ಬೆಂಗಳೂರು: ಮೌಲ್ಯಮಾಪಕರ ಚೆಲ್ಲಾಟಕ್ಕೆ ಟಾಪರ್ ಆಗಬೇಕಿದ್ದ ಗಾರೆ ಕೆಲಸ ಮಾಡುವವರ ಮಗಳು 509 ಅಂಕ ಪಡೆದರೂ ಫೇಲ್ ಆಗಿದ್ದಾಳೆ.
ನಾಗವಾರದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಶಾಲಿನಿ ಏಪ್ರಿಲ್ 30 ರಂದು ಫಲಿತಾಂಶ ನೋಡಿದಾಗ ಒಟ್ಟು 509 ಅಂಕಗಳನ್ನು ತೆಗೆದಿದ್ದಳು. 509 ಅಂಕ ಪಡೆದಿದ್ದರೂ ಸಹ ಶಾಲಿನಿ ಕನ್ನಡದಲ್ಲಿ ಫೇಲ್ ಆಗಿದ್ದಳು.
ಫಲಿತಾಂಶ ಬಂದ ಒಂದು ವಾರದಿಂದ ಫೇಲ್ ಆಗಿದ್ದೇನೆ ಎಂದು ಶಾಲಿನಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಮಗಳ ಸ್ಥಿತಿಯನ್ನು ನೋಡಿದ ಪೋಷಕರು ಶಾಲಿನಿಯ ಉತ್ತರ ಪತ್ರಿಕೆ ತರಿಸಿಕೊಂಡಿದ್ದರು. ಈ ವೇಳೆ ಮೌಲ್ಯಮಾಪಕರ ಬೇಜವಾಬ್ದಾರಿ ಬೆಳಕಿಗೆ ಬಂದಿದೆ.
ಆಗಿದ್ದೇನು?
ಮೌಲ್ಯಮಾಪಕರು ದ್ವಿತೀಯ ಭಾಷೆ ಕನ್ನಡ ಪರೀಕ್ಷೆಯಲ್ಲಿ 75 ಅಂಕಗಳನ್ನು ಪರಿಗಣಿಸದೆಯೇ ಬಿಟ್ಟು ಬಿಟ್ಟಿದ್ದಾರೆ. 17 ಪೇಜ್ ಉತ್ತರ ಬರೆದು 17 ಅಂಕ ಎಂದು ಪರಿಗಣಿಸಿದ್ದಾರೆ. ಕನ್ನಡದಲ್ಲಿ 75 ಅಂಕ ಗಳಿಸಿದರೂ ಮೌಲ್ಯಮಾಪಕರು 17 ಅಂಕ ಮಾತ್ರ ನೀಡಿದ್ದಾರೆ.
ಸದ್ಯ ಎಸ್‍ಎಸ್‍ಎಲ್‍ಸಿ ಬೋರ್ಡ್‍ನ ಎಡವಟ್ಟಿಗೆ ಶಾಲಿನಿ ತಂದೆ ಅನ್ಬು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.