ChikkamagaluruDistrictsKarnatakaLatestMain Post

ಭೂಮಿಯ ತೇವಾಂಶ ಹೆಚ್ಚಾಯ್ತು – ಮಲೆನಾಡಲ್ಲಿ ಮಳೆ ಕಡಿಮೆಯಾದ್ರೂ ಅನಾಹುತ ಕಡಿಮೆಯಾಗ್ತಿಲ್ಲ

ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾದರೂ ಅನಾಹುತಗಳ ಅಬ್ಬರ ಕಡಿಮೆಯಾಗುತ್ತಿಲ್ಲ. ಕಳೆದ 15 ದಿನಗಳಿಂದ ನಿರಂತರವಾಗಿ ಮಳೆ ಸುರಿದ ಪರಿಣಾಮ ಭೂಮಿಯ ತೇವಾಂಶ ಹೆಚ್ಚಾಗಿ ಬೆಟ್ಟ-ಗುಡ್ಡಗಳು ಕುಸಿಯುವ ಪ್ರಮಾಣ ಕೂಡ ಹೆಚ್ಚಾಗಿದೆ. ಮಳೆ ಕಡಿಮೆಯಾಗಿ 2 ದಿನವಾದರೂ ಬೆಟ್ಟ-ಗುಡ್ಡಗಳು ಕುಸಿಯುವುದು ಮಾತ್ರ ನಿಂತಿಲ್ಲ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಫಲ್ಗುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಗ್ಗಸಗೂಡು ಗ್ರಾಮದ ರವಿಗೌಡ ಅವರ ಮನೆ ಮುಂದಿನ ತೋಟದಲ್ಲಿ ಮಣ್ಣು ಕುಸಿದಿದೆ. ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದ ಪರಿಣಾಮ ತೋಟದಲ್ಲಿದ್ದ ಬಾವಿಯೂ ಮುಚ್ಚಿ ಹೋಗಿದೆ.

ಭೂಮಿಯ ತೇವಾಂಶ ಹೆಚ್ಚಾಗಿ ತೋಟದಲ್ಲಿನ ಗುಡ್ಡ ಜರಿಯುವ ವೇಳೆ ಮನೆಯ ಗೋಡೆ ಬಿರುಕು ಬಿಟ್ಟಿದೆ. ಮನೆಯ ಮೆಟ್ಟಿಲುಗಳು ಕೂಡ ಬಿರುಕು ಬಿಟ್ಟಿವೆ. ಮನೆಯ ಗೋಡೆಗಳು ಹಾಗೂ ಮೆಟ್ಟಿಲುಗಳು ಬಿರುಕುಬಿಟ್ಟಿರುವುದರಿಂದ ಮನೆಯವರು ಕೂಡ ಆತಂಕದಿಂದಿದ್ದಾರೆ. ಮನೆಯನ್ನು ಬಿಟ್ಟು ಸಂಬಂಧಿಕರ ಮನೆಯಲ್ಲಿ ವಾಸವಿದ್ದಾರೆ. ಇದನ್ನೂ ಓದಿ: ಬಾರ್ ಓಪನ್ ಆದ ಒಂದೇ ವರ್ಷಕ್ಕೆ ಏಳಕ್ಕೂ ಹೆಚ್ಚು ಮಂದಿ ಸಾವು – ಬಾರ್ ಬಂದ್ ಮಾಡುವಂತೆ ಉಗ್ರ ಹೋರಾಟ

ಮಲೆನಾಡಲ್ಲಿ ಈ ವರ್ಷ ಮಳೆ ಪ್ರಮಾಣ ಹೆಚ್ಚಾಗಿದ್ದು, ವಾರ್ಷಿಕ ಸರಾಸರಿ ಮಳೆಗಿಂತ ಈ ವರ್ಷ ಹೆಚ್ಚಾಗಿ ಸುರಿದಿದೆ. ಜನವರಿಯಿಂದಲೂ ಆಗಾಗ ಮಳೆ ಸುರಿಯುತ್ತಿದ್ದು, ಭೂಮಿಯ ತೇವಾಂಶ ಹೆಚ್ಚಾಗಿದೆ. ಇದರಿಂದ ಮಳೆ ನಿಂತರೂ ಅನಾಹುಗಳು ನಿಲ್ಲುತ್ತಿಲ್ಲ ಎಂದು ಸ್ಥಳೀಯರೇ ಭಾವಿಸಿದ್ದಾರೆ.

2018 ರಿಂದ ಪ್ರತಿ ಮಳೆಗಾಲದಲ್ಲೂ ಮಲೆನಾಡಲ್ಲಿ ಮಳೆ ಅಬ್ಬರ ಜೋರಾಗಿದೆ. ಈ ವರ್ಷವೂ ಅದೇ ರೀತಿ ಮಳೆಯಾಗಿದೆ. ಜೊತೆಗೆ ಇತ್ತೀಚೆಗೆ ಗಾಳಿ ಅಬ್ಬರ ಕೂಡ ಅಷ್ಟೆ ವೇಗವಾಗಿರುವುದರಿಂದ ಅನಾಹುತಗಳ ಪಟ್ಟಿಯೂ ದೊಡ್ಡದಾಗುತ್ತಿದೆ. ಮಳೆ ನಿಂತ ಮೇಲೂ ಆಗುತ್ತಿರುವ ಅನಾಹುತ ನೋಡಿ ಮಲೆನಾಡಿಗರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಕೇಂದ್ರದ ಹರ್ ಘರ್ ತಿರಂಗಾ ಅಭಿಯಾನವನ್ನು ಹೊಗಳಿದ ಜಮೀರ್

Live Tv

Leave a Reply

Your email address will not be published.

Back to top button