ಮುಂಬೈ: ಜಾರಿ ನಿರ್ದೇಶನಾಲಯದ(ಇಡಿ) ನಿಯಂತ್ರಣವನ್ನು ನಮ್ಮ ಪಕ್ಷಕ್ಕೆ ನೀಡಿದ್ರೆ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಕೂಡ ನಮಗೆ ಮತ ಹಾಕ್ತಾರೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಭಾನುವಾರ ಕಿಡಿಕಾರಿದರು.
ಶುಕ್ರವಾರ ಮಹಾರಾಷ್ಟ್ರದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಶಿವಸೇನೆ ಅಭ್ಯರ್ಥಿ ಸಂಜಯ್ ಪವಾರ್ ಸೋತರು. ಈ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಜಯ್ ರಾವತ್, ರಾಜ್ಯದಲ್ಲಿ ಆಡಳಿತಾರೂಢ ಸೇನೆ ಮತ್ತು ಬಿಜೆಪಿ ನಡುವಿನ ಪ್ರತಿಷ್ಠೆಯ ಹೋರಾಟವಾಗಿದೆ ಎಂದು ಮಾತನ್ನು ಪ್ರಾರಂಭ ಮಾಡಿದರು. ಇದನ್ನೂ ಓದಿ: ಅಡ್ಡ ಮತದಾನ: ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ದೂರಿಗೆ JDS ನಿರ್ಧಾರ
Advertisement
Advertisement
ಇಡಿ ನಿಯಂತ್ರಣವನ್ನು ನಮಗೆ 2 ದಿನ ಕೊಟ್ರೆ ಫಡ್ನವಿಸ್ ನಮಗೆ ವೋಟ್ ಮಾಡುತ್ತಿದ್ರು. ಕೆಲವು ಕುದುರೆಗಳು ಹೆಚ್ಚಿನ ಬೆಲೆಗೆ ಮಾರಾಟವಾಗಿದ್ದವು. ನಮ್ಮ ಪಕ್ಷಕ್ಕೆ ಮತ ಹಾಕುತ್ತೇವೆ ಎಂದು ಭರವಸೆ ಕೊಟ್ಟಿದ್ರೂ ಬೇರೆ ಪಕ್ಷಕ್ಕೆ ಮತ ಹಾಕಲಾಗಿದೆ ಎಂದು ಆಕ್ರೋಶ ಹೊರಹಾಕಿದರು.
Advertisement
Advertisement
ನಾವು ನಮ್ಮ ಭಾವನೆಗಳನ್ನು ಮಾತ್ರ ವ್ಯಕ್ತಪಡಿಸಿದ್ದೇವೆ. ನಾವು ಏನು ಹೇಳುತ್ತಿದ್ದೇವೆ ಎಂಬುದು ಅವರಿಗೂ, ಬಿಜೆಪಿಗೂ ತಿಳಿದಿದೆ. ಈ ಬೆಳವಣಿಗೆಯನ್ನು ನಾವು ಗಮನಿಸಿದ್ದೇವೆ. ಸಂಜಯ್ ಪವಾರ್ ಅವರ ಸೋಲಿನ ಬಗ್ಗೆ ಸಿಎಂ ಉದ್ಧವ್ ಠಾಕ್ರೆ ಬೇಸರಗೊಂಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮನೆಗೆ ಫೋನ್ ಮಾಡಲು ಬಿಡಲಿಲ್ಲ ಎಂದು ವಿದ್ಯಾರ್ಥಿ ಆತ್ಮಹತ್ಯೆ
ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಫಡ್ನವಿಸ್ ಅವರು ಬಿಜೆಪಿಯ ಆರನೇ ಸ್ಥಾನದ ಗೆಲುವಿಗೆ ಕಾರಣರಾಗಿದ್ದಾರೆ. ಶಿವಸೇನೆಯ ಸಂಜಯ್ ಪವಾರ್ ಅವರನ್ನು ಸೋಲಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಧನಂಜಯ್ ಮಹಾದಿಕ್ ಗೆದ್ದಿದ್ರು.