ರಿಚರ್ಡ್ ಆಂಟನಿ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿರುವ ರಕ್ಷಿತ್ ಶೆಟ್ಟಿ (Rakshit Shetty), ಬೆಂಗಳೂರಿನಿಂದ ಉಡುಪಿಗೆ ಪ್ರಯಾಣ ಬೆಳೆಸಿ ಮತ (Voting) ಹಾಕಿದ್ದಾರೆ. ಪ್ರತಿ ಬಾರಿಯೂ ಅವರು ತಪ್ಪದೇ ಮತದಾನದ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಾರೆ. ಮತದಾನದ ನಂತರ ಮಾಧ್ಯಮಗಳ ಜೊತೆಯ ಮಾತನಾಡಿದ್ದಾರೆ.
ಐದು ವರ್ಷದಲ್ಲಿ ಏನು ಅಭಿವೃದ್ಧಿಯಾಗಿದೆ ಎಂದು ನೋಡಿ ವೋಟ್ ಹಾಕುತ್ತೇನೆ. ಮುಂದಿನ ಐದು ವರ್ಷ ಯಾವ ನಾಯಕ ಅಧಿಕಾರಕ್ಕೆ ಬರಬೇಕು ಎಂದು ವೋಟ್ ಮಾಡ್ತೇನೆ. ಯೋಚನೆ ಮಾಡಿ ರಾಜಕೀಯ ತಿಳಿದವರ ಜೊತೆ ತರ್ಕ ಮಾಡಿ ಮತ ಹಾಕುತ್ತೇನೆ. ಯಾವಾಗಲೂ ನಾನು ಒಂದು ನಿರ್ಧಾರಕ್ಕೆ ಬಂದು ಮತ ಹಾಕುತ್ತೇನೆ. ದೇಶವನ್ನು ಚೆನ್ನಾಗಿ ನಡೆಸಿಕೊಂಡು ಹೋಗುವ ನಾಯಕ ಅಧಿಕಾರಕ್ಕೆ ಬರಬೇಕು ಎಂದಿದ್ದಾರೆ ರಕ್ಷಿತ್.
ನೆನ್ನೆ ರಾತ್ರಿ ಬೆಂಗಳೂರಿಂದ ಹೊರಟು ಉಡುಪಿಗೆ ಬಂದಿದ್ದೇನೆ. ನಾನು ಬೆಂಗಳೂರು ಸೇರಿ 18 ವರ್ಷ ಆಯ್ತು. ಪ್ರತಿ ಬಾರಿ ವೋಟಿಗೆ ನಾನು ಉಡುಪಿಗೆ ಬರುತ್ತೇನೆ, ವೋಟು ನಮ್ಮ ಹಕ್ಕು ನಮ್ಮ ಜವಾಬ್ದಾರಿ. ವೋಟ್ ಗೋಸ್ಕರ ಬೆಂಗಳೂರಿಂದ ಊರಿಗೆ ಬರುವುದು ಖುಷಿ. ನನ್ನ ಊರು ನನ್ನ ದೇಶ ನಮ್ಮ ಜವಾಬ್ದಾರಿ ಏನೋ ಖುಷಿ ಇದೆ ಅಂತಾರೆ ರಕ್ಷಿತ್ ಶೆಟ್ಟಿ.