ಉಡುಪಿ: ಯುರೋಪ್ ದೇಶದ ವರ ಮತ್ತು ಫ್ರಾನ್ಸ್‌ನ ವಧು ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರೂ ಕೃಷ್ಣ ಭಕ್ತರು. ಕೊಲ್ಲೂರಿನಲ್ಲಿ (Kollur) ವಿವಾಹವಾಗಿದ್ದಾರೆ.
ಯುರೋಪ್ ದೇಶದ ನರೋತ್ತಮ್ ದಾಸ್ ಮತ್ತು ಫ್ರಾನ್ಸ್‌ನ ಜಾನ್ನವ್ ಭಾರತದ ಆಧ್ಯಾತ್ಮಕ್ಕೆ ಮನೋಸೋತ ವಿದೇಶಿ ಪ್ರಜೆಗಳು. ಕಳೆದ ಹಲವಾರು ವರ್ಷಗಳಿಂದ ಶ್ರೀ ಕೃಷ್ಣ ದೇವರ ಭಕ್ತರಾಗಿರುವ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇದನ್ನೂ ಓದಿ: ಬ್ರಿಟಿಷರ ಬಳಿ ಆರ್‌ಎಸ್‌ಎಸ್ ನೋಂದಣಿ ಮಾಡಿಸಿಕೊಳ್ಳಬೇಕಿತ್ತಾ? – ಮೋಹನ್ ಭಾಗವತ್ ಸ್ಪಷ್ಟನೆ
ದೇಶದ ಹಲವಾರು ಧಾರ್ಮಿಕ ಕೇಂದ್ರಗಳನ್ನು ಭೇಟಿ ಮಾಡಿರುವ ಈ ಜೋಡಿ, ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ನಿರ್ಧರಿಸಿತು. ಕೊಲ್ಲೂರು ಮೂಕಾಂಬಿಕಾ ದೇವರ ಸನ್ನಿಧಾನದಲ್ಲಿ ಇಬ್ಬರು ಸತಿಪತಿಗಳಾಗಿದ್ದಾರೆ.
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಸರಳ ಆರತಕ್ಷತೆ ನಡೆಸಿ, ಸಂಗೀತ ಕಾರ್ಯಕ್ರಮವನ್ನೂ ಈ ಜೋಡಿ ಆಯೋಜಿಸಿತ್ತು. ತಮ್ಮ ವೃತ್ತಿಯನ್ನು ತೊರೆದು ಮಥುರಾದ ಬೃಂದಾವನದಲ್ಲಿ ಇಬ್ಬರೂ ಶ್ರೀ ಕೃಷ್ಣದೇವರ ಸೇವೆಯನ್ನು ಮಾಡುತ್ತಿದ್ದಾರೆ.


