ಬಳ್ಳಾರಿ: ಕಾಂಗ್ರೆಸ್ ಶಾಸಕ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಬಿಜೆಪಿಗೆ ಬಂದಿರುವುದು ಸ್ವಾಗತಾರ್ಹ. ಅವರ ಸಹೋದರ ಪಕ್ಷಕ್ಕೆ ಬಂದ ಮೇಲೆ ಮುಂದೆ ನಾಗೇಂದ್ರ ಸಹ ಮರಳಿ ಬಿಜೆಪಿ ಬರಲಿದ್ದಾರೆಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿಯಲ್ಲಿಂದು ವೆಂಕಟೇಶ್ ಪ್ರಸಾದಗೆ ಬಿಜೆಪಿಯ ಶಾಲು ಹೊಂದಿಸಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಶಾಸಕ ಶ್ರೀರಾಮುಲು, ಶಾಸಕ ನಾಗೇಂದ್ರ ಬಿಜೆಪಿ ಸೇರ್ಪಡೆಯಾಗಲು ಕೆಲವೂ ಕಾನೂನು ತೊಡಕುಗಳಿವೆ. ಅವುಗಳು ಬಗೆಹರಿದ ಮೇಲೆ ನಾಗೇಂದ್ರ ಸಹ ಬಿಜೆಪಿ ಬರುವ ವಿಶ್ವಾಸವಿದೆ. ನಾಗೇಂದ್ರ ಬಿಎಸ್ ಯಡಿಯೂರಪ್ಪರ ಜೊತೆ ಚರ್ಚೆ ನಡೆಸಿದ್ದಾರೆ ಎಂದರು.
Advertisement
Advertisement
ಮೋದಿ ಒಬ್ಬರೇ ಚೌಕಿದಾರರಲ್ಲ. ಎಲ್ಲ ಬಿಜೆಪಿ ಕಾರ್ಯಕರ್ತರು ಸಹ ಚೌಕಿದಾರರಾಗಿದ್ದಾರೆ. ರಾಹುಲ್ ಗಾಂಧಿ ಸೋಮವಾರ ಚೋರ್ ಚೌಕಿದಾರ ಅಂದಿದ್ದು ಸರಿಯಲ್ಲ. ಈ ಬಾರಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡು ಬಿಜೆಪಿ ಅಭ್ಯರ್ಥಿ ಗೆಲ್ಲಿಸುವೆ. ನಾವು ಮೋದಿ ವರ್ಚಸ್ಸಿನ ಮೇಲೆಯೇ ಈ ಬಾರಿಯೂ ಚುನಾವಣೆಯನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕ್ಷಾಂಕಿಯಾಗಿದ್ದ ವೆಂಕಟೇಶ್ ಪ್ರಸಾದ್, ಈ ಬಾರಿ ಬಿಜೆಪಿ ಸೇರ್ಪಡೆಯಾಗುವ ಮೂಲಕ ಕಾಂಗ್ರೆಸ್‍ಗೆ ತಿರುಗೇಟು ನೀಡಿದ್ದಾರೆ. ಅಲ್ಲದೆ ಸಹೋದರ ವೆಂಕಟೇಶ್ ಪ್ರಸಾದ್, ಬಿಜೆಪಿ ಸೇರ್ಪಡೆಗೆ ಶಾಸಕ ನಾಗೇಂದ್ರ ಬೆಂಬಲ ಸಹ ಇದೆ. ಶಾಸಕ ನಾಗೇಂದ್ರ ಬಹಿರಂಗವಾಗಿ ಬಿಜೆಪಿ ಪರ ಪ್ರಚಾರ ಮಾಡದಿದ್ದರೂ ಹಿಂದಿನಿಂದ ಬಿಜೆಪಿಯ ಪರ ಕೆಲಸ ಮಾಡುವುದಂತೂ ಖಚಿತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಶಾಸಕ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಬಿಜೆಪಿ ಸೇರ್ಪಡೆಯಿಂದ ಕಾಂಗ್ರೆಸ್‍ಗೆ ಬಹುದೊಡ್ಡ ಆಘಾತ ಎನ್ನುವ ಮಾತುಗಳು ಜಿಲ್ಲೆಯ ರಾಜಕೀಯದಲ್ಲಿ ಕೇಳಿ ಬಂದಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv