ಬೆಂಗಳೂರು: ಮಾರುಕಟ್ಟೆಗೆ ಈಗಾಗಲೇ ಹಣ್ಣಿನ ರಾಜ ಮಾವು ಲಗ್ಗೆಯಿಟ್ಟಿದೆ. ಹಾಗಂತ ಮಾವು ಕಂಡು ನೀವೇನಾದ್ರೂ ಚಪ್ಪರಿಸಿ ತಿಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ವಿಚಾರ ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್ ನಲ್ಲಿ ಬಯಲಾಗಿದೆ.
ಹೌದು. ಮಾವಿನ ಹಣ್ಣಿನ ಸೀಸನ್‍ಗೂ ಮುನ್ನವೇ, ಮಾವು ಮಾರುಕಟ್ಟೆಗೆ ಬಂದಿದೆ. ಸಮಯವಲ್ಲದ ಸಮಯಕ್ಕೆ ಮಾರುಕಟ್ಟೆಗೆ ಬಂದ ಮಾವು, ಹಲವರ ಜೀವಕ್ಕೆ ಕೊಳ್ಳಿಯಿಡ್ತಿದೆ. ಬೆಂಗಳೂರಿನ ಚಿಕ್ಕಪೇಟೆ ಹಣ್ಣಿನ ಮಾರುಕಟ್ಟೆಯಲ್ಲಿ ಮಾವಿನ ಮಾರಾಟ ಜೋರಾಗಿ ನಡೀತಾ ಇದೆ. ಈ ಮಾವಿನ ಹಣ್ಣಿಗೆ ಇಥ್ಲೀನ್ ರೈಪ್ನರ್(Ethylene Ripener) ಅನ್ನೋ ಕೆಮಿಕಲ್ ಬಳಸಿ ಮಾರಾಟ ಮಾಡಲಾಗ್ತಿದೆ.
Advertisement
Advertisement
ಈ ಕೆಮಿಕಲನ್ನ ಹಣ್ಣು ಮಾಡೋದಕ್ಕೆ ಹಾಗೂ ಕಲರ್ ಬರಿಸೋದಕ್ಕೆ ಬಳಸ್ತಾರೆ. ನಿಗದಿತ ಪ್ರಮಾಣದಲ್ಲಿ ಬಳಕೆ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಇಲ್ಲಿ ಮಾತ್ರ ಬೇಗ ಕಲರ್ ಹಾಗೂ ಹಣ್ಣು ಆಗ್ಲಿ ಅಂತ ಇಥ್ಲೀನ್ ರೈಪ್ನರ್ ಕೆಮಿಕಲ್ ಬಳಸಿ ಮಾವಿಗೆ ಶಾಖಾ ಕೊಡ್ತಾರೆ. ಇದು ಅತ್ಯಂತ ಡೇಂಜರ್. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಕೆಮಿಕಲ್ ಬಳಸಿದ್ರೆ ಜಸ್ಟ್ ಒಂದೇ ಒಂದು ವಾರದಲ್ಲಿ ದೇಹದ ಮೇಲೆ ಗಂಭೀರ ಪರಿಣಾಮ ಬೀರಳಿದೆ ಎಂದು ಹಣ್ಣಿನ ವ್ಯಾಪಾರಿ ಶಣ್ಮುಗ ಹೇಳುತ್ತಾರೆ.
Advertisement
Advertisement
ಮುಖ್ಯವಾಗಿ ಈ ಕೆಮಿಕಲ್ ಹೆಚ್ಚು ಹೀಟ್ ಇರುತ್ತೆ. ಹೆಚ್ಚೆಚ್ಚು ಕಾವು ಕೊಡ್ತಿದ್ದಂತೆ ಬೇಗ ಕಲರ್ ಹಾಗೂ ಹಣ್ಣಾಗುತ್ತೆ. ಎರಡೇ ದಿನದಲ್ಲಿ ಇದರ ರಿಸಲ್ಟ್ ಬರುತ್ತೆ ಅಂದ್ರೆ ಮನುಷ್ಯನ ದೇಹದ ಮೇಲೆ ಎಷ್ಟೊಂದು ಪರಿಣಾಮ ಬೀರಲಿದೆ ಅನ್ನೋದನ್ನ ನೀವೇ ಊಹಿಸಿಕೊಳ್ಳಿ. ಅಂದಹಾಗೆ ಸೀಸನ್‍ಗೂ ಮುನ್ನ ಇಂತಹ ಕೆಮಿಕಲ್ ಮಿಶ್ರಿತ ಮಾವು ಸೇವನೆಯಿಂದ ಜಸ್ಟ್ ಒಂದೇ ಒಂದು ವಾರದಲ್ಲಿ ಹಣ್ಣಿನ ವಿಷ ನಿಮ್ಮ ದೇಹಕ್ಕೆ ಸೇರಿ ಹೊಟ್ಟೆನೋವು, ವಾಂತಿ, ಕಿಡ್ನಿ, ಲಿವರ್ ಸಮಸ್ಯೆ ಉಂಟಾಗುತ್ತೆ. ಮಾವಿನ ಈ ಡೆಡ್ಲಿ ಸೀಕ್ರೆಟ್‍ಗೆ ವೈದ್ಯಾಧಿಕಾರಿಗಳೇ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಮಾವು ಎಲ್ಲಿಂದ ರಫ್ತಾಗುತ್ತೋ ಅಲ್ಲಿಂದನೇ ಮ್ಯಾಂಗೋ ಬಾಕ್ಸ್ ಗಳಲ್ಲಿ ಇಥ್ಲೀನ್ ರೈಪ್ನರನ್ನು ಹಾಕಿ ಕಳಿಸ್ತಾರೆ. ಅದನ್ನ ಆಮದು ಮಾಡಿಕೊಂಡ ವ್ಯಾಪಾರಿಗಳು, ಇನ್ನೂ ಬೇಗ ರಿಸಲ್ಟ್ ಬರ್ಲಿ ಅಂತ ದುಪ್ಪಟ್ಟು ಕೆಮಿಕಲ್ ಬೆರೆಸ್ತಾರೆ. ಈ ಮೋಸ್ಟ್ ಡೇಂಜರಸ್ ಸೀಕ್ರೆಟ್ ಮನುಷ್ಯನ ದೇಹವನ್ನ ಕೊಲ್ಲಲಿದೆ. ಇಥ್ಲೀನ್ ರೈಪ್ನರ್ ಯೂರೋಪ್ ರಾಷ್ಟ್ರಗಳಲ್ಲಿ, ಅಮೆರಿಕಾದಲ್ಲಿ ಬ್ಯಾನ್ ಆಗಿದೆ. ಆದರೆ ನಮ್ಮ ಭಾರತದಲ್ಲಿ ಮಾತ್ರ ಚಾಲ್ತಿಯಲ್ಲಿದೆ. ಒಟ್ಟಿನಲ್ಲಿ ಸೀಸನ್‍ಗೆ ಮುನ್ನವೇ ಮಾರುಕಟ್ಟೆಗೆ ಲಗ್ಗೆಯಿಟ್ಟ ಮಾವಿನ ಹಣ್ಣು ತಿನ್ನೋ ಮೊದಲು ಹುಷಾರಾಗಿರಿ.