ಲಕ್ನೋ: ನಮ್ಮ ಕೆಲಸಕ್ಕೆ ಪ್ರತಿಯಾಗಿ ನೀವು (ಮುಸ್ಲಿಮರು) ನಮಗೆ ಮತ ನೀಡಬೇಕೆಂದು ಕೇಂದ್ರ ಸಚಿವೆ ಮನೇಕಾ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಅವರ ಪುತ್ರ, ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಮುಸ್ಲಿಂ ಮತದಾರರ ಮನವೊಲಿಸಲು ಮುಂದಾಗಿದ್ದಾರೆ.
ಉತ್ತರ ಪ್ರದೇಶದ ಪಿಲಿಭಿತ್‍ನಲ್ಲಿ ಪ್ರಚಾರದ ವೇಳೆ ಮಾತನಾಡಿದ ವರುಣ್ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕಾಗಿ ಶ್ರಮಿಸುತ್ತಿದ್ದಾರೆ. ಅವರಿಗೆ ಯಾವುದೇ ಧರ್ಮ, ಜಾತಿ ಇಲ್ಲ. ಮುಸ್ಲಿಮರು ನನಗೆ ಮತ ಹಾಕಿ ಗೆಲ್ಲಿಸುವಂತೆ ಮನವಿ ಮಾಡಿಕೊಳ್ಳುತ್ತಿರುವೆ ಎಂದರು.
Advertisement
ಮುಸ್ಲಿಮರು ನನಗೆ ಮತ ಹಾಕಿದರೆ ಭಾರೀ ಅಂತರದಿಂದ ಗೆಲುವು ಸಾಧಿಸುತ್ತೇನೆ. ಇದು ನನಗೆ ಬಹಳ ಖುಷಿ ತಂದು ಕೊಡುತ್ತದೆ. ಒಂದು ವೇಳೆ ಮತ ಹಾಕದಿದ್ದರೂ ಪರವಾಗಿಲ್ಲ. ನನ್ನಿಂದ ಕೆಲಸವನ್ನು ತೆಗೆದುಕೊಳ್ಳಬಹುದು. ನನ್ನ ಚಹಾದಲ್ಲಿ ನಿಮ್ಮ ಬಳಿ ಇರುವ ಸಕ್ಕರೆ ಸೇರಿದರೆ ಮತ್ತಷ್ಟು ಸಿಹಿಯಾಗುತ್ತದೆ. ನಾನೇನಾದರೂ ತಪ್ಪು ಹೇಳಿದ್ನಾ? ಮುಸ್ಲಿಮರು ನನ್ನ ಚಹಾದಲ್ಲಿ ಸಕ್ಕರೆ ಹಾಕುತ್ತೀರಾ ಎಂದು ಸಮಾವೇಶದಲ್ಲಿ ಸೇರಿದ್ದ ಮುಸ್ಲಿಂ ಮತದಾರರನ್ನು ಪ್ರಶ್ನಿಸಿದರು.
Advertisement
#WATCH BJP's Varun Gandhi in Pilibhit, earlier today: Bas mein ek cheez Muslim bhai ko bolna chahta hun ki agar aapne mujhe vote diya toh mujhe bahut accha lagega, agar aapne mujhe vote nahi diya, koi baat nahi, tab bhi mujh se kaam le le na, koi dikat ki baat nahi. pic.twitter.com/xMLzreAJ1k
— ANI UP/Uttarakhand (@ANINewsUP) April 21, 2019
Advertisement
ಮನೇಕಾ ಗಾಂಧಿ ಹೇಳಿದ್ದೇನು?:
ಈ ಮೊದಲು ಸುಲ್ತಾನಪುರದ ಬಿಜೆಪಿ ಅಭ್ಯರ್ಥಿಯಾಗಿರುವ, ಕೇಂದ್ರ ಸಚಿವೆ ಮನೇಕಾ ಗಾಂಧಿ, ಮುಸ್ಲಿಮರ ಮತಗಳ ಹೊರತಾಗಿ ನಾನು ಜಯ ಸಾಧಿಸುತ್ತೇನೆ. ಮುಸ್ಲಿಂ ಸಮುದಾಯದ ಮತ ಪಡೆಯದೇ ಜಯ ಸಾಧಿಸಲು ನನಗೆ ಇಷ್ಟವಿಲ್ಲ. ಗೆದ್ದ ಮೇಲೆ ಕೆಲಸ ಕೇಳಿಕೊಂಡು ಮುಸ್ಲಿಮರು ಬಂದಾಗ ನಾನು ನೂರು ಬಾರಿ ಯೋಚಿಸಿ ಉದ್ಯೋಗ ನೀಡೋದು ಬೇಡ ಎಂದು ನಿರ್ಧರಿಸಬೇಕಾಗುತ್ತದೆ. ಮತದ ಬದಲಾಗಿ ಉದ್ಯೋಗ ನೀಡೋದು ವ್ಯವಹಾರ ಎಂದು ಮುಸ್ಲಿಮರು ತಿಳಿದುಕೊಳ್ಳಬೇಕಿದೆ. ನಾವೇನು ಮಹಾತ್ಮ ಗಾಂಧೀಜಿಯ ಕುಟುಂಬಸ್ಥರು ಅಲ್ಲ. ಕೇವಲ ಕೊಡುವುದು ಗೊತ್ತಿಲ್ಲ. ನಮ್ಮ ಕೆಲಸಕ್ಕೆ ಪ್ರತಿಯಾಗಿ ನೀವು ನಮಗೆ ಮತ ನೀಡಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದರು.