ಬೆಂಗಳೂರು: ಮುಡಾ (MUDA) ಕೇಸ್‌ನಲ್ಲಿ ಹೈಕಮಾಂಡ್ ಸಿದ್ದರಾಮಯ್ಯ (CM Siddarmaiah) ಪರ ಇದೆ. ಹೈಕೋರ್ಟ್‌ನಲ್ಲಿ ಸಿದ್ದರಾಮಯ್ಯ ಅವರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಸಚಿವ ಎಂ.ಬಿ ಪಾಟೀಲ್ (M B Patil) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ಮುಡಾ ಕೇಸ್ ವಿಚಾರದಲ್ಲಿ ನಿಶ್ಚಿತವಾಗಿ ಗೆಲುವು ಸಿಗಲಿದೆ. ಮುಡಾ ಕೇಸ್ ನಲ್ಲಿ ಏನು ಇಲ್ಲ. ಇದರಲ್ಲಿ ತಪ್ಪು ಆಗಿರೋದು ಮುಡಾದಿಂದ. ಮುಡಾ ಜಮೀನು ಪಡೆದು ಸೈಟ್ ಮಾಡಿದೆ. ಇದೊಂದು ಫಾಲ್ಸ್ ಕೇಸ್, ಕೋರ್ಟ್‌ನಲ್ಲಿ ವಜಾ ಆಗುತ್ತದೆ. ಆದಾದ ಮೇಲೆ ಬಿಜೆಪಿ (BJP) ಅವರಿಗೆ ಅಪಮಾನ ಆಗುತ್ತದೆ ಎಂದಿದ್ದಾರೆ.
ಈ ಕೇಸ್‌ನಲ್ಲಿ ಗೆದ್ದು ಸಿದ್ದರಾಮಯ್ಯ ಅವರು ಮತ್ತಷ್ಟು ಬಲಿಷ್ಟರಾಗುತ್ತಾರೆ. ಕುಮಾರಸ್ವಾಮಿ, ನಿರಾಣಿ, ಜೊಲ್ಲೆ, ಎಲ್ಲರಿಗೂ ಅನುಮತಿ ಕೇಳಿದ್ದಾರೆ. ಕುಮಾರಸ್ವಾಮಿ ಮೇಲೂ ರಾಜಕೀಯವಾಗಿ ನಾವು ಅಟ್ಯಾಕ್ ಮಾಡಬೇಕು. ಸ್ವಲ್ಪ ದಿನ ಕಾಯಿರಿ. ಕೊರೊನಾ, ಪಿಎಸ್‌ಐ ಕೇಸ್ ಎಲ್ಲಾ ಹಗರಣ ಹೊರಗೆ ಬರಲಿದೆ. ಕೋರ್ಟ್‌ನಲ್ಲಿ ಸಿದ್ದರಾಮಯ್ಯಗೆ ನ್ಯಾಯ ಸಿಕ್ಕೇ ಸಿಗುತ್ತದೆ. ಅದರಲ್ಲಿ ಅನುಮಾನ ಇಲ್ಲ. ಹೈಕಮಾಂಡ್, ನಮ್ಮ ಶಾಸಕರು, ಸಚಿವರು, ಪಕ್ಷದ ಕಾರ್ಯಕರ್ತರು, ಸಿದ್ದರಾಮಯ್ಯ ಪರ ಇದ್ದಾರೆ. ಇಡೀ ಕಾಂಗ್ರೆಸ್ ಸಿದ್ದರಾಮಯ್ಯ ಪರ ಇದೆ. ಯಾರು ಸಿಎಂ ಸ್ಥಾನಕ್ಕೆ ಟವಲ್ ಹಾಕಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಮುಂದೆಯೂ ಸಿಎಂ ಆಗಿ ಇರುತ್ತಾರೆ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.
ಬಳಿಕ ಬಿಜೆಪಿಯವರ ಆಪರೇಷನ್ ಕಮಲ ಪ್ರಯತ್ನ ಮಾಡ್ತಿರೋ ವಿಚಾರವಾಗಿ ಮಾತನಾಡಿದ ಅವರು 100 ಕೋಟಿ ರೂ. ಅಲ್ಲ 500 ಕೋಟಿ ರೂ. ಕೊಟ್ಟರೂ ನಮ್ಮ ಶಾಸಕರು ಮಾರಾಟ ಆಗೋದಿಲ್ಲ. ಆಪರೇಷನ್ ಕಮಲ ಸಾಧ್ಯವೇ ಇಲ್ಲ ಅಂತ ಬಿಜೆಪಿ ನಾಯಕರಿಗೆ ಸಚಿವ ಎಂಬಿ ಪಾಟೀಲ್ ಸವಾಲ್ ಹಾಕಿದ್ದಾರೆ.
ನಮ್ಮ ಯಾವ ಶಾಸಕರು ಆಮಿಷಕ್ಕೆ ಬಲಿಯಾಗಲ್ಲ. 136 ಸ್ಥಾನ ಪಡೆದು ಬಾರಿ ಬಹುಮತದಿಂದ ಸರ್ಕಾರ ಮಾಡಿದ್ದೇವೆ. ಸರ್ಕಾರ ಬೀಳಬೇಕಾದ್ರೆ 2/3 ಶಾಸಕರನ್ನು ಕರೆದುಕೊಂಡು ಹೋಗಬೇಕು. ಅದು ಆಗದ ಮಾತು. ಬಿಜೆಪಿ-ಜೆಡಿಎಸ್‌ನಿಂದಲೂ 10-12 ಜನ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ. ಈ ಸರ್ಕಾರ ಕೆಡವಲು ಆಗೋದಿಲ್ಲ. ಆಪರೇಷನ್ ಕಮಲ ವರ್ಕೌಟ್ ಆಗೊಲ್ಲ. 100 ಕೋಟಿ ರೂ. ಅಲ್ಲ. 500 ಕೋಟಿ ರೂ. ಕೊಟ್ಟರೂ ನಮ್ಮ ಶಾಸಕರನ್ನು ಕರೆದುಕೊಂಡು ಹೋಗಲು ಆಗೋದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.