ಶಿವಮೊಗ್ಗ: ಕಳೆದ 3-4 ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಟರ್ನಿಂಗ್ ಪಾಯಿಂಟ್ ತೆಗೆದುಕೊಂಡಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರದಲ್ಲಿ ಆರೋಪ ಹೊತ್ತಿರುವ ಸಚಿವ ಈಶ್ವರಪ್ಪ ಅವರ ರಾಜೀನಾಮೆ ವರೆಗೆ ಬಂದು ನಿಂತಿದೆ. ತಾವು ಕೊನೆಯದಾಗಿ ಸಚಿವರಾಗಿದ್ದುಕೊಂಡು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವ ಸಂದರ್ಭದಲ್ಲಿ ಶುಭಶಕುನವೊಂದು ನಡೆದಿದೆ.
ರಾಜೀನಾಮೆಗೂ ಮುನ್ನ ಈಶ್ವರಪ್ಪ ಶಿವಮೊಗ್ಗದ ತರಳಬಾಳು ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶುಭಶ್ರೀ ಸುಮುದಾಯ ಭವನವನ್ನು ಶುಕ್ರವಾರ ಉದ್ಘಾಟಿಸಿದರು. ಇದಕ್ಕೂ ಮುನ್ನ ಸಮುದಾಯ ಭವನದ ಆವರಣದಲ್ಲೇ ಇದ್ದ ಗಣಪತಿಗೆ ಪೂಜೆ ನಡೆಸುತ್ತಿದ್ದ ವೇಳೆ, ಗಣಪತಿ ಬಲಭಾಗದಿಂದ ಹೂವಿನ ಪ್ರಸಾದ ಬಿದ್ದಿದೆ. ಇದನ್ನು ಕಂಡ ಪುರೋಹಿತರು ಹಾಗೂ ನೆರೆದವರು ಶುಭ ಶಕುನವೆಂದಿದ್ದಾರೆ. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್‍ನಲ್ಲಿ ಒಬ್ಬೊಬ್ಬರು ಲೋಫರ್‌ಗಳಿದ್ದಾರೆ: ಬೊಮ್ಮಾಯಿ
Advertisement
Advertisement
ಈ ಘಟನೆಯನ್ನು ಸಂತೋಷದಿಂದಲೇ ಸ್ವಾಗತಿಸಿದ ಈಶ್ವರಪ್ಪ ಮುಖದಲ್ಲಿ ಸಂತೋಷ ಮೂಡಿತ್ತು. ಈ ರೀತಿಯಾಗಿ ದೇವರ ಆಶೀರ್ವಾದ ಈ ಹಿಂದೆ ಎಲ್ಲಿಯೂ ಆಗಿರಲಿಲ್ಲ ಎಂದು ಆಶ್ಚರ್ಯಪಟ್ಟರು.
Advertisement
ಮಹಿಳಾ ಕಾರ್ಯಕರ್ತೆಯರಿಗೆ ಸಾಂತ್ವನ:
ರಾಜ್ಯದ ಪ್ರಭಾವಿ ಸಚಿವರಾಗಿದ್ದ ಈಶ್ವರಪ್ಪ ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ. ರಾಜೀನಾಮೆ ವಿಚಾರ ರಾಜ್ಯ ರಾಜಕೀಯದಲ್ಲೀಗ ತಲ್ಲಣ ಉಂಟು ಮಾಡಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿನ್ನೆಲೆಯಲ್ಲಿ, ರಾಜೀನಾಮೆಗೆ ಒತ್ತಡ ಕೇಳಿ ಬಂದ ಹಿನ್ನೆಲೆಯಲ್ಲಿ ಈಶ್ವರಪ್ಪ ರಾಜೀನಾಮೆ ನೀಡಲಿದ್ದು, ಇದು ತಮ್ಮ ಸ್ವಕ್ಷೇತ್ರದ ಕಾರ್ಯಕರ್ತರಿಗೆ ಬಹಳ ನೋವುಂಟು ಮಾಡಿದೆ. ಮಹಿಳಾ ಕಾರ್ಯಕರ್ತೆಯರು ರಾಜೀನಾಮೆ ನೀಡದಂತೆ ಆಗ್ರಹಿಸಿ ಕಣ್ಣೀರು ಹಾಕಿದ್ದಾರೆ. ಕಣ್ಣೀರು ಹಾಕಿದ ಮಹಿಳೆಯರಿಗೆ ಈಶ್ವರಪ್ಪ ಸಾಂತ್ವನ ಹೇಳಿದ್ದಾರೆ. ಇದನ್ನೂ ಓದಿ: ಮುಂದಿನ 3 ದಿನ ರಾಜ್ಯದಲ್ಲಿ ಮುಂದುವರಿಯಲಿದೆ ಗುಡುಗು ಸಹಿತ ಮಳೆ
Advertisement
ಬಿಎಸ್‌ವೈ ಭೇಟಿ ಇಲ್ಲ:
ಮಾಜಿ ಸಿಎಂ ಯಡಿಯೂರಪ್ಪ ಶಿವಮೊಗ್ಗದಲ್ಲೇ ಇದ್ದರೂ ಈಶ್ವರಪ್ಪ ಅವರನ್ನು ಭೇಟಿ ಮಾಡದೇ ರಾಜೀನಾಮೆ ನೀಡಲು ತೆರಳಿದ್ದಾರೆ. ಬೆಳಗ್ಗೆ ತರಳಬಾಳು ಬಡಾವಣೆಯಲ್ಲಿ ಶುಭಶ್ರೀ ಸಮುದಾಯ ಭವನ ಉದ್ಘಾಟನೆಯಲ್ಲಿ ಯಡಿಯೂರಪ್ಪ ಕೂಡಾ ಪಾಲ್ಗೊಂಡಿದ್ದರು. ಯಡಿಯೂರಪ್ಪ ಬರುವ ಮೊದಲೇ ಈಶ್ವರಪ್ಪ ತರಾತುರಿಯಲ್ಲಿ ಉದ್ಘಾಟಿಸಿ ಹೊರಟಿದ್ದಾರೆ. ಕೆಲವೇ ನಿಮಿಷಗಳಲ್ಲಿ ಅಲ್ಲಿಗೆ ಯಡಿಯೂರಪ್ಪ ಕೂಡಾ ಆಗಮಿಸಿದ್ದು, ಅವರನ್ನು ಭೆಟಿಯಾಗದೇ ಹೋಗಿದ್ದಾರೆ.
ಒಟ್ಟಿನಲ್ಲಿ ರಾಜ್ಯ ರಾಜಕೀಯದಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ, ರಾಜ್ಯದ ಪ್ರಭಾವಿ ಸಚಿವರೊಬ್ಬರ ತಲೆದಂಡಕ್ಕೆ ಕಾರಣವಾಗಿದೆ. ಈಶ್ವರಪ್ಪ ರಾಜೀನಾಮೆ ನೀಡಿದ ಬಳಿಕ ಮುಂದೇನು ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಸಂತೋಷ್ ಆತ್ಮಹತ್ಯೆ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಾ? ಪೊಲೀಸರು ಈ ಪ್ರಕರಣ ಬೇಗನೇ ಬೇಧಿಸುತ್ತಾರಾ? ಕಾದು ನೋಡಬೇಕಿದೆ.