ಇಸ್ಲಾಮಾಬಾದ್: ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ (Economic Crisis) ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ವಿಶ್ವದ ಕಣ್ಣಲ್ಲಿ ಪಾಕ್ (Pakistan) ಸ್ಥಿತಿ ಏನು ಎನ್ನುವುದನ್ನು ಪ್ರಧಾನಿ ಷೆಹಬಾಜ್ (Shehbaz Sharif) ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.
Advertisement
ಉಜ್ಬೇಕಿಸ್ತಾನ ಶಾಂಘೈ ಸಹಕಾರ ಸಂಘಟನೆ ದೇಶಗಳ (SCO) ಶೃಂಗಸಭೆಯಲ್ಲಿಂದು ಮಾತನಾಡಿದ ಶೆಹಬಾಜ್ ಷರೀಫ್, ಮಿತ್ರದೇಶಗಳು ಪಾಕಿಸ್ತಾನವನ್ನು ಭಿಕ್ಷುಕನಂತೆ (Begging) ನೋಡುತ್ತಿವೆ. ಯಾವುದೇ ದೇಶದ ಮುಖ್ಯಸ್ಥರಿಗೆ ಕರೆ ಮಾಡಿದ್ರೂ, ಇವರೇನೋ ಕೇಳೋಕೆ ಕರೆ ಮಾಡಿದ್ದಾರೆ ಅಂತಾನೆ ಭಾವಿಸುತ್ತಿವೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: Breaking: ಓಟಿಟಿಯಿಂದ ಬಿಗ್ ಬಾಸ್ 9ಕ್ಕೆ ಬರಲಿದ್ದಾರೆ ಈ ನಾಲ್ಕು ಜನ ಸ್ಪರ್ಧಿಗಳು
Advertisement
Advertisement
ದೇಶದಲ್ಲಿ ಭಾರಿ ಪ್ರವಾಹದಿಂದ (Flood) ಉಂಟಾದ ವಿನಾಶದ ಬಗ್ಗೆ ಮಾತನಾಡುತ್ತಾ ಪಿಎಂ ಶೆಹಬಾಜ್ ಷರೀಫ್, ಪ್ರವಾಹಕ್ಕೂ ಮುನ್ನ ನಮ್ಮ ಆರ್ಥಿಕತೆ ಹೆಣಗಾಡುತ್ತಿತ್ತು. ಈಗ ಪ್ರವಾಹ ಬಂದು ಇನ್ನಷ್ಟು ಹದಗೆಡಿಸಿತು. ನಾನು ಏಪ್ರಿಲ್‌ನಲ್ಲಿ ಅಧಿಕಾರ ವಹಿಸಿಕೊಂಡಾಗ ಪಾಕಿಸ್ತಾನದ ಆರ್ಥಿಕತೆ ಅಳಿವಿನ ಅಂಚಿನಲ್ಲಿತ್ತು. ನಮ್ಮ ಸರ್ಕಾರ (Pakistan Government) ಸ್ಥಾಪನೆಯಾದ ಬಳಿಕ ಸತತ ಪರಿಶ್ರಮದಿಂದ ದೇಶ ಉಳಿದಿದೆ ಜೊತೆಗೆ ಆರ್ಥಿಕ ಅಸ್ಥಿರತೆಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿಶೇಷತೆ ಏನು? ತಯಾರಿ ಹೇಗೆ?
Advertisement
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಹಣದುಬ್ಬರ ಗಗನಕ್ಕೇರುವಂತೆ ಮಾಡಿದ್ದಾರೆ. ಅನೇಕ ಒಪ್ಪಂದದ ನಿಯಮಗಳನ್ನು ಹಿಂದಿನ ಸರ್ಕಾರ ಉಲ್ಲಂಘಿಸಿದೆ. ಇದೆಲ್ಲವೂ ಇಂದಿನ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಶೆಹಬಾಜ್ ಷರೀಫ್ ಹೇಳಿದ್ದಾರೆ.