‘ಈಗಲೂ ನಾನು ಗೋಮಾಂಸ ತಿನ್ನುತ್ತೇನೆ’ ಎಂದಿರುವ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನ ವಿಡಿಯೋ ವೈರಲ್

Public TV
1 Min Read
vivek agnihotri

ಗೋಮಾಂಸ (Beef) ತಿನ್ನುವ ವಿಚಾರವಾಗಿ ಬ್ರಹ್ಮಾಸ್ತ್ರ (Brahmastra) ಸಿನಿಮಾದ ನಟ ರಣಬೀರ್ ಕಪೂರ್ ಅವರನ್ನು ದೇವಸ್ಥಾನದ ಒಳಗೆ ಬಿಡಲಿಲ್ಲ ಎನ್ನುವ ವಿಚಾರ ಸಖತ್ ಸದ್ದು ಮಾಡಿತ್ತು. ಸಿನಿಮಾ ಬಿಡುಗಡೆಗೂ ಮುನ್ನ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಲು ಹೊರಟಿದ್ದ ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ ಅವರನ್ನು ದೇವಸ್ಥಾನದ ಒಳಗೆ ಹೋಗದಂತೆ ಭಜರಂಗ ದಳದ ಕಾರ್ಯಕರ್ತರು ತಡೆದಿದ್ದರು. ಅಲ್ಲದೇ, ಬ್ರಹ್ಮಾಸ್ತ್ರ ಸಿನಿಮಾ ಬಾಯ್ಕಾಟ್ (Boycott) ಅಭಿಯಾನ ಕೂಡ ಆರಂಭಿಸಿದ್ದಾರೆ. ಇದನ್ನೂ ಓದಿ:ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎದುರು ಅಬ್ಬರಿಸಲಿದ್ದಾರೆ ಸಂಜಯ್ ದತ್

The Delhi Files 4

ರಣಬೀರ್ ಕಪೂರ್ ಈ ಹಿಂದೆ ಹೇಳಿದ್ದ ವಿಡಿಯೋದಲ್ಲಿ ಗೋಮಾಂಸ ತಿನ್ನುವ ವಿಚಾರ ಪ್ರಸ್ತಾಪ ಆಗಿತ್ತು. ಅದನ್ನೇ ಇಟ್ಟುಕೊಂಡು ಹಿಂದೂಪರ ಸಂಘಟನೆಗಳು ಪ್ರತಿಭಟಿಸಿದ್ದವು. ಇದೀಗ ಇಂಥದ್ದೇ ಸಂಕಷ್ಟಕ್ಕೆ ಸಿಲುಕಿದ್ದಾರೆ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files)  ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri). ಈ ಹಿಂದೆ ಅವರು ಸಂದರ್ಶನವೊಂದರಲ್ಲಿ ‘ನಾನು ಈ ಹಿಂದೇನೂ ಗೋಮಾಂಸ ತಿನ್ನುತ್ತಿದ್ದೆ, ಈಗಲೂ ತಿನ್ನುತ್ತೇನೆ’ ಎಂದು ಹೇಳಿರುವ ಮಾತಿನ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದಾ ಹಿಂದೂಪರ ಯೋಚನೆ ಮಾಡುವ ವಿವೇಕ್ ಬಗ್ಗೆ ಭಜರಂಗ ದಳ ಯಾಕೆ ಸುಮ್ಮನಿದೆ ಎಂದು ಹಲವರು ಪ್ರಶ್ನಿಸಿದ್ದಾರೆ.

ಗೋಮಾಂಸ ತಿನ್ನುತ್ತೇನೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿರುವ ವಿವೇಕ್ ಅಗ್ನಿಹೋತ್ರಿ ಸಿನಿಮಾಗಳನ್ನು ಬಹಿಷ್ಕರಿಸಬೇಕು ಮತ್ತು ಅವರನ್ನೂ ಯಾವುದೇ ದೇವಸ್ಥಾನದ ಒಳಗೆ ಬಿಡಕೂಡದು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ರಣಬೀರ್ ಪರ ನಿಂತಿದ್ದ ಸಾಕಷ್ಟು ಅಭಿಮಾನಿಗಳು ಈ ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ. ಕೇವಲ ರಣಬೀರ್ ಗಷ್ಟೇ ಈ ಬಿಸಿ ತಾಗಬಾರದು, ವಿವೇಕ್ ಅಗ್ನಿಹೋತ್ರಿ ಮೇಲೂ ಕ್ರಮ ಆಗಬೇಕು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

kashmir

ಸೋಷಿಯಲ್ ಮೀಡಿಯಾದಲ್ಲಿ ವಿವೇಕ್ ಅಗ್ನಿಹೋತ್ರಿ ಅವರ ವಿಡಿಯೋ ವೈರಲ್ ಆಗುತ್ತಿದ್ದರೂ, ಆ ಕುರಿತು ವಿವೇಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಹಿಂದೂಪರ ಸಂಘಟನೆಗಳ ಸದಸ್ಯರ ಹಾಗೂ ರಣಬೀರ್ ಕಪೂರ್ ಅಭಿಮಾನಿಗಳ ಮಧ್ಯೆ ಕಾಮೆಂಟ್ ಗಳ ಯುದ್ಧವೇ ಶುರುವಾಗಿದೆ. ಪರ ವಿರೋಧದ ಸಾಕಷ್ಟು ಸಂದೇಶಗಳು ಬರುತ್ತಿವೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *