ಬಿಗ್ ಬಾಸ್ ಮಾಜಿ ಸ್ಪರ್ಧಿ ಉರ್ಫಿ ಜಾವೇದ್ ಮೇಲೆ ಅನೇಕ ದೂರುಗಳು ಸಲ್ಲಿಕೆಯಾಗಿದ್ದವು. ಅರೆಬರೆ ಡ್ರೆಸ್ ಹಾಕಿ, ಸಮಾಜದ ನೋಟವನ್ನೇ ಹಾಳು ಮಾಡುತ್ತಿದ್ದಾರೆ ಎಂದು ಕೆಲವರು ಕಿಡಿಕಾರಿದ್ದರು. ಹಾಗಾಗಿ ಮೊನ್ನೆಯಷ್ಟೇ ಅವರು ಗೌರಮ್ಮನ ರೀತಿಯಲ್ಲಿ ಬಟ್ಟೆ ಧರಿಸಿದ್ದರು. ಈ ಬದಲಾವಣೆ ಕಂಡು ಬಹುತೇಕರು ಅಚ್ಚರಿ ಪಡಿಸಿದ್ದರು. ದೂರಿಗೆ ಉರ್ಫಿ ಹೆದರಿಕೊಂಡು ಬದಲಾಗಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ, ಉರ್ಫಿ ಬದಲಾಗಿಲ್ಲ.
Advertisement
ದೂರು ನೀಡಿದವರ ವಿರುದ್ಧವೇ ಪ್ರತಿಭಟನೆ ಅನ್ನುವಂತೆ ಉರ್ಫಿ ಇದೀಗ ಮತ್ತೆ ತಮ್ಮ ನಿತ್ಯದ ಕಸುಬು ಶುರು ಮಾಡಿದ್ದಾರೆ. ಎಂದಿನಂತೆ ತಮ್ಮಿಷ್ಟದ ಕಾಸ್ಟ್ಯೂಮ್ ತೊಟ್ಟು ಪ್ರತಿಭಟಿಸಿದ್ದಾರೆ. ಮೊಬೈಲ್ ಮೂಲಕ ತಮ್ಮ ಮಾನ ಮುಚ್ಚುವಂತೆ ಬಟ್ಟೆ ಹಾಕಿಕೊಂಡು ಮತ್ತೆ ಬೀದಿಗೆ ಇಳಿದಿದ್ದಾರೆ. ತಾವು ಯಾರಿಗೂ ಹೆದರುವುದಿಲ್ಲ ಮತ್ತೆ ತಮ್ಮಿಷ್ಟದಂತೆಯೇ ಬದುಕುವುದಾಗಿಯೂ ಅವರು ಈ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ:ನನ್ನ ಮಗನ ಕಾರು ಅಪಘಾತಕ್ಕೆ ‘ಬುಧ ಭಕ್ತಿ’ ಕಾರಣ ಎಂದ ಜಗ್ಗೇಶ್
Advertisement
Advertisement
ಬಾಲಿವುಡ್ ನಟಿ, ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್ ಮುಂಬೈ ಬೀದಿಯಲ್ಲಿ ಬಿಕಿನಿ ಧರಿಸಿ ಓಡಾಡಿದರು ಎನ್ನುವ ಕಾರಣಕ್ಕಾಗಿ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆಯೇ ಉರ್ಫಿ ಗರಂ ಆಗಿದ್ದರು. ಅತ್ಯಾಚಾರಿಗಳ ಮೇಲೆ ದೂರು ಕೊಡಿ, ನನ್ನ ಮೇಲಲ್ಲ ಎಂದು ದೂರು ನೀಡಿದವರು ವಿರುದ್ಧ ಮಾತನಾಡಿದ್ದರು.
Advertisement
ನಾನು ತಾಲಿಬಾನ್ ನಲ್ಲಿ ವಾಸಿಸುತ್ತಿಲ್ಲ. ಭಾರತದಲ್ಲಿ ಬದುಕುತ್ತಿರುವೆ. ಇಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ನಮಗಿಷ್ಟ ಬಂದಂತೆ ಬಟ್ಟೆ ಧರಿಸಲು ಅವಕಾಶವಿಲ್ಲವಾ? ಎಂದು ಅವರು ಕೇಳಿದ್ದಾರೆ. ಬಿಕಿನಿ ಧರಿಸಿದರೆ ನಿಮಗೆ ಸಮಸ್ಯೆ ಆಗುತ್ತದೆ ಅಂತಾದರೆ ಕಣ್ಣು ಮುಚ್ಚಿಕೊಂಡು ಓಡಾಡಿ ಎಂದು ಉರ್ಫಿ ಪುಕ್ಕಟೆ ಸಲಹೆಯನ್ನೂ ಕೊಟ್ಟಿದ್ದಾರೆ. ಯಾರು ಏನೇ ಹೇಳಿದರೂ, ದೂರು ಕೊಟ್ಟರು ನಾನು ನನ್ನಿಷ್ಟದಂತೆಯೇ ಬಟ್ಟೆಯನ್ನೇ ಧರಿಸುತ್ತೇನೆ ಎಂದು ಅವರು ಸವಾಲು ಹಾಕಿದ್ದಾರೆ.
ಉರ್ಫಿಗೆ ವಾರಕ್ಕೊಂದು ಗಲಾಟೆ ಮಾಡಿಕೊಳ್ಳದೇ ಇದ್ದರೆ, ನಿದ್ದೆಯೇ ಬರುವುದಿಲ್ಲ ಅನಿಸುತ್ತದೆ. ಹಾಗಾಗಿಯೇ ಏನಾದರೂ ಒಂದು ವಿಷಯ ತಗೆದುಕೊಂಡು ರಸ್ತೆಯಲ್ಲೇ ಬಾಯಿಗೆ ಬಂದಂತೆ ಮಾತನಾಡುತ್ತಲೇ ಇರುತ್ತಾರೆ. ದೂರಿನ ವಿಚಾರವನ್ನೂ ಅವರು ಹಾದಿ ರಂಪ, ಬೀದಿ ರಂಪ ಮಾಡಿದ್ದಾರೆ. ಕೊಳಕಾದ ಭಾಷೆಯಲ್ಲೇ ದೂರು ನೀಡಿದವರ ವಿರುದ್ಧ ಮಾತನಾಡಿದ್ದಾರೆ. ಅವರು ಬೈದಿರುವ ವಿಡಿಯೋಗಳು ವೈರಲ್ ಕೂಡ ಆಗಿವೆ.