚಿವ ನಾಗೇಂದ್ರ ಭಾಗಿ ಆಗಿದ್ದಾರೆ. ಮಂತ್ರಿ ನಾಗೇಂದ್ರರನ್ನು ಕೈಬಿಡದಿದ್ದರೆ ರಾಜ್ಯದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಕೈ ಶಾಸಕ ರಾಜು ಕಾಗೆ ಎದುರಿನಲ್ಲೇ ಆಪ್ತನಿಂದ ಮಾಧ್ಯಮ ಪ್ರತಿನಿಧಿಗಳಿಗೆ ಧಮ್ಕಿ
ಮಧು ಬಂಗಾರಪ್ಪ ಕಟ್ಟಿಂಗ್‌ಗೆ ಬಿಜೆಪಿ ಯುವ ಮೋರ್ಚಾದಿಂದ ದೇಣಿಗೆ ಹಣ:
ಮಧು ಬಂಗಾರಪ್ಪ (Madhu Bangarappa) ಓರ್ವ ಶಿಕ್ಷಣ ಸಚಿವನಾಗಿ ಎಲ್ಲರಿಗೂ ಮಾದರಿಯಾಗಿರಬೇಕು. ಮಧು ಬಂಗಾರಪ್ಪ ಕೇಶವಿನ್ಯಾಸದ (Hair Style) ಬಗ್ಗೆ ಶಿಕ್ಷಕರು ದಾವಣಗೆರೆಯಲ್ಲಿ ಹೇಳಿದ್ದನ್ನು ನಾನು ಹೇಳಿದ್ದೇನೆ. ಶಿಕ್ಷಕರು ಹೇಳಿರೋ ಮಾತನ್ನು ನಾನು ಮಧು ಬಂಗಾರಪ್ಪಗೆ ಹೇಳಿದ್ದೇನೆ ಎಂದರು. ಇದನ್ನೂ ಓದಿ: ಆರೋಗ್ಯ ಸಮಸ್ಯೆ ಹಿನ್ನೆಲೆ ಜಾಮೀನು ವಿಸ್ತರಣೆ ಕೋರಿ ಕೇಜ್ರಿವಾಲ್ ಅರ್ಜಿ; ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ
ಮಧು ಬಂಗಾರಪ್ಪಗೆ ಹಣದ ಸಮಸ್ಯೆಯಿದ್ದರೆ ಹೇಳಲಿ, ನಮ್ಮ ಯುವ ಮೋರ್ಚಾ ಕಾರ್ಯಕರ್ತರಿಗೆ ಹೇಳುತ್ತೇನೆ. ನಮ್ಮ ಯುವ ಮೋರ್ಚಾದವರಿಗೆ ತಿಂಗಳಿಗೆ ಇಂತಿಷ್ಟು ಹಣ ಕೊಡಲು ಹೇಳುತ್ತೇನೆ. ಮಧು ಬಂಗಾರಪ್ಪ ಕಟ್ಟಿಂಗ್‌ಗಾಗಿ ತಿಂಗಳಿಗೆ ಇಂತಿಷ್ಟು ಹಣ ಕೊಡುತ್ತೇವೆ. ಕಟ್ಟಿಂಗ್ ಮಾಡಿ ಶಿಸ್ತಿನಿಂದ ಇರಲಿ ಎಂದು ಹೇಳಿದರು. ಇದನ್ನೂ ಓದಿ: ಅಬ್ದುಲ್ ಕಲಾಂ ಹೇರ್ ಸ್ಟೈಲ್ ಬಗ್ಗೆ ಮಾತನಾಡಿದ್ದಾರಾ? – ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕೆಂಡಾಮಂಡಲ
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಬಸವರಾಜ ಮತ್ತಿಮಡು, ಅವಿನಾಶ್ ಜಾಧವ್, ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಬಿ.ಜಿ.ಪಾಟೀಲ್, ಶಶೀಲ ನಮೋಶಿ, ಸುನೀಲ್ ವಲ್ಯಾಪುರ್, ಈಶಾನ್ಯ ಪದವೀಧರ ಮತಕ್ಷೇತ್ರದ ಅಭ್ಯರ್ಥಿ ಅಮರನಾಥ ಪಾಟೀಲ್, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಗ್ರಾಮೀಣಾಧ್ಯಕ್ಷ ಶಿವರಾಜ್ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ – ಅಧಿಕಾರಿಗಳು, ಬ್ಯಾಂಕ್ ಉದ್ಯೋಗಿ ವಿರುದ್ಧ ಎಫ್‌ಐಆರ್