ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ (KS Eshwarappa) ಪಕ್ಷದ ಹಿರಿಯ ನಾಯಕರು. ಬಂಡಾಯದಂತಹ ಯಾವುದೇ ನಿರ್ಧಾರ ಅವರು ಮಾಡಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ತಿಳಿಸಿದ್ದಾರೆ.
ಈಶ್ವರಪ್ಪ ಬಂಡಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪ ಅಂತಹ ಯಾವುದೇ ನಿರ್ಧಾರ ಮಾಡಲ್ಲ. ಒಂದು ವಾರ ಕಾದು ನೋಡಿ ಎಲ್ಲವೂ ಸರಿ ಆಗುತ್ತದೆ. ಈಶ್ವರಪ್ಪ ಪಕ್ಷ ಬಿಡಲ್ಲ. ಯಡಿಯೂರಪ್ಪ-ಈಶ್ವರಪ್ಪ ನಡುವೆ ಏನು ಮಾತುಕತೆ ಆಗಿದೆ ನಮಗೆ ಗೊತ್ತಿಲ್ಲ. ಯಡಿಯೂರಪ್ಪ (BS Yediyurappa) ಏನು ಮಾತು ಕೊಟ್ಟಿದ್ದಾರೋ ಗೊತ್ತಿಲ್ಲ. ಇದನ್ನು ಯಡಿಯೂರಪ್ಪ-ಈಶ್ವರಪ್ಪ ಕೂತು ಮಾತನಾಡಬೇಕು. ಹೈಕಮಾಂಡ್ ನಾಯಕರು ಇದನ್ನು ನೋಡಿಕೊಳ್ಳುತ್ತಾರೆ. ಆಕಾಂಕ್ಷಿಗಳಿಗೆ ಟಿಕೆಟ್ ಸಿಗದೇ ಇದ್ದಾಗ ಅಸಮಾಧಾನ ಸಹಜ. ಹೀಗಾಗಿ ಈಶ್ವರಪ್ಪ ಹೀಗೆ ರಿಯಾಕ್ಟ್ ಮಾಡುತ್ತಾರೆ. ಹೈಕಮಾಂಡ್ ನಾಯಕರು ಅವರ ಜೊತೆ ಮಾತನಾಡುತ್ತಾರೆ. ಅವರು ಪಕ್ಷ ಬಿಡುವುದಿಲ್ಲ, ಎಲ್ಲವೂ ಸರಿ ಆಗುತ್ತದೆ ಎಂದರು. ಇದನ್ನೂ ಓದಿ: ನಾವು ಯಾರಿಗೂ ವಿಷ ಹಾಕುವವರಲ್ಲ- ಹೆಚ್‍ಡಿಕೆಗೆ ಡಿಕೆ ಸುರೇಶ್ ತಿರುಗೇಟು
Advertisement
Advertisement
ಸದಾನಂದಗೌಡ (DV Sadananda Gowda) ಅನ್ಯ ಪಕ್ಷ ಸೇರ್ಪಡೆ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಸದಾನಂದಗೌಡ ಅವರ ಜೊತೆ ಮಾತನಾಡಿದ್ದೇನೆ. ಅವರು ಆತುರದ ನಿರ್ಧಾರ ಮಾಡಲ್ಲ. ನಾವೆಲ್ಲರು ಸದಾನಂದಗೌಡರಿಗೆ ಟಿಕೆಟ್ ಕೊಡಬೇಕು ಎಂದು ಮನವಿ ಮಾಡಿದ್ದೇವೆ. ಆದರೆ ಹೈಕಮಾಂಡ್ ನಾಯಕರು ಟಿಕೆಟ್ ಶೋಭಾ ಅವರಿಗೆ ಕೊಟ್ಟಿದ್ದಾರೆ. ಹೈಕಮಾಂಡ್ ನಾಯಕರು ಸದಾನಂದಗೌಡರ ಜೊತೆ ಮಾತನಾಡುತ್ತಾರೆ. ಅವರು ಪಕ್ಷ ಬಿಡುವ ತೀರ್ಮಾನ ಮಾಡಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿ ಮುರಿಯೋಲ್ಲ, ಹಾಲು-ಜೇನು ರೀತಿ ಸಂಬಂಧ ಇರಲಿದೆ: ಆರ್.ಅಶೋಕ್
Advertisement