ಶಿವಮೊಗ್ಗ: ಸರ್ಕಾರದ ತೀರ್ಮಾನವನ್ನು ಕೋರ್ಟ್ ಎತ್ತಿಹಿಡಿದಿರುವುದಕ್ಕೆ ಸ್ವಾಗತ ಮಾಡುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
Advertisement
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಬ್ ಬಗ್ಗೆ ಕೋರ್ಟ್ ಕೊಟ್ಟಿರುವ ತೀರ್ಮಾನವನ್ನು ಸಂತೋಷದಿಂದ ಸ್ವಾಗತಿಸುತ್ತೇನೆ. ಗೊಂದಲ ನಿವಾರಣೆ ಆಗುವ ದಿಕ್ಕಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು. ಮಕ್ಶಳು ಶಾಲೆಗೆ ಹೋಗುವ ಬಗ್ಗೆ ಬುದ್ದಿ ವಾದ ಹೇಳಬೇಕು. ಶಿಕ್ಷಣ ಹಾಳಾಗಬಾರದು. ಕೋರ್ಟಿನ ತೀರ್ಪಿಗೆ ಬದ್ದವಾಗಬೇಕು. ಸರ್ಕಾರದ ತೀರ್ಮಾನವನ್ನು ಕೋರ್ಟ್ ಎತ್ತಿಹಿಡಿದಿರುವುದಕ್ಕೆ ಸ್ವಾಗತ ಮಾಡುತ್ತೇನೆ. ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ತೊಂದರೆ ಆಗಿದೆ ಎಂದು ಹೇಳುವವರು ಈಗ ಯೋಚನೆ ಮಾಡಬೇಕು. ಕೋರ್ಟ್ ಮಧ್ಯಂತರ ತೀರ್ಪು ನೀಡಿತ್ತು. ಆ ತೀರ್ಪನ್ನು ಫಾಲೋ ಮಾಡಿದ್ದರೆ ಈ ಗೊಂದಲ ಆಗುತ್ತಿರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಹಿಜಬ್ ಇಸ್ಲಾಂ ಧರ್ಮದ ಅಗತ್ಯದ ಆಚರಣೆ ಅಲ್ಲ: ಹೈಕೋರ್ಟ್ ಐತಿಹಾಸಿಕ ತೀರ್ಪು
Advertisement
ಸಿ.ಟಿ.ರವಿ ಹೇಳಿಕೆ ವಿಚಾರ: ಒಂದು ವರ್ಷಕ್ಕೆ ಚುನಾವಣೆ ಇದೆ. ಸಂಪುಟದಲ್ಲಿ 4 ಸ್ಥಾನ ಖಾಲಿ ಇದೆ. ಕೇಂದ್ರದ ನಾಯಕರು ಬಹಳ ಬುದ್ದಿವಂತರಾಗಿದ್ದಾರೆ. ಅದಕ್ಕೆ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶವೇ ಸಾಕ್ಷಿ. ಸಂಪುಟ ವಿಸ್ತರಣೆ ಬಗ್ಗೆ ಕೇಂದ್ರದ ನಾಯಕರು ನಿರ್ಧರಿಸುತ್ತಾರೆ. ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ಹೇಳುವುದು ತಪ್ಪಲ್ಲ. ಕೇಂದ್ರದ ನಾಯಕರ ತೀರ್ಮಾನಕ್ಕೆ ಬದ್ದ. ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಕ್ಕಳಿಗೆ ವಿದ್ಯೆಗಿಂತ ಮತ್ತೊಂದಿಲ್ಲ, ನ್ಯಾಯಾಲಯ ಕೊಟ್ಟಿರುವ ತೀರ್ಪನ್ನು ಪಾಲಿಸಬೇಕು: ಬೊಮ್ಮಾಯಿ