ಬಳ್ಳಾರಿ: ಜಿಲ್ಲೆಯ ಸಂಡೂರು (Sanduru) ತಾಲ್ಲೂಕಿನ ತಾರಾನಗರದಲ್ಲಿರುವ ಮತಗಟ್ಟೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷದ ಗುರುತಿಗಾಗಿ ಬಣ್ಣ ಬಣ್ಣದ ಶಾಲುಗಳನ್ನು ಧರಿಸಿಕೊಂಡು ಬರುತ್ತಿದ್ದಾರೆ.
ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಾದ ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣಕ್ಕೆ ಇಂದು (ನ.13) ಉಪಚುನಾವಣೆ ನಡೆಯುತ್ತಿದೆ.
Advertisement
Advertisement
ಸಂಡೂರು ಉಪಚುನಾವಣೆಯಲ್ಲಿ ಪಕ್ಷದ ಗುರುತಿಗಾಗಿ ಬಣ್ಣ ಬಣ್ಣದ ಶಾಲುಗಳನ್ನು ಧರಿಸಿ ಮುಖಂಡರು ಹಾಗೂ ಕಾರ್ಯಕರ್ತರು ಮತಗಟ್ಟೆಗೆ ಬಂದು ದಂಗಲ್ ಎಬ್ಬಿಸಿದ್ದಾರೆ. ಬಿಜೆಪಿ ಮುಖಂಡರು ಕೇಸರಿ, ಬಿಳಿ ಶಾಲು ಧರಿಸಿ ಹಾಗೂ ಕಾಂಗ್ರೆಸ್ ಮುಖಂಡರು ಹಸಿರು ಶಾಲು ಧರಿಸಿ ಬರುತ್ತಿದ್ದಾರೆ. ಇಲ್ಲಿಯ ಜನರು ಯಾವುದೇ ಚುನಾವಣೆ ನಡೆದರೂ ಶಾಲು ಧರಿಸಿಯೇ ಚುನಾವಣೆ ನಡೆಸುತ್ತಾರೆ.
Advertisement
ಇನ್ನೂ ಇಂದು ನಡೆಯುತ್ತಿರುವ ಉಪಚುನಾವಣೆಯಲ್ಲಿ ಸಂಡೂರು ಕ್ಷೇತ್ರದಿಂದ ಕಾಂಗ್ರೆಸ್ (Congress) ಅಭ್ಯರ್ಥಿಯಾಗಿ ಕಾಂಗ್ರೆಸ್ ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ ತುಕಾರಾಂ ಮತ್ತು ಬಿಜೆಪಿಯಿಂದ (BJP) ಬಂಗಾರು ಹನಮಂತ ಕಣದಲ್ಲಿದ್ದಾರೆ.
Advertisement