ದಾವಣಗೆರೆ: ಕಾಲೇಜು ದಿನಗಳು ಅಂದ್ರೆ ಯಾವಾಗಲೂ ಕಲರ್ ಫುಲ್. ಈ ನೆನಪುಗಳು ಸದಾ ಹಚ್ಚ ಹಸಿರು. ಇನ್ನು ಎಥ್ನಿಕ್ ಡೇ ಎಂದರೆ ಕೇಳಬೇಕೇ ಕಲರ್ ಫುಲ್ ಬಟ್ಟೆ, ಹಾಡು, ಕುಣಿತ, ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ಬಗೆ ಬಗೆಯ ನೆನಪುಗಳು.
ದಾವಣಗೆರೆಯ ಎ.ವಿ.ಕಮಲಮ್ಮ(ಎವಿಕೆ) ಮಹಿಳಾ ಕಾಲೇಜಿನಲ್ಲಿ ಪ್ರತಿ ವರ್ಷ ವಿವಿಧ ಹೊಸ ಪರಿಕಲ್ಪನೆಯೊಂದಿಗೆ ಎಥ್ನಿಕ್ ಡೇ ಆಚರಿಸಲಾಗುತ್ತದೆ. ಈ ಬಾರಿ ರಾಜ್ಯದ ವಿವಿಧ ಪ್ರದೇಶಗಳ ಸಾಂಸ್ಕೃತಿಕ ವೇಷ ಭೂಷಣ, ಸಂಪ್ರದಾಯಗಳನ್ನು ಅನಾವರಣಗೊಳಿಸಲಾಯಿತು. ಸೆಲ್ಫಿ ಝೋನ್, ಗ್ರಾಮೀಣ ಸೊಗಡು, ಯಕ್ಷಗಾನ, ಸೇರಿದಂತೆ ಹಲವು ಸಾಂಪ್ರಾದಾಯಿಕ ಉಡುಗೆಯಲ್ಲಿ ಯುವತಿಯರು ರಾರಾಜಿಸುತ್ತಿದ್ದರು. ಇಡೀ ಕಾಲೇಜ್ ಆವರಣದಲ್ಲಿ ಸಂಭ್ರಮ ಮನೆ ಮಾಡಿತ್ತು. ಸೀರೆ, ಸಾಂಪ್ರದಾಯಿಕ ಉಡುಗೆಗಳ ಕಾರಬಾರು ಜೋರಾಗಿತ್ತು.
Advertisement
Advertisement
ಗುಜರಾತಿ, ಕೊಡಗು, ಉತ್ತರ ಕರ್ನಾಟಕ ಪೇಟಾ, ಲಂಬಾಣಿ ನೃತ್ಯ, ಯಕ್ಷಗಾನ ಕಣ್ಮನ ಸೆಳೆದವು. ಇವುಗಳ ನಡುವೆ ಕಾಲೇಜಿನ ಉಪನ್ಯಾಸಕರು ಕೂಡ ಬಣ್ಣ ಬಣ್ಣದ ಡ್ರೆಸ್ ಹಾಕಿಕೊಂಡಿದ್ದರು. ಪ್ರತಿ ಗುಂಪಿನಲ್ಲಿ ಒಂದೊಂದು ಪ್ರದೇಶದ ಸಂಪ್ರದಾಯದ 40ಕ್ಕೂ ಹೆಚ್ಚು ಗುಂಪುಗಳು ಕಾಣಿಸಿಕೊಂಡವು. ರ್ಯಾಂಪ್ ವಾಕ್ ಹಾಗೂ ಸ್ನೇಹಿತರ ಜೊತೆ ಸೆಲ್ಫಿ ತೆಗೆದುಕೊಂಡು ವಿದ್ಯಾರ್ಥಿನಿಯರು ಏಂಜಾಯ್ ಮಾಡಿದರು. ಈ ಮೂಲಕ ಕ್ಲಾಸ್ ರೂಂನಲ್ಲಿರುವ ಟೆನ್ಷನ್ ಮರೆತು ಕುಣಿದು ಕುಪ್ಪಳಿಸಿದರು.