ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಚುನಾವಣೆಗೆ ಸ್ಪರ್ಧಿಸಿ ಸೋಲಬೇಕು ಎಂಬುದೇ ನನ್ನ ಆಸೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (K.S. Eshwarappa) ಹೇಳಿದ್ದಾರೆ.
ಶಿವಮೊಗ್ಗದಲ್ಲಿ (Shivamogga) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ತುದಿ ಬುಡ ಇಲ್ಲದ ಬಸ್ ಪ್ರಯಾಣ ಮಾಡಿಕೊಂಡು ಹೋಗುತ್ತಿದ್ದಾರೆ. ವರುಣಾದಿಂದ (Varuna) ಬಾದಾಮಿ, ಬಾದಾಮಿಯಿಂದ (Badami) ಕೋಲಾರ, ಕೋಲಾರದಿಂದ ಕುಷ್ಟಗಿ, ಕುಷ್ಟಗಿಯಿಂದ ವರುಣಾಕ್ಕೆ ಓಡಾಡುತ್ತಿದ್ದಾರೆ ಎಂದು ಗೇಲಿ ಮಾಡಿದ್ದಾರೆ. ಇದನ್ನೂ ಓದಿ: ನಾಳೆ ಕರೆದಿದ್ದ ಸಾರಿಗೆ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್
ಮೊದಲು ಸಿದ್ದರಾಮಯ್ಯ ಹೈಕಮಾಂಡ್ ಎಲ್ಲಿ ಸೂಚಿಸಿದಲ್ಲಿ ನಿಲ್ಲುತ್ತೇನೆ ಎಂದಿದ್ದರು. ಈಗ ನನ್ನ ಹೆಂಡತಿ ಮಗ ಯಾವ ಕ್ಷೇತ್ರದಲ್ಲಿ ಹೇಳುತ್ತಾರೋ ಅಲ್ಲಿ ನಿಲ್ಲುತ್ತೇನೆ ಎನ್ನುತ್ತಿದ್ದಾರೆ. ಕ್ಷೇತ್ರವೇ ಸಿಗದ ವಿಪಕ್ಷ ನಾಯಕರು ಬೇರೆಯವರಿಗೆ ಹೇಗೆ ಟಿಕೆಟ್ ಕೊಡುತ್ತಾರೆ ಎಂದು ಕುಟುಕಿದ್ದಾರೆ.
ಸಿದ್ದರಾಮಯ್ಯ ಎಲ್ಲಿ ಸ್ಪರ್ಧಿಸಿದರೂ ಅವರ ಪಕ್ಷದವರೇ ಅವರನ್ನು ಸೋಲಿಸುತ್ತಾರೆ. ದಲಿತರು, ಹಿಂದುಳಿದವರು, ಒಕ್ಕಲಿಗರು, ಲಿಂಗಾಯತರು ಈ ಬಾರಿ ಅವರನ್ನು ಸೋಲಿಸುತ್ತಾರೆ. ಅವರ ಅಧಿಕಾರದ ಅವಧಿಯಲ್ಲಿ 20 ಮಂದಿ ಹಿಂದೂ ಯುವಕರ ಕಗ್ಗೊಲೆ ನಡೆದಿದೆ. ಹೀಗಾಗಿ ಮುಸ್ಲಿಮರು ಅವರನ್ನು ಬೆಂಬಲಿಸುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಸಿಎಂ ಆಗೋದು ಪಕ್ಕಾ : ತೇಜಸ್ವಿ ಸೂರ್ಯ