ಬೆಳಗಾವಿ: ಕೆಲವರು ಲಕ್ಷಾಧಿಪತಿಗಳು, ಕೋಟ್ಯಧಿಪತಿಗಳು ಇದ್ದಾರೆ. ಅವರೆಲ್ಲರೂ ಶಾಸಕರಾಗೋಕೆ ಸಾಧ್ಯವಾಗಿದ್ಯಾ? ಆದ್ರೆ ನಾನೊಬ್ಬ ಸಾಮಾನ್ಯನಾಗಿ ಶಾಸಕನಾಗಿದ್ದೇನೆ (MLA) ಎಂದು ಬಿಜೆಪಿ (BJP) ಶಾಸಕ ರೇಣುಕಾಚಾರ್ಯ (MP Renukacharya) ಹೇಳಿದ್ದಾರೆ.
ಬೆಳಗಾವಿಯಲ್ಲಿಂದು (Belagavi) ರಾಜ್ಯ ಸಚಿವ ಸಂಪುಟ (Cabinet Ministers) ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ `ಸಿಎಂ ದೆಹಲಿಯಿಂದ ಬಂದು ಏನಾದರೂ ಸಿಹಿ ಸುದ್ದಿ ನೀಡ್ತಾರಾ’ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ವರ್ಷದ 365 ದಿನವೂ ಸಿಹಿ ಸುದ್ದಿನೇ, ಕಹಿ ಅನ್ನೋದೇ ಗೊತ್ತಿಲ್ಲ ಎಂದು ಬೀಗಿದ್ದಾರೆ. ಇದನ್ನೂ ಓದಿ: ವೈಕುಂಠ ಏಕಾದಶಿ, ಸಂಕ್ರಾಂತಿಗೂ ಕೊರೊನಾ ಕರಿನೆರಳು – ದೇವಾಲಯಗಳಿಗೆ ಟಫ್ ರೂಲ್ಸ್?
Advertisement
Advertisement
ಈಗಾಗಲೇ 2009 ರಿಂದ 2012ರ ವರೆಗೆ ಸಚಿವನಾಗಿ ಕೆಲಸ ಮಾಡಿದ ಅನುಭವ ನನಗಿದೆ. ನಾನಿಲ್ಲಿ ಸಂತೋಷದಿಂದಲೇ ಇದ್ದೇನೆ. ನಾನು ಯಾವತ್ತೂ ಸಂತೋಷ ಜೀವಿ. ಕೆಲವರು ಲಕ್ಷಾಧಿಪತಿ, ಕೋಟ್ಯಧಿಪತಿಗಳಿದ್ದರೂ ಶಾಸಕರಾಗೋಕೆ ಆಗಿಲ್ಲ. ಆದ್ರೆ ನನ್ನಂತಹ ಒಬ್ಬ ಸಾಮಾನ್ಯ ಮನುಷ್ಯನನ್ನ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ನನಗೆ ಅದಕ್ಕಿಂತ ದೊಡ್ಡ ಸ್ಥಾನ ಯಾವುದೂ ಇಲ್ಲ, ಜನಾದೇಶ ಬಹಳ ಮುಖ್ಯ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಡುರಾತ್ರಿಯಲ್ಲಿ ಎಲಿಮಿನೇಷನ್: ಬಿಗ್ ಬಾಸ್ ಮನೆಯಿಂದ ಆರ್ಯವರ್ಧನ್ ಔಟ್
Advertisement
Advertisement
ಜನಾದೇಶ ಮತ್ತೊಮ್ಮೆ ಸಿಗುವ ಆತ್ಮವಿಶ್ವಾಸ ಇದೆ. ಹೊನ್ನಾಳಿ ಕ್ಷೇತ್ರದ ಜನ ಆಯ್ಕೆ ಮಾಡಿದ ಮೇಲೆ ಮಾಧ್ಯಮಗಳು ನನ್ನನ್ನು ರಾಜ್ಯಕ್ಕೆ ಪರಿಚಯಿಸಿವೆ. ಆದ್ರೆ ಸಚಿವ ಸ್ಥಾನಕ್ಕೆ ಅವಕಾಶಗಳು ವಂಚಿತರಾಗಿದ್ದೇವೆ ಎಂದು ಸುಮ್ಮನಾಗಿರ್ತೀವಿ ಅಷ್ಟೇ. ಎಲ್ಲಾ ಸಾಮರ್ಥ್ಯ, ಅರ್ಹತೆ, ಅನುಭವ ನನಗಿದೆ. ರೇಣುಕಾಚಾರ್ಯ ಬೇಡ ಅಂತಾ ಇರಬಹುದೇನೋ ಗೊತ್ತಿಲ್ಲ ಎಂದು ಪರೋಕ್ಷವಾಗಿ ಸಿಎಂಗೆ ತಿವಿದಿದ್ದಾರೆ.
ನನಗೆ ಸರ್ಕಾರ ಮತ್ತು ಸಂಘಟನೆ ಎಲ್ಲ ರೀತಿಯ ಸ್ಥಾನಮಾನ ಗೌರವ ಕೊಟ್ಟಿದೆ. ಹೊನ್ನಾಳಿ ಕ್ಷೇತ್ರದಲ್ಲಿ ಟಿಕೆಟ್ ನೀಡಿದ್ದು ಸಾಮರ್ಥ್ಯ ನೋಡಿಯೇ. ನನ್ನ ಹೋರಾಟದ ಫಲದಿಂದ ನಾನು ಶಾಸಕನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.