-ಶೂ ಮೇಲೆ `ಬೂಟ್ ಪೇ’ ಎಂದು ಬರೆದು `ಕ್ಯೂಆರ್ ಸ್ಕ್ಯಾನ್ʼ ಪೋಸ್ಟರ್ ಅಂಟಿಸಿ ಬಿಜೆಪಿ ಟಕ್ಕರ್
ಬೆಂಗಳೂರು: ಶಾಲಾ ಮಕ್ಕಳ ಶೂ-ಸಾಕ್ಸ್‌ಗಾಗಿ ದಾನಿಗಳ ಮೊರೆಹೋದ ರಾಜ್ಯ ಸರ್ಕಾರದ (State Govt) ವಿರುದ್ಧ ಬಿಜೆಪಿ (BJP) ಹೊಸ ಕ್ಯಾಂಪೇನ್ ಆರಂಭಿಸಿದೆ.
ಜಗತ್ತಿನಲ್ಲಿ ಸೂರ್ಯ-ಚಂದ್ರರಿರುವುದು ಎಷ್ಟು ಸತ್ಯವೋ ಕರ್ನಾಟಕದಲ್ಲಿ @INCKarnataka ಸರ್ಕಾರ ದಿವಾಳಿಯಾಗಿರುವುದು ಸಹ ಅಷ್ಟೇ ಸತ್ಯ!! ಲಾಟರಿ ಸಿಎಂ @siddaramaiah ಅವರು ಮೇಜು ಕುಟ್ಟಿ ತಮ್ಮ ಸರ್ಕಾರ ದಿವಾಳಿಯಾಗಿಲ್ಲ ಎಂದು ಬಡಾಯಿ ಕೊಚ್ಚಿಕೊಂಡರೂ, ಸರ್ಕಾರದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಾತ್ರ ಶ್ವೇತ ಪತ್ರ ಹೊರಡಿಸಲು ಮಾತ್ರ ಅವರು… pic.twitter.com/qiaGxkqAiL
— BJP Karnataka (@BJP4Karnataka) July 8, 2025
ಮಕ್ಕಳ ಶೂ ಮೇಲೆ `ಬೂಟ್ ಪೇ’ ಎಂದು ಬರೆದು `ಕ್ಯೂಆರ್ ಸ್ಕ್ಯಾನ್’ ಪೋಸ್ಟರ್ ಮೂಲಕ ಬಿಜೆಪಿ ಟಕ್ಕರ್ ಕೊಟ್ಟಿದೆ. ಕಾಂಗ್ರೆಸ್‌ನ 40% ಫೋನ್ ಪೇ ಮಾದರಿಯಲ್ಲೇ `ಬೂಟ್ ಪೇ’ ಸ್ಕ್ಯಾನ್ ಮಾಡಿ ಎಂದು ಸರ್ಕಾರವನ್ನು ಅಣಕಿಸಿದೆ.ಇದನ್ನೂ ಓದಿ: ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ
ಸಂಪೂರ್ಣ ದಿವಾಳಿಯಾಗಿರುವ ಕಾಂಗ್ರೆಸ್ ಸರ್ಕಾರದಲ್ಲಿ ಶಾಲಾ ಮಕ್ಕಳಿಗೆ ಶೂ ನೀಡಲು ಸಹ ಹಣವಿಲ್ಲ. ಹೀಗಾಗಿ ಶಾಲಾ ಮಕ್ಕಳಿಗೆ ಶೂ ದಾನ ಮಾಡಲು ಬೂಟ್ ಪೇ ಸ್ಕ್ಯಾನ್ ಮಾಡಿ ಅಂತ ಟ್ವೀಟ್‌ನಲ್ಲಿ ಸರ್ಕಾರಕ್ಕೆ ಬಿಜೆಪಿ ಮುಖಭಂಗ ಮಾಡಿದೆ.
ಸಂಪೂರ್ಣ ದಿವಾಳಿಯಾಗಿರುವ @INCKarnataka ಸರ್ಕಾರದಲ್ಲಿ ಶಾಲಾ ಮಕ್ಕಳಿಗೆ ಶೂ ನೀಡಲು ಸಹ ಹಣವಿಲ್ಲ!!
ಹೀಗಾಗಿ ಶಾಲಾ ಮಕ್ಕಳಿಗೆ ಶೂ ದಾನ ಮಾಡಲು “ಬೂಟ್ ಪೇ” Scan ಮಾಡಿ!!#CongressFailsKarnataka pic.twitter.com/w6ZICsujfu
— BJP Karnataka (@BJP4Karnataka) July 8, 2025
ಮಕ್ಕಳ ಶೂ-ಸಾಕ್ಸ್ ಖರೀದಿಗೆ ಬಿಡುಗಡೆಯಾಗಿದ್ದ 111.88 ಕೋಟಿ ರೂ. ಅನುದಾನ ಯಾವ ರಾಜ್ಯದ ಕಾಂಗ್ರೆಸ್ ಚುನಾವಣಾ ಫಂಡ್‌ಗೆ ಬಳಕೆ ಆಯ್ತಾ? ಹಣ ಬಿಡುಗಡೆಯಾದರೂ ದಾನಿಗಳನ್ನು ಹುಡುಕುತ್ತಿದ್ದರೆ ಅನುದಾನ ಯಾರ ಜೇಬು ಸೇರಿರಬಹುದು? ಅಂತ ಬಿಜೆಪಿ ಪ್ರಶ್ನಿಸಿದೆ.ಇದನ್ನೂ ಓದಿ: 15 ಏಷ್ಯನ್ ರಾಷ್ಟ್ರಗಳ ಎದುರು ವಿಜಯಪುರದ ಇತಿಹಾಸ ಅನಾವರಣಗೊಳಿಸಿದ ಡಿಸಿ