ಬಳ್ಳಾರಿ: ಚುನಾವಣೆ ಒಳಗೆ ಮಾಜಿ ಸಿಎಂ ಸಿದ್ದರಾಮಯ್ಯ ಜಾತಿಗಣತಿ ವರದಿ ಬಿಡುಗಡೆ ಮಾಡ್ತೀನಿ ಅಂದಿದ್ರು. ಆದ್ರೆ ಈಗ ಕೇಳಿದ್ರೆ ಕಾಂತರಾಜ್ ಸಮಯಕ್ಕೆ ಸರಿಯಾಗಿ ವರದಿ ಕೊಡಲಿಲ್ಲ ಅಂತ ಸುಳ್ಳು ಹೇಳುತ್ತಿದ್ದಾರೆ. ಜಾತಿ ಗಣತಿಯನ್ನು ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರು ಸೇರಿ ಸಾಯಿಸಿ ಹೂತಾಕಿದ್ದಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹರಿಹಾಯ್ದರು.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿಯೂ ಗಣತಿಯನ್ನು ಬಿಡುಗಡೆ ಮಾಡಲಿಲ್ಲ. ಕೇಳಿದ್ರೆ ಕುಮಾರಸ್ವಾಮಿ ಬೇಡ ಅಂದ್ರು ಅಂತಾರೆ. ಕುಮಾರಸ್ವಾಮಿ ಕೇಳಿದ್ರೇ ಸಿದ್ದರಾಮಯ್ಯ ನನ್ನನ್ನು ಕೇಳಿಯೇ ಇಲ್ಲ ಎನ್ನುತ್ತಾರೆ. ಕಾಂಗ್ರೆಸ್ಸಿಗೆ ವರದಿ ಮೇಲೆ ನಂಬಿಕೆ ಇದ್ದಿದ್ರೆ ಅನ್ಯಾಯ ಮಾಡ್ತಿರಲಿಲ್ಲ. ಅಧಿಕಾರಕ್ಕಾಗಿ ಜಾತಿಗಳ ಹೆಸರು ಬಳಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ:ಎತ್ತಿನಹೊಳೆ ಯೋಜನೆ ಜಾರಿ ವಿಚಾರದಲ್ಲಿ ಸರ್ಕಾರಕ್ಕೆ ಬದ್ಧತೆಯೇ ಇಲ್ಲ: ಪರಮೇಶ್ವರ್
ಸೋಲಿನ ಭೀತಿಯಿಂದ ಕಾಂಗ್ರೆಸ್ ವರದಿ ಬಿಡುಗಡೆ ಮಾಡಲಿಲ್ಲ. ಈಗ ಬಿಜೆಪಿ ದಲಿತ ವಿರೋಧಿ ಎನ್ನುತ್ತಿದ್ದಾರೆ. ಇದೀಗ ಡಿಕೆಶಿ ಯಾರು ಜಾತಿ ಗಣತಿ ಬಗ್ಗೆ ಮಾತನಾಡಬಾರದು ಎಂದು ಹೇಳಿದ್ದಾರೆ. ನಮ್ಮದೇನಾದ್ರು ತಪ್ಪಿದ್ರೇ ಹೇಳಿ ಕಾಂಗ್ರೆಸ್ ನವರೇ ನೀವೂ ಜಾತಿಗಣತಿಗೆ ಬೆಲೆ ಇಲ್ಲದಂತೆ ಮಾಡಿದ್ದಾರೆ ಎಂದರು. ಇದನ್ನೂ ಓದಿ:ಎಲ್ಲರೂ ಸೇರಿ ಕೆಲಸ ಮಾಡಿದಾಗ ಯಾವುದೂ ಅಸಾಧ್ಯವಲ್ಲ: ಸಿಎಂ ಬೊಮ್ಮಾಯಿ
ದಲಿತರು ಹಿಂದುಳಿದವರನ್ನು ಇವರ ಆಸ್ತಿಯಂತೆ ಬಳಸಿಕೊಂಡರು. ಸಮಿತಿಗೆ ಸೆಕ್ರೆಟರಿ, ಮೆಂಬರ್ ನೇಮಕ ಮಾಡಿರಲಿಲ್ಲ. ಜಾತಿಗಣತಿಗೆ ವರದಿಗೆ ಸಿದ್ದರಾಮಯ್ಯ ಸಹಿ ಸಹ ಮಾಡಲಿಲ್ಲ. ಈ ಬಗ್ಗೆ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಮಾಹಿತಿ ನೀಡಿದ್ದಾರೆ. ವರದಿ ನೀಡಿದ ಬಳಿಕ ಜಾರಿ ಬಗ್ಗೆ ಚಿಂತನೆ ಮಾಡ್ತೇವೆ. ಈ ವರದಿ ಸಿದ್ದಪಡಿಸೋಕೆ 180 ಕೋಟಿ ವೆಚ್ಚ ಮಾಡಿದ್ದಾರೆ. ಆದ್ರೇ ಈವರೆಗೂ ವರದಿ ಸಿದ್ದವಾಗಿಲ್ಲ. ಅದಕ್ಕೆ ಸಿದ್ದರಾಮಯ್ಯ ಕಾರಣ ಎಂದು ಹೇಳಿದರು.
ಸಿದ್ದರಾಮಯ್ಯ ಡಿಕೆಶಿ ಅಧಿಕಾರಕ್ಕಾಗಿ ಕಚ್ಚಾಡ್ತಿದ್ದಾರೆ. ಅಧಿಕಾರ ಬೇಕು, ಮುಖ್ಯಮಂತ್ರಿ ಸ್ಥಾನಬೇಕು, ಆದ್ರೇ ವರದಿ ಬಿಡುಗಡೆ ಮಾತ್ರ ಮಾಡಲಿಲ್ಲ. ಇನ್ನು ಸದ್ಯಕ್ಕೆ ಮುಸ್ಲಿಂ ಮಾತ್ರ ಕಾಂಗ್ರೆಸ್ ಜೊತೆ ಇದ್ದಾರೆ. ಮುಂದೆ ಅವರು ನಮ್ಮ ಜೊತೆಗೆ ಬರುತ್ತಾರೆ. ಜಮೀರ್, ರೋಷನ್ ಎಷ್ಟು ಆಟವಾಡ್ತಿದ್ದಾರೆ ಗೋತ್ತಿದೆ. ಅದಕ್ಕೆ ರೋಷನ್ ಬೇಗ್ ಅವರನ್ನು ಬಿಜೆಪಿ ಹತ್ತಿರ ಸೇರಿಸಿಕೊಂಡಿಲ್ಲ. ಕುರುಬರಷ್ಟೇ ಅಲ್ಲ ಎಲ್ಲರೂ ಮೀಸಲಾತಿ ಕೇಳ್ತಿದ್ದಾರೆ. ಈ ಬಗ್ಗೆ ಚರ್ಚೆ ಮಾಡಿ ಕೇಂದ್ರಕ್ಕೆ ಕಳುಹಿಸುತ್ತೇವೆ ಎಂದರು.