ಮಲೆನಾಡಲ್ಲಿ ಮಳೆ ನಿಂತ್ರೂ ನಿಲ್ಲದ ಅವಾಂತರ – 80 ವರ್ಷದ ಹಳೇ ಶಾಲಾ ಕಟ್ಟಡ ಕುಸಿತ

Public TV
1 Min Read
Chikkamagaluru school collapse

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದ್ದು, 80 ವರ್ಷದ ಹಳೆಯ ಶಾಲಾ ಕಟ್ಟಡವೊಂದು ಕುಸಿದಿದೆ.

ಮಲೆನಾಡು ಭಾಗದಲ್ಲಿ ಮುಂಗಾರು ಆರಂಭಕ್ಕೂ ಮುನ್ನವೇ ಧಾರಾಕಾರ ಮಳೆಯಾಗಿದ್ದು, ಇದೀಗ ಕೊಂಚ ಬಿಡುವು ನೀಡಿದೆ. ಆದರೆ ಮಳೆಯಿಂದಾಗುತ್ತಿರುವ ಅವಾಂತರಗಳು ನಿಲ್ಲುತ್ತಿಲ್ಲ. ಗುರುವಾರ ಬೀಸಿದ ಭಾರೀ ಗಾಳಿಯಿಂದಾಗಿ ಕೊಪ್ಪ (Koppa) ತಾಲೂಕಿನ ಶಾನುವಳ್ಳಿ ಗ್ರಾಮದ 80 ವರ್ಷಕ್ಕೂ ಹೆಚ್ಚು ಹಳೆಯದಾದ ಸರ್ಕಾರಿ ಶಾಲೆಯ ಕಟ್ಟಡ ಕುಸಿದಿದೆ.ಇದನ್ನೂ ಓದಿ: ದಿನ ಭವಿಷ್ಯ: 30-05-2025

ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದ ಕಾರಣ ಕಳೆದ ಕೆಲ ವರ್ಷಗಳಿಂದ ಹಿಂದೆಯೇ ಇದನ್ನು ಮುಚ್ಚಲಾಗಿತ್ತು. ಮಳೆಯ ಅಬ್ಬರಕ್ಕೆ ನಲುಗಿ ಏಕಾಏಕಿ ಕುಸಿದು ಬಿದ್ದಿದೆ. ಅಧಿಕಾರಿಗಳು ಕ್ರಮವಹಿಸಿ ಶಾಲೆಯನ್ನು ಬೇರೆಡೆ ವರ್ಗಾಯಿಸಿರುವುದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ.

ಮಲೆನಾಡು ಭಾಗದಲ್ಲಿ ಬುಧವಾರ (ಮೇ 28) ಮಧ್ಯಾಹ್ನದಿಂದ ಮಳೆ ಪ್ರಮಾಣ ಬಹುತೇಕ ಇಳಿಮುಖವಾಗಿದೆ. ಆದರೆ, ಬೀಸುತ್ತಿರುವ ಗಾಳಿಯಿಂದ ಅಲ್ಲಲ್ಲೇ ಸಣ್ಣ-ಪುಟ್ಟ ಅನಾಹುತಗಳು ಸಂಭವಿಸುತ್ತಿವೆ.ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ 30-05-2025

Share This Article