ಪಾಕಿಸ್ತಾನದಲ್ಲಿ ಮುಸ್ಲಿಮರೇ ಸುರಕ್ಷಿತವಾಗಿಲ್ಲ, ಬೇರೆಯವ್ರು ಹೇಗೆ ಇರುತ್ತಾರೆ- ಪಾಕ್ ರಾಜಕಾರಣಿ

Public TV
1 Min Read
pak politician

– ಭಾರತದ ಆಶ್ರಯ ಕೇಳಿದ ಬಲದೇವ್
– ಇಮ್ರಾನ್ ಖಾನ್ ವಿರುದ್ಧ ಕಿಡಿ

ನವದೆಹಲಿ: ಪಾಕಿಸ್ತಾನದಲ್ಲಿ ಮುಸ್ಲಿಮರೇ ಸುರಕ್ಷಿತವಾಗಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಹಿಂದೂ ಹಾಗೂ ಸಿಖ್ಖರು ಹೇಗೆ ಅಲ್ಲಿ ಸುರಕ್ಷಿತವಾಗಿರುತ್ತಾರೆ ಎಂದು ಪಾಕ್ ಮೂಲದ ರಾಜಕಾರಣಿಯೊಬ್ಬರು ಭಾರತದ ಆಶ್ರಯ ಕೇಳಿದ್ದಾರೆ.

ಸಿಖ್ ಸಮುದಾಯಕ್ಕೆ ಸೇರಿದ ಪಾಕಿಸ್ತಾನದ ರಾಜಕಾರಣಿ ಬಲದೇವ್ ಕುಮಾರ್, ಪ್ರಧಾನಿ ಇಮ್ರಾನ್ ಖಾನ್ ಅವರ ಆಡಳಿತಾ ರೂಢ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್ ಪಕ್ಷದ ಮುಖಂಡರಾಗಿದ್ದಾರೆ. ಆದರೂ ಅವರದ್ದೇ ಸರ್ಕಾರದ ವಿರುದ್ಧ ಪರೋಕ್ಷವಾಗಿ ಬಲದೇವ್ ಕಿಡಿಕಾರಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ:ಪಾಕ್‍ನಲ್ಲಿ ಮತ್ತೊಬ್ಬಳು ಯುವತಿಯ ಅಪಹರಣ – ಬಲವಂತವಾಗಿ ಇಸ್ಲಾಂಗೆ ಮತಾಂತರ

Imran Khan 1

ಪಾಕಿಸ್ತಾನದಲ್ಲಿ ಈಗ ಸಿಖ್ ಮತ್ತು ಮುಸ್ಲಿಂ ಸಮುದಾಯ ಸುರಕ್ಷಿತವಾಗಿಲ್ಲ. ಹೀಗಾಗಿ ಭಾರತದಲ್ಲಿ ನಮಗೆ ಆಶ್ರಯ ಕೊಡಬೇಕೆಂದು ಬಲದೇವ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಕಳೆದ ತಿಂಗಳು ಪಂಜಾಬ್‍ನ ಲೂಧಿಯಾನ ಜಿಲ್ಲೆಯ ಖಾನ್ನಾ ಗ್ರಾಮಕ್ಕೆ ಬಲದೇವ್ ಅವರು ತಮ್ಮ ಕುಟುಂಬ ಸಮೇತರಾಗಿ ಆಗಮಿಸಿದ್ದರು. ಆಗ ಮಾಧ್ಯಮಗಳ ಜೊತೆ ಮಾತನಾಡಿ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳಿಗೆ ರಕ್ಷಣೆ ಇಲ್ಲ. ಪಾಕಿಸ್ತಾನದಲ್ಲಿ ಸ್ವತಃ ಮುಸ್ಲಿಮರು ಸಹ ಸುರಕ್ಷಿತವಾಗಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ:ಪಾಕ್‍ನಲ್ಲಿ ಅಪಹರಣ ಆಗಿದ್ದ ಸಿಖ್ ಯುವತಿ ವಾಪಾಸ್ – 8 ಮಂದಿ ಅರೆಸ್ಟ್

Pak

ಇಮ್ರಾನ್ ಖಾನ್ ಪ್ರಧಾನಿಯಾದಾಗ ಪಾಕ್ ಬದಲಾಗುತ್ತದೆ ಎಂದು ಭಾವಿಸಿದ್ದೆವು. ಆದರೆ ನಾವು ನಿರೀಕ್ಷಿಸಿದಂತೆ ಆಗಲಿಲ್ಲ. ಎಲ್ಲವೂ ತಲೆಕೆಳಗಾಗಿದೆ. ಅಲ್ಪಸಂಖ್ಯಾತರು ಅಪಾಯದಲ್ಲಿದ್ದಾರೆ. ಅಲ್ಲಿ ಅವರಿಗೆ ಉಳಿಗಾಲವಿಲ್ಲ. ಪ್ರಧಾನಿ ಇಮ್ರಾನ್ ಖಾನ್ ಕೈಯಲ್ಲಿ ಅಧಿಕಾರವಿದೆ. ಪಾಕಿಸ್ತಾನ ಸೇನೆಗೂ ಹೆಚ್ಚು ಅಧಿಕಾರ ನೀಡಲಾಗಿದೆ. ಆದ್ದರಿಂದ ಅಲ್ಪಸಂಖ್ಯಾತರಿಗೆ ಅಲ್ಲಿ ಹೆಚ್ಚಿನ ಅಪಾಯವಿದೆ. ಇಡೀ ಪಾಕಿಸ್ತಾನ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎನ್ನುವ ವಿಚಾರ ಜಗತ್ತಿಗೇ ಗೊತ್ತಿದೆ ಎಂದು ಹರಿಹಾಯ್ದರು.

Modi

ಸಿಂಧ್ ಪ್ರಾಂತ್ಯದಲ್ಲಿ ಸಿಖ್ ಬಾಲಕಿ, ಯುವತಿಯರನ್ನು ಅಪಹರಿಸಿ ಬಲವಂತದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಿಸಲಾಗುತ್ತಿದೆ. ಇದನ್ನೆಲ್ಲಾ ನೋಡಿ ನಾನು ಬೇಸತ್ತಿದ್ದೇನೆ. ಹೀಗಾಗಿ ನಮಗೆ ಭಾರತ ಸರ್ಕಾರ ಆಶ್ರಯ ನೀಡಬೇಕು, ನಮ್ಮ ನೆರವಿಗೆ ನಿಲ್ಲುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಳ್ಳುವುದಾಗಿ ಬಲದೇವ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *