ಧಾರವಾಡ: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಭೂಗೋಳಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಇಂದು ಸ್ವಲ್ಪ ಡಿಫ್ರೆಂಟಾಗಿ ಕಾಣ್ತಾ ಇದ್ರು. ಯಾಕಪ್ಪಾ ಅಂದ್ರೆ ಇವರ ವಿಭಾಗದಲ್ಲಿ ಇಂದು ಸಂಸ್ಕೃತಿ ದಿನಾಚರಣೆ ಮಾಡಲಾಯ್ತು.
Advertisement
ಇದಕ್ಕೆಂದೇ ವಿದ್ಯಾರ್ಥಿಗಳೆಲ್ಲ ಸೇರಿ ಎತ್ತಿನ ಬಂಡಿ ಸವಾರಿ ಕೂಡಾ ಮಾಡಿದ್ರು. ವಿದ್ಯಾರ್ಥಿಗಳು ಜಿನ್ಸ್ ಟಿ-ಶರ್ಟ್ ಬಿಟ್ಟು ಹಳ್ಳಿ ಶೈಲಿಯಲ್ಲಿ ಹಸಿರು ಶಾಲಿನ ಜೊತೆ ಧೋತಿ ತೊಟ್ಟು ಬಂದಿದ್ದರು. ಇನ್ನು ವಿದ್ಯಾರ್ಥಿನಿಯರು ಇಳಕಲ್ ಸೀರೆಯನ್ನ ತೊಟ್ಟು ಬಂದಿದ್ರು. ಕ್ಯಾಂಪಸ್‍ನಲ್ಲಿ ಎತ್ತಿನ ಬಂಡಿ ಏರಿ ಬಂದಿದ್ದ ವಿದ್ಯಾರ್ಥಿಗಳು, ಜಾನಪದ ಹಾಡುಗಳನ್ನ ಹಾಡುತ್ತ ಸಾಗಿದರು. ಕಳೆದ ಒಂದು ವಾರದಿಂದ ಫನ್ ವೀಕ್ ಆಚರಣೆ ಮಾಡಿದ ಈ ವಿದ್ಯಾರ್ಥಿಗಳು, ಇಂದು ಸ್ವಲ್ಪ ವಿಭಿನ್ನವಾಗಿಯೇ ಸಂಸ್ಕೃತಿ ದಿನವನ್ನ ಆಚರಿಸಿದ್ರು.
Advertisement
Advertisement
ಕ್ಯಾಂಪಸ್ ತುಂಬೆಲ್ಲ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಿದ ವಿದ್ಯಾರ್ಥಿನಿಯರು, ಸೆಲ್ಫಿ ತೆಗೆದುಕೊಳ್ಳುವ ಮೂಲಕ ಸಂಭ್ರಮಿಸಿದರು. ವಿದೇಶಿ ಸಂಸ್ಕೃತಿಯನ್ನ ಮರೆತು, ಪಕ್ಕಾ ಸ್ವದೇಶಿ ಶೈಲಿಯಲ್ಲಿ ಮಿಂಚಿದ್ರು. ಎತ್ತಿನ ಬಂಡಿಗೆ ಕಟ್ಟಿದ ಎತ್ತುಗಳು ಕೂಡಾ ಇಂದು ಸಿಂಗಾರಗೊಂಡಿದ್ದವು. ಒಟ್ಟಾರೆ ಹಳ್ಳಿ ಹಾಗೂ ಗ್ರಾಮೀಣ ಸಂಸ್ಕೃತಿಯನ್ನ ನೆನಪಿಸುವಂತೆ ಸಂಸ್ಕೃತಿ ದಿನಾಚರಣೆ ಇದಾಗಿತ್ತು.
Advertisement