ಯುಫೋರಿಯಾ (Euphoria) ಟಿವಿ ಸೀರಿಸ್ ನಟ ಆ್ಯಂಗಸ್ ಕ್ಲೌಡ್ (Angus Cloud) ಅವರು ಜುಲೈ 31ರಂದು ಇಹಲೋಕ ತ್ಯಜಿಸಿದ್ದಾರೆ. 25 ವಯಸ್ಸಿಗೆ ಅಮೆರಿಕದ ಟಿವಿ ನಟ ಆ್ಯಂಗಸ್ ಎಂದೂ ಬಾರದ ಲೋಕಕ್ಕೆ ಹೋಗಿದ್ದಾರೆ. ನಟ ಆ್ಯಂಗಸ್ ನಿಧನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಹಿತೈಷಿಗಳು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಆ್ಯಂಗಸ್ ಕ್ಲೌಡ್ ಅವರು ಹೆಚ್‌ಬಿಒ ಟಿವಿ ಸೀರಿಸ್ ‘ಯುಫೋರಿಯಾ’ದಲ್ಲಿ ನಟಿಸಿ ಜನಮನ ಸೆಳೆದಿದ್ದರು. ಆ್ಯಂಗಸ್ ಕ್ಲೌಡ್ ಅವರು ಓಕ್ಲೆಂಡ್‌ನಲ್ಲಿರುವ ತಮ್ಮ ನಿವಾಸದಲ್ಲೇ ಮೃತಪಟ್ಟಿದ್ದಾರೆ. ಅವರ ಸಾವಿಗೆ ಕಾರಣ ಏನು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಆದರೆ ಆ್ಯಂಗಸ್ ಅವರು ಮಾನಸಿಕವಾಗಿ ನೊಂದಿದ್ದರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಮೆಗಾ ಫ್ಯಾಮಿಲಿ ವಿರುದ್ಧ ಗಟ್ಟಿ ನಿರ್ಧಾರ ಕೈಗೊಂಡ ನಿಹಾರಿಕಾ
ಮೂಲಗಳ ಪ್ರಕಾರ ಆ್ಯಂಗಸ್ ಕ್ಲೌಡ್ ಅವರ ತಾಯಿ ಸೋಮವಾರ ತಡರಾತ್ರಿ ಮನೆಗೆ ಕರೆ ಮಾಡಿದ್ದರು ಮತ್ತು ಆ್ಯಂಗಸ್ ಕ್ಲೌಡ್ ಉಸಿರಾಡುತ್ತಿಲ್ಲ ಎಂಬುದನ್ನು ಹೇಳಿದ್ದರು. ಆ್ಯಂಗಸ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಈ ಮೊದಲು ಆಲೋಚಿಸಿದ್ದರು ಎಂದು ಹೇಳಲಾಗುತ್ತಿದೆ. ಅತ್ಯಂತ ಭಾರವಾದ ಹೃದಯದಿಂದ ನಾವು ಆ್ಯಂಗಸ್ ಕ್ಲೌಡ್ ವಿದಾಯ ಹೇಳಬೇಕಾಗಿದೆ. ಒಬ್ಬ ಕಲಾವಿದನಾಗಿ, ಸ್ನೇಹಿತನಾಗಿ, ಸಹೋದರನಾಗಿ ಮತ್ತು ಮಗನಾಗಿ ಆ್ಯಂಗಸ್ ನಮಗೆಲ್ಲರಿಗೂ ಅವರು ವಿಶೇಷವಾಗಿದ್ದರು. ಕಳೆದ ವಾರ ಅವರು ತಮ್ಮ ತಂದೆಯನ್ನು ಕಳೆದುಕೊಂಡರು. ಈ ವೇಳೆ ಅವರು ತೀವ್ರವಾಗಿ ಬೇಸರಗೊಂಡಿದ್ದರು. ಆ್ಯಂಗಸ್ ತಂದೆಯೊಂದಿಗೆ ಸೇರಿಕೊಂಡಿದ್ದಾರೆ ಎಂದು ಕುಟುಂಬದವರು ಮಾಧ್ಯಮಕ್ಕೆ ತಿಳಿಸಿದ್ದಾರೆ.